ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಡಿನಲ್ಲಿ ಮೂಡಿಬಂದ ‘ಅಪ್ಪ ನೀನು ಏಕೆ ದೂರ’

ಸಂಗೀತಧಾಮ ಸಂಸ್ಥೆಯ ಹಾಡಿನ ವಿಡಿಯೋ ಬಿಡುಗಡೆ
Last Updated 21 ಜೂನ್ 2021, 12:19 IST
ಅಕ್ಷರ ಗಾತ್ರ

ಬೆಂಗಳೂರಿನ ಸಂಗೀತಧಾಮ ಸಂಸ್ಥೆಯು ವಿಶ್ವ ಅಪ್ಪಂದಿರ ದಿನದ ಪ್ರಯುಕ್ತ ವಿಶೇಷ ಹಾಡನ್ನು ಬಿಡುಗಡೆ ಮಾಡಿದೆ. ಖ್ಯಾತ ಗಾಯಕ ಮೃತ್ಯುಂಜಯ ದೊಡ್ಡವಾಡ ಸಂಗೀತ ನಿರ್ದೇಶನದಲ್ಲಿ ಈ ಹಾಡು ಮೂಡಿ ಬಂದಿದೆ.

‘ಅಪ್ಪ ನೀನು ಏಕೆ ದೂರ’ ಎಂಬುದು ಹಾಡಿನ ಆಲ್ಬಂನ ಶೀರ್ಷಿಕೆ. ಜೂನ್‌ 19ರಂದು ವರ್ಚುವಲ್ ವೇದಿಕೆಯಲ್ಲಿ ಈ ಹಾಡನ್ನು ಬಿಡುಗಡೆಗೊಳಿಸಲಾಯಿತು.

ಹಾಡಿಗೆ ಶ್ರೀಶೈಲ ಮಾದಣ್ಣ ಅವರು ಸಾಹಿತ್ಯ ಬರೆದಿದ್ದಾರೆ. ಚಲನಚಿತ್ರ ಹಿನ್ನೆಲೆ ಗಾಯಕಿ ವರ್ಷಾ ಬಿ. ಸುರೇಶ್‌ ಹಾಡಿದ್ದಾರೆ. ಹಾಡಿನ ಆಲ್ಬಂನಲ್ಲಿ ಪ್ರಮುಖ ಗಣ್ಯರ ಅಪ್ಪ– ಮಕ್ಕಳ ಸಂಬಂಧದ ಗಟ್ಟಿತನವನ್ನು ಬಿಂಂಬಿಸುವ ದೃಶ್ಯಾವಳಿಗಳೂ ಇವೆ.

ಕವಿ ಬಿ.ಆರ್‌. ಲಕ್ಷ್ಮಣರಾವ್‌, ನಸುಕು ಡಾಟ್‌ಕಾಂ ಸಂಪಾದಕ ವಿಜಯ್‌ ದಾರಿಹೋಕ ಅವರು ಹಾಡನ್ನು ಬಿಡುಗಡೆಗೊಳಿಸಿದರು.

ಬಳಿಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನುಡಿ ನಮನ ಕಾರ್ಯಕ್ರಮ ನಡೆಯಿತು. ಇತ್ತೀಚೆಗೆ ಅಗಲಿದ ಸಾಹಿತಿಗಳಾದ ಡಾ.ಸಿ.ಸಿದ್ದಲಿಂಗಯ್ಯ, ಜರಗನಹಳ್ಳಿ ಶಿವಶಂಕರ್‌, ಡಾ.ಕೋ.ವೆಂ ರಾಮಕೃಷ್ಣಗೌಡ ಅವರಿಗೆ ನುಡಿನಮನ ಸಲ್ಲಿಸಲಾಯಿತು. ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ. ಸೋಮಶೇಖರ್‌, ಗಾಯಕಿ ಸಂಗೀತಾ ಕಟ್ಟಿ, ಪ್ರೊ.ಎಸ್‌.ಜಿ.ಸಿದ್ದರಾಮಯ್ಯ, ಕವಿ ಡಾ.ಕಾ.ವೆಂ.ಶ್ರೀನಿವಾಸಮೂರ್ತಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT