ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖ್ಯಾತ ಹಿಂದೂಸ್ತಾನಿ ಗಾಯಕಿ ಪ್ರಭಾ ಅತ್ರೆ ನಿಧನ

Published 13 ಜನವರಿ 2024, 6:27 IST
Last Updated 13 ಜನವರಿ 2024, 6:27 IST
ಅಕ್ಷರ ಗಾತ್ರ

ಮುಂಬೈ: ಹಿಂದೂಸ್ತಾನಿ ಸಂಗೀತದ ಮೇರು ಗಾಯಕಿ ಡಾ.ಪ್ರಭಾ ಅತ್ರೆ (92) ಅವರು ಪುಣೆಯಲ್ಲಿ ಶನಿವಾರ ಹೃದಯಾಘಾತದಿಂದ ನಿಧನರಾದರು.

ಪ್ರಭಾ ಅವರು ಶನಿವಾರ ನಸುಕಿನಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದರು. ಕೂಡಲೇ ಅವರನ್ನು ದೀನನಾಥ ಮಂಗೇಶ್ಕರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ, ಅವರು ನಿಧನರಾಗಿದ್ದಾರೆ ಎಂದು ಘೋಷಿಸಲಾಯಿತು.

ಬಹುಮುಖಿ ವ್ಯಕ್ತಿತ್ವದ ಪ್ರಭಾ ಅವರು ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ದಶಕಗಳಿಂದ ಕಿರಾಣಾ ಘರಾಣಾ ಗಾಯನ ಶೈಲಿಯನ್ನು ಪ್ರತಿನಿಧಿಸಿದ್ದರು. 1932ರ ಸೆಪ್ಟೆಂಬರ್‌ 13ರಂದು ಜನಿಸಿದ್ದ ಪ್ರಭಾ ಅವರು ಸಂಗೀತ ಕ್ಷೇತ್ರದಲ್ಲಿ ಮಾತ್ರವಲ್ಲದೆ ಶಿಕ್ಷಣತಜ್ಞೆಯಾಗಿಯೂ ಹೆಸರಾಗಿದ್ದರು. ಕರ್ನಾಟಕದೊಂದಿಗೆ, ವಿಶೇಷವಾಗಿ ಹುಬ್ಬಳ್ಳಿ–ಧಾರವಾಡದೊಂದಿಗೆ ಅವರು ವಿಶೇಷ ನಂಟನ್ನು ಹೊಂದಿದ್ದರು.

ಡಾ. ಅತ್ರೆಯವರಿಗೆ ಸಂದ ಸಮ್ಮಾನಗಳಿಗೆ ಲೆಕ್ಕವಿಲ್ಲ. ಮೂರೂ ಪ್ರತಿಷ್ಠಿತ ಪದ್ಮ (1990–ಪದ್ಮಶ್ರೀ, 2002–ಪದ್ಮಭೂಷಣ, 2022–ಪದ್ಮವಿಭೂಷಣ) ಪ್ರಶಸ್ತಿಗಳನ್ನು ಪಡೆದ ಕಲಾವಿದೆ ಅವರು. ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯೂ ಅವರಿಗೆ ಸಂದಿತ್ತು. ಮಧ್ಯಪ್ರದೇಶ ಸರ್ಕಾರದ ಕಾಳಿದಾಸ ಸಮ್ಮಾನ್; ಮಹಾರಾಷ್ಟ್ರ ಸರ್ಕಾರದ ಪಂಡಿತ್ ಭೀಮಸೇನ ಜೋಷಿ ಶಾಸ್ತ್ರೀಯ ಸಂಗೀತ ಗೌರವ ಪುರಸ್ಕಾರ; ಕರ್ನಾಟಕ ಸರ್ಕಾರದ ಮಲ್ಲಿಕಾರ್ಜುನ ಮನ್ಸೂರ್ ಸಮ್ಮಾನ್ ಹಾಗೂ ಸ್ವರಸಮ್ರಾಟ್‌ ಪಂ. ಬಸವರಾಜ ರಾಗಜುರು ಸಮ್ಮಾನ್; ಗುಜರಾತ್ ಸರ್ಕಾರದ ತಾನಾ-ರೀರೀ ಸಂಗೀತ್ ಸಮ್ಮಾನ್ ಅವರು ಪಡೆದ ಪ್ರಶಸ್ತಿಗಳಲ್ಲಿ ಪ್ರಮುಖವಾದುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT