ಬಾಂಗ್ಲಾದೇಶದ ಬಂಗಾಳ ಶಾಸ್ತ್ರೀಯ ಸಂಗೀತ ಸಮ್ಮೇಳನದಲ್ಲಿ ಪ್ರತಿ ವರ್ಷ ತಪ್ಪದೇ ಹಾಡುತ್ತಾರೆ. ಹಲವು ದೇಶಗಳ ಪ್ರವಾಸ ಮಾಡಿ ನಾದಸುಧೆ ಹರಿಸಿದ್ದಾರೆ. ಮಲ್ಲಿಕಾರ್ಜುನ ಮನ್ಸೂರ ರಾಷ್ಟ್ರೀಯ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಡಾ.ವಸಂತರಾವ್ ದೇಶಪಾಂಡೆ ಯುವ ಕಲಾಕಾರ ಪುರಸ್ಕಾರ, ವಿದ್ಯಾಸಾಗರ ಪ್ರಶಸ್ತಿ, ಯುವ ಗಾಯಕ ಪುರಸ್ಕಾರ ಅವರಿಗೆ ಸಂದಿವೆ. ಇಂತಹ ಪಂ.ಕುಮಾರ್ ಮರಡೂರ ಅವರ ಹಿತಾನುಭವನ ಈ ವಾರದ ‘ಜಸ್ಟ್ ಮ್ಯೂಸಿಕ್’ ಸರಣಿಯಲ್ಲಿದೆ.