ವಾರಾಂತ್ಯದಲ್ಲಿ ಯುವಜನರ ಮನತಣಿಸಲು ಡಿಜೆ, ಬ್ಯಾಂಡ್ ಸಂಗೀತಗಳು ಆಯೋಜನೆಗೊಳ್ಳುತ್ತಿರುತ್ತವೆ. ನಗರದ ಜನರ ಆಯಾಸ ಕಳೆಯುವ ಹಲವು ಚಟುವಟಿಕೆಗಳಲ್ಲಿ ಇದೂ ಒಂದು. ಆದರೆ, ವಾರದ ನಡುವೆಯೇ ಇಲ್ಲೊಂದು ಡಿಜೆ ರಾತ್ರಿ ಬಾಲಿವುಡ್ ಸಂಗೀತಪ್ರಿಯರನ್ನು ಸ್ವಾಗತಿಸಲಿದೆ.

ಡಿಕೆ ವಿಪುಲ್ ಖುರಾನಾ ಅವರ ‘ಬಾಲಿವುಡ್ ಅಂಡ್ ಬಿಯಾಂಡ್’ ಹೆಸರಿನ ಸಂಗೀತ ಕಾರ್ಯಕ್ರಮವನ್ನು ಇದೇ 13ರಂದು(ಬುಧವಾರ) ಕೋರಮಂಗಲದ 5ನೇ ಬ್ಲಾಕ್‌ನಲ್ಲಿರುವ ‘ಗಿಲ್ಲೀಸ್ 104 ಬಾರ್’ನಲ್ಲಿ ಆಯೋಜಿಸಲಾಗಿದೆ. ದೆಹಲಿಯ ನೈಟ್ ಕ್ಲಬ್‌ಗಳಲ್ಲಿ ಸಂಗೀತಗಾರರಾಗಿ ವೃತ್ತಿ ಆರಂಭಿಸಿದ ಇವರು ನಂತರ ಕಾರ್ಪೊರೇಟ್ ಕಾರ್ಯಕ್ರಮಗಳಲ್ಲಿ ಅವಕಾಶ ಪಡೆದು ಖ್ಯಾತಿ ಗಳಿಸಿದವರು.

ಮೈಕ್ರೋಸಾಫ್ಟ್ ಇಂಡಿಯಾ, ಎಚ್‌ಪಿ ಇಂಡಿಯಾ, ಸ್ಯಾಮ್‌ಸಂಗ್ ಇಂಡಿಯಾ, ಟ್ರಿಡೆಂಟ್ ಗ್ರೂಪ್, ವಡಾಫೋನ್, ಸೀಮನ್ಸ್, ಏರ್‌ಸೆಲ್, ಸಿಸ್ಕೋ ಇಂಡಿಯಾ, ಕೆವಿನ್ ಇಂಡಿಯಾ, ಫೋಕ್ಸ್‌ವಾಗನ್, ಮ್ಯಾನ್‌ಕೈಂಡ್ ಗ್ರೂಪ್, ಕೋಕಾ ಕೋಲಾ ಇಂಡಿಯಾ ಮುಂತಾದ ಬೃಹತ್ ಕಂಪೆನಿಗಳು ಆಯೋಜಿಸಿರುವ ಕಾರ್ಯಕ್ರಮಗಳಲ್ಲಿ ವಿಪುಲ್ ಹಾಡಿ ರಂಜಿಸಿದ್ದಾರೆ.

ವಿಶಾಲ್ ಶೇಖರ್, ದಲೆರ್ ಮೆಹೆಂದಿ, ಮಿಕಾ ಸಿಂಗ್, ಮಲೈಕಾ ಅರೋರಾ ಖಾನ್, ಜಾಕ್ವೆಲಿನ್, ಫೆರ್ನಾಂಡಿಸ್, ರಿಷಿತಾ ಭಟ್, ಝರೀನ್ ಖಾನ್ ಮುಂತಾದವರ ಜೊತೆಗೂ ಕಾರ್ಯಕ್ರಮ ನೀಡಿದ್ದಾರೆ.

ಬುಧವಾರ ರಾತ್ರಿ 8ರಿಂದ ನಸುಕಿನವರೆಗೂ ವಿಪುಲ್ ಅವರು ಬಾಲಿವುಡ್‌ನ ಅಪರೂಪದ ಹಾಡುಗಳನ್ನು ಹಾಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.