ಕರ್ಚಿಕಾಯಿ, ಕರ‍್ದಂಟು, ರವೆ, ಬೇಸನ್, ಶೇಂಗಾ, ಎಳ್ಳು ಉಂಡಿ, ಚಕ್ಲಿಗಳನ್ನು ಗಂಗಾಳ್‌ದಾಗ್ ತುಂಬಿ ನನ್ನ ಮುಂದೆ ತಂದಿಟ್ಟ ಹೆಂಡ್ತಿ, ‘ಪಂಚಮಿ ತಿಂಡಿ ತಿಂದು ಮಜಾ ಮಾಡ್ರಿ. ನಾ ನಾಗಪ್ಪಗ್ ಹಾಲ್ ಎರ‍್ದು ಬರ್ತೀನಿ’ ಅಂತ ಹೇಳಿ ಮನಿಯಿಂದ ಹೊರಗ್ ಹೋಗುತ್ತಿದ್ದಂತೆ, ಎದುರಿನ ತಟ್ಟೆಯಲ್ಲಿನ ಥರಾವರಿ ತಿನಿಸು ನೋಡಿ ಬಾಯಲ್ಲಿ ನೀರೂರಿತು. ಮಾಯಾಬಜಾರ್ ಚಿತ್ರದ ‘ಆಹಾ... ವಿಚಿತ್ರ ಭಕ್ಷ್ಯಗಳಿವು... ಆಹಹಹಾ ಆಹಹಹಾ... ಓಹೋರೆ ಗಾರಿಗೆಗಳೆ... ಭಲೀರೆ ಲಾಡು ಸಾಲು... ಇವೆಲ್ಲ ನನ್ನ ಪಾಲು ...’ ಹಾಡು ಗುನುಗುನಿಸುತ್ತ ಒಂದೊಂದೆ ಉಂಡಿ ಖಾಲಿ ಮಾಡಲು ಸುರು ಹಚ್ಚಿದೆ. ಅದೇ ಹೊತ್ತಿಗೆ ಪ್ರಭ್ಯಾ ಬಾಗಿಲ್‌ದಾಗ್ ಪ್ರತ್ಯಕ್ಷನಾದ.

‘ಪಂಚಮಿ ಹಬ್ಬ ಬಂತು ಸನಿಯಾಕ, ಅಣ್ಣ ಬರಲಿಲ್ಲ ಇನ್ನೂ ಕರಿಲಾಕ’ ಅನ್ನು ಹಂಗ್, ಜೋಕಾಲಿ ಆಡು ಟೈಮ್‌ಆಯ್ತು, ಪ್ರಭ್ಯಾ ಬರಲಿಲ್ಲ ಇನ್ನೂ ಕರ‍್ಯಾಕ್ ಅಂತ ನಿನ್ನ ನೆನಪ್ ಮಾಡ್ಕೊತಿದ್ದೆ. ಬಾರಪಾ, ಸರಿಯಾದ ಟೈಮಿಗೆ ಬಂದಿ ನೋಡ್. ಉಂಡಿ ತಿನ್ನಾಕ್ ಕೈ ಹಾಕ್’ ಎಂದೆ. ಸೋಫಾ ಮ್ಯಾಗ್ ಕುಂತು ಸುಧಾರಿಸಿಕೊಂಡ ಪ್ರಭ್ಯಾ, ‘ಒಗಿ ಒಂದ್ ಉಂಡಿ ಇಕಾಡೆ’ ಅಂದ.

‘ಏಯ್ ಮಳ್ಳ, ಸಂತ್ರಸ್ತರತ್ತ ಬಿಸ್ಕಿಟ್ ಒಗ್ಯಾವ್ರ ಬುದ್ಧಿಗೇಡಿಗಳ ಸಾಲಿಗೆ ನನ್ನನ್ನೂ ಸೇರಸ್ತಿ ಏನ್...’ ಎಂದು ದಬಾಯಿಸಿದೆ.

‘ನಮ್ಮ ಮುಖೇಡಿ ಮುಖಂಡರು ಎಂತಾ ನೀರಿನವ್ರು ಅಂತ ಈಗ ಮತ್ತೊಮ್ಮೆ ಸಾಬೀತಾತು ನೋಡ್. ನಾ ಏನರ್‌ಅಲ್ಲಿ ಇದ್ದಿದ್ರೆ, ಮಂತ್ರಿ ಆಗಿದ್ರ ಮುಂದ್ ನೋಡಿದ್ರಾತು ಬಿಡು ಅಂತ ಅದೇ ಬಿಸ್ಕಿಟ್ ಪುಡಕಿಯನ್ನ ಅವ್ನ ಮುಖಕ್ಕ ಎಸೀತಿದ್ದೆ’ ಎಂದು ಪ್ರಭ್ಯಾ ಸಿಟ್ ಮಾಡ್ಕೊಂಡ.

‘ಏನ್ ಮಾಡೋದೊ, ಕೆಲವ್ರ ಹೊಟ್ಯಾಗಿನ್ ಸಿಟ್ ರಟ್ಯಾಗ್ ಇರುದಿಲ್ಲ. ವೋಟ್ ಕೇಳಾಕ್ ಬಂದಾಗ್ ನಾಯಿ ಓಡಿಸಿದ್ಹಂಗ್ ಹಚ್ಯಾ, ಹಚ್ಯಾ ಅಂತ ಬೈದು ಬಿಸ್ಕಿಟ್ ಒಗದ್ ಕಳಿಸಿದ್ರ ಇಂಥಾ ತಿರುಬೋಕಿಗಳಿಗೆ ಬುದ್ಧಿ ಬರ್ತದ. ಸಿಟ್ ಬಂದ್ರ ಹಿಟ್ ಮುಕ್ಕು ಅಂತಾರ. ಪಂಚಮಿ ಉಂಡಿ, ಕರದಂಟು ತಿನ್ನು ಸಿಟ್ ಕಡಿಮಿ ಆಗ್ತದ’ ಎಂದು ಸಮಾಧಾನಿಸಿದೆ.

‘ಜಲ್ದಿ ತಿಂದ್ ಮುಗ್ಸು. ಜೋಕಾಲಿ ಆಡಾಕ್ ಹೋಗೂಣು ನಡಿ’ ಎಂದ. ಇಬ್ರೂ ಮನೆಯಿಂದ ಹೊರ ಬಿದ್ದೆವು. ಸ್ವಲ್ಪ ದೂರ ಹೋಗುದ್ರಾಗ, ಚಡ್ಡಿ ಗೆಳೆಯ ಬಂದೆನವಾಜ್ (ಬಂದ್ಯಾ) ಎದುರಾದ.

‘ಕ್ಯಾಬಾ, ಈದ್ ಜೋರ್ ಹೈಕ್ಯಾ. ಮುಬಾರಕಬಾ’ ಅಂತ ಹೇಳ್ಕೋತ್ ಪ್ರಭ್ಯಾ ಅವ್ನ ತಬ್ಕೊಳ್ಳಾಕ್ ಹೋದ. ‘ಏಯ್, ಸ್ವಲ್ಪ ತಡಿ ಮಾರಾಯಾ. ತಬ್ಕೊಳ್ಳೋದs ಈಗ ದೊಡ್ಡ ಸುದ್ದಿ ಆಗಾಕತ್ತದ. ಅದ್ಕ ಬ್ಯಾರೆ, ಬ್ಯಾರೆ ಬಣ್ಣಾನೂ ಬಳ್ಯಾಕತ್ತಾರ್. ಭಾಳ್ ಹುಷಾರ್ ಆಗಿರಬೇಕ್’ ಎಂದೆ. ‘ಆಡ್ಕೊಳವ್ರು ಆಡ್ಕೊಳ್ಳಿ ಬಿಡು. ಸಂಜೀಮುಂದ್ ಬಕ್ರೀದ್ ಹಬ್ಬದ ಬಿರಿಯಾನಿ ತಿನ್ನಾಕ್ ಬರ್‍ರೆಪಾ’ ಅಂದ ಬಂದ್ಯಾ.

‘ಹೌದ್ ನೋಡ್. ಮೋದಿ ಸಾಹೇಬ್ರು, ನವಾಜ್ ಷರೀಫ್ ಕರೆಸಿದ್ರ ಇಂದ್ರ ಚಂದ್ರ ಅಂತ ಭಟ್ಟಂಗಿಗಳು ಹೊಗಳ್‌ತಾರ್. ಅದೇ ಸಿದ್ದು, ಇಮ್ರಾನ್‌ಖಾನ್ ಪ್ರಮಾಣ ವಚನ ಸಮಾರಂಭಕ್ಕ ಹೋದಾಗ ಸೇನಾ ಮುಖ್ಯಸ್ಥ ಇವರನ್ನ ಅಪ್ಪಿಕೊಂಡ್ರ ದೇಶದ್ರೋಹಿ ಪಟ್ಟ ಕಟ್ತಾರ್. ಮೋದಿ, ಹೇಳ್ದ ಕೇಳ್ದ ಪಾಕಿಸ್ತಾನಕ್ಕ ಹೋಗಿ ಮದುವೆ ಮನ್ಯಾಗ್ ಉಂಡ್ ಬರ್ತಾರ್. ಯಾಕ್ ಹೋಗಿದ್ದೆ ಅಂತಾನೂ ಹೇಳೂದಿಲ್ಲ’ ಎಂದು ನಾನೂ ಅವನ ಮಾತಿಗೆ ಸೋ ಎಂದೆ.

‘ನಾವ್ ಸ್ವಲ್ಪ ಜೋಕಾಲಿ ಆಡಿ ಬರ್ತೀವಿ’ ಅಂತ ಪ್ರಭ್ಯಾ ಅವ್ನ ಸಾಗ್ ಹಾಕ್ದಾ. ದಾರ‍್ಯಾಗ್ ಎದುರಾದ ದೊಡ್ಡ ಮರಕ್ಕ ಕಟ್ಟಿದ್ದ ಜೋಕಾಲಿ ಆಡಾಕ್ ಜಗ್ಗಿ ಮಂದಿ ಸೇರಿದ್ರು. ಇಳಕಲ್ ಸೀರಿ ಉಟ್ಕೊಂಡಿದ್ದ ಮೀನಿ, ಶಂಕ್ರಿ, ಸೊಂಟಕ್ಕ ಸೆರಗ್ ಸಿಗಿಸಿ, ಎದುರಾ ಬದುರು ನಿಂತ್ಕೊಂಡ್ ಜೋರಾಗಿ ಜೀಕುತ್ತಿದ್ದುದನ್ನು ನೋಡಿ ಕೇಕೆ, ಶಿಳ್ಳೆನೂ ಜೋರಾಗಿಯೇ ಕೇಳಿ ಬರಾಕತ್ತಿತ್ತು.

ನಾಗರ ಪಂಚಮಿ ನಾಡಿಗೆ ದೊಡ್ಡದು ಅನ್ನು ಹಂಗ, ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಹೆಂಗಳೆಯರನ್ನು ಕಂಡು ಪ್ರಭ್ಯಾ, ‘ನಮ್ಮ ಅಳ್ಯಾಗ್ ಹೆಣ್ಣಗೋಳ್ ಸಿಗವಲ್ರು. ಇವರಾಗ್ ಯಾರರ್ ಅಂವ್ಗ ಜೋಡ್ ಆಕ್ತಾರೇನ್ ನೋಡೊ’ ಎಂದ.

‘ಮಳ್ಳ, ಮೋದಿಗೆ ಹೆಣ್ ನೋಡ್ತೀನಿ ಅಂತ ಡೊನಾಲ್ಡ್ ಟ್ರಂಪ್ ತಮಾಷೆ ಮಾಡ್ಯಾನ್. ರಾಹುಲ್ ಬಾಬಾ ಅಂತೂ, ಸದ್ಯಕ್ಕೆ ಕಾಂಗ್ರೆಸ್ ಪಕ್ಷಕ್ಕ ಮದ್ವಿ ಮಾಡ್ಕೊಂಡೀನಿ. ಮದ್ವಿ ಗಿದ್ವಿ ಯೋಚ್ನಿ ಈಗಿಲ್ಲ ಅಂತ್ ಹೇಳ್ಯಾನ್. ‘ಪಪ್ಪು’ಗ ಮತ್ತ ನಿನ್ನ ಅಳ್ಯಾಗ್ ಹೆಣ್ ನೋಡಾಕ್ ಡೊನಾಲ್ಡ್ ಟ್ರಂಪ್‌ಗ ಹೇಳಿದ್ರ ಆತು ಬಿಡು’ ಎಂದೆ ತಣ್ಣಗೆ. ಢಂ ಅಂತ ಪಟಾಕಿ ಸದ್ದಿಗೆ ಬೆಚ್ಚಿ ಬಿದ್ದವ್ರಂಗ್ ಪ್ರಭ್ಯಾ, ‘ಹ್ಞಾ, ಏನಂದಿ, ತ್ಯಾಂಪಣ್ಣಾ ಏನ್ ಟ್ರಂಪಣ್ಣಾ. ವಿಶ್ವದ ದೊಡ್ಡಣ್ಣ ಯಾವಾಗಿನಿಂದ್ ಮದ್ವಿ ದಲ್ಲಾಳಿ ದಂಧೆ ಶುರು ಮಾಡಿದ್ನಪಾ. ಕೆಲ್ಸಾ ಬೊಗ್ಸಿ ಇಲ್ಲೇನ್ ಅಂವ್ಗ’ ಎಂದ.

‘ಹ್ವಾದ ವರ್ಷ ಮೋದಿ ಅಮೆರಿಕೆಗೆ ಭೆಟ್ಟಿ ಕೊಟ್ಟಾಗ್, ಮೋದಿ ಅವರ ಸಂಸಾರದ ಬಗ್ಗೆ ಕೇಳಿದ್ನಂತ. ಭಾಳ್ ಹಿಂದನ್ ಮದ್ವಿ ಆಗಿದ್ದ ಮೋದಿ, ಹೆಂಡ್ತಿನ ಬಿಟ್ಟಾನ್’ ಅಂತ ಸಹಾಯಕರು ಹೇಳ್ದಾಗ್, ‘ಮೋದಿ ಸಾಹೇಬ್ರಗ ನಾನs ಹೊಸ ಹೆಣ್ ನೋಡ್ತೀನಿ’ ಅಂತ ಟ್ರಂಪ್ ತಮಾಷೆ ಮಾಡಿದ್ದು ಭಾರಿ ಸುದ್ದಿ ಆಗೇದ್ ನೋಡ್ ಎಂದೆ.

ಏಕಾಏಕಿ ಪ್ರಭ್ಯಾಗ್ ‘ಆಹಾ ನನ್ನ ಮದುವೆಯಂತೆ.. ಹಾಡ್ ನೆನಪ್ ಆತ್. ‘ಆಹಾ ಇವ್ರ ಮದುವೆಯಂತೆ, ಓಹೋ ಇವ್ರ ಮದುವೆಯಂತೆ..., ನಿಮಗೂ ನನಗೂ ಏನಂತೆ ಲೋಕವೆಲ್ಲ ಗುಲ್ಲಂತೆ ಟಾಂ ಟಾಂ ಟಾಂ’ ಅಂತ ಗುನಗುನಿಸುತ್ತಾ ಮನಿ ಕಡೆ ಹೊಂಟಾ. ನಾನೂ ಅರ್ಧಕ್ಕೆ ಬಿಟ್ಟು ಬಂದ ಚಕ್ಕಲಿ, ಉಂಡಿ ನೆನಪಲ್ಲಿ ಮನೆ ಕಡೆಗೆ ಹೆಜ್ಜೆ ಹಾಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.