"ಛೇ ! ರಾತ್ರಿಯಿಡೀ ನಿದ್ದೆಯಿಲ್ಲ
ಈ ಹಾಳಾದ ಬೆಳಕಿನಿಂದ "
ಹೆದ್ದಾರಿಯ ಪಕ್ಕದ ಮರದ ಮೇಲಿದ್ದ
ಹೆಣ್ಣು ಹಕ್ಕಿಯೊಂದು
ಉರಿಯುತ್ತಿದ್ದ ಕಣ್ಣುಗಳನ್ನು ಪಿಳುಕಿಸುತ್ತಾ ಹೇಳಿತು.
ಇತ್ತೀಚೆಗಷ್ಟೇ ದಾರಿಬದಿಯಲ್ಲಿ ಸಾಲಾಗಿ
ಪ್ರಖರ ಬೆಳಕು ಬೀರುವ
ಹೈಮಾಸ್ಟ್ ದೀಪಗಳನ್ನು ಅಳವಡಿಸಲಾಗಿತ್ತು.

" ಹಿಂದೆ ಈ ಹಾದಿ ಬೀದಿಗಳು ಬರುವುದಕ್ಕೂ ಮುನ್ನ
ಈ ಪ್ರದೇಶವೆಲ್ಲಾ ದೊಡ್ಡ ಕಾಡಾಗಿತ್ತಂತೆ.....
ನನ್ನಜ್ಜಿ ಹೇಳುತ್ತಿದ್ದಳು
ಆಗ ನಾವು ರಾತ್ರಿಯೆಲ್ಲ ನೆಮ್ಮದಿಯಿಂದ ನಿದ್ರಿಸಬಹುದಿತ್ತು"
ಜೊತೆಯಲ್ಲಿದ್ದ ಗಂಡುಹಕ್ಕಿ ಗೊಣಗಿತು.

" ಈಗ ಉಳಿದದ್ದು
ದಾರಿ ಬದಿಯಲ್ಲಿ ಇದೇ ಒಂದಷ್ಟು ಮರಗಳು
ಆದರೂ ಪರವಾಗಿರಲಿಲ್ಲ
ಆದರೆ ಈಗ ಈ ಬೆಳಕು .......!"
ಹೆಣ್ಣುಹಕ್ಕಿ ಚಿಂತೆಯಿಂದ ಚಿಲಿಪಿಲಿಗುಟ್ಟಿತು.

" ತಾಳು ! ಕೇಳಿಸುತ್ತಿದೆಯೇ ಕರಗಸದ ಸದ್ಧು !
ಈ ಮರಗಳನ್ನೂ ಕತ್ತರಿಸಲು ಬರುತ್ತಿದ್ದಾರೆ
ಹೆಚ್ಚು ಸಮಯವಿಲ್ಲ
ಏಳು ! ನಾವೀಗಲೇ ಈ ಮರ ತೊರೆಯಬೇಕು"
ಗಂಡುಹಕ್ಕಿ ಗಾಬರಿಯಿಂದ ಚೀರಿಟ್ಟಿತು.

" ಈ ಮರ ಬಿಟ್ಟು ನಾವು ಹೋಗುವುದಾದರೂ ಎಲ್ಲಿಗೆ ?"
ಹೆಣ್ಣು ಹಕ್ಕಿಯ ಅಸಹಾಯ ನುಡಿಗೆ
" ಎಲ್ಲಿಗೋ ದೂರ , ಯಾವುದೋ ಕಾಡಿಗೆ...."
ಗಂಡು ಆಕ್ರೋಶದಿಂದ ಹೇಳಿತು.

" ಈ ಮನುಷ್ಯ ಬಾರದಿರುವ ಜಾಗ , ಕಾಡು
ಈ ಭೂಮಿಯ ಮೇಲೆಲ್ಲಾದರೂ ಇದೆಯೇ ....?"
ಮತ್ತೆ ಹೆಣ್ಣು ಹಕ್ಕಿಯ ಅಸಹಾಯಕತೆ
" ಈ ನನ್ನ ಮುದ್ದು ಮೊಟ್ಟೆಗಳನ್ನೇನು ಮಾಡುವುದು......
ಇಲ್ಲಿಯೇ ಸಾಯಲು ಬಿಡುವುದೇ.......? "

" ಅವುಗಳನ್ನೂ ಎತ್ತಿಕೋ.....
ಹೊರಡು ಬೇಗ.....ಹಾರು
ಎಲ್ಲಾದರೂ ಸುರಕ್ಷಿತ ಜಾಗ ಹುಡುಕೋಣ "
ಗಂಡು ಅವಸರಿಸಿತು.
" ಹಾರುವಾಗ ಬಿದ್ದು ಒಡೆದು ಹೋದರೆ....!
ಹೆಣ್ಣು ಢವಗುಡುವ ಹೃದಯದಿಂದಲೇ
ಮೊಟ್ಟೆಗಳನ್ನೆತ್ತಿಕೊಂಡಿತು.

ಕೂಡಿ ಹಾರಿದವೆರಡೂ ಹಕ್ಕಿಗಳು
ರೆಕ್ಕೆ ಸೋಲುತ್ತಿದ್ದರೂ
ಬಹುದೂರ ಬಾನದಾರಿಯಲಿ ಬದುಕನರಸಿ

" ಪಾಪಿ ಮನುಷ್ಯರು ! ಹಾಳಾಗಿ ಹೋಗಲಿ !"
ರೆಕ್ಕೆ ಸೋತ ಹೆಣ್ಣುಹಕ್ಕಿ ಶಪಿಸಿತು.
" ಖಂಡಿತ " !
ದೂರದ ಆಕಾಶದಲ್ಲಿ
ಬೆಂಕಿಯುಗುಳುತ್ತಾ ಹಾರುತ್ತಿದ್ದ ಕ್ಷಿಪಣಿಗಳನ್ನೂ
ಎಳೆ ಮಕ್ಕಳನ್ನು ಎದೆಗವಚಿ
ಓಡುತ್ತಿದ್ದ ತಾಯಂದಿರನ್ನೂ
ತೋರಿಸಿ ಹೇಳಿತು ಗಂಡುಹಕ್ಕಿ

ನೋಡಿ
ಅಯ್ಯೋ ! ಎಂದು
ಕರುಣೆಯ ನಿಟ್ಟುಸಿರೊಂದ ಚಲ್ಲಿತು ಹೆಣ್ಣು ಹಕ್ಕಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

"ಛೇ ! ರಾತ್ರಿಯಿಡೀ ನಿದ್ದೆಯಿಲ್ಲ
ಈ ಹಾಳಾದ ಬೆಳಕಿನಿಂದ "
ಹೆದ್ದಾರಿಯ ಪಕ್ಕದ ಮರದ ಮೇಲಿದ್ದ
ಹೆಣ್ಣು ಹಕ್ಕಿಯೊಂದು
ಉರಿಯುತ್ತಿದ್ದ ಕಣ್ಣುಗಳನ್ನು ಪಿಳುಕಿಸುತ್ತಾ ಹೇಳಿತು.
ಇತ್ತೀಚೆಗಷ್ಟೇ ದಾರಿಬದಿಯಲ್ಲಿ ಸಾಲಾಗಿ
ಪ್ರಖರ ಬೆಳಕು ಬೀರುವ
ಹೈಮಾಸ್ಟ್ ದೀಪಗಳನ್ನು ಅಳವಡಿಸಲಾಗಿತ್ತು.

" ಹಿಂದೆ ಈ ಹಾದಿ ಬೀದಿಗಳು ಬರುವುದಕ್ಕೂ ಮುನ್ನ
ಈ ಪ್ರದೇಶವೆಲ್ಲಾ ದೊಡ್ಡ ಕಾಡಾಗಿತ್ತಂತೆ.....
ನನ್ನಜ್ಜಿ ಹೇಳುತ್ತಿದ್ದಳು
ಆಗ ನಾವು ರಾತ್ರಿಯೆಲ್ಲ ನೆಮ್ಮದಿಯಿಂದ ನಿದ್ರಿಸಬಹುದಿತ್ತು"
ಜೊತೆಯಲ್ಲಿದ್ದ ಗಂಡುಹಕ್ಕಿ ಗೊಣಗಿತು.

" ಈಗ ಉಳಿದದ್ದು
ದಾರಿ ಬದಿಯಲ್ಲಿ ಇದೇ ಒಂದಷ್ಟು ಮರಗಳು
ಆದರೂ ಪರವಾಗಿರಲಿಲ್ಲ
ಆದರೆ ಈಗ ಈ ಬೆಳಕು .......!"
ಹೆಣ್ಣುಹಕ್ಕಿ ಚಿಂತೆಯಿಂದ ಚಿಲಿಪಿಲಿಗುಟ್ಟಿತು.

" ತಾಳು ! ಕೇಳಿಸುತ್ತಿದೆಯೇ ಕರಗಸದ ಸದ್ಧು !
ಈ ಮರಗಳನ್ನೂ ಕತ್ತರಿಸಲು ಬರುತ್ತಿದ್ದಾರೆ
ಹೆಚ್ಚು ಸಮಯವಿಲ್ಲ
ಏಳು ! ನಾವೀಗಲೇ ಈ ಮರ ತೊರೆಯಬೇಕು"
ಗಂಡುಹಕ್ಕಿ ಗಾಬರಿಯಿಂದ ಚೀರಿಟ್ಟಿತು.

" ಈ ಮರ ಬಿಟ್ಟು ನಾವು ಹೋಗುವುದಾದರೂ ಎಲ್ಲಿಗೆ ?"
ಹೆಣ್ಣು ಹಕ್ಕಿಯ ಅಸಹಾಯ ನುಡಿಗೆ
" ಎಲ್ಲಿಗೋ ದೂರ , ಯಾವುದೋ ಕಾಡಿಗೆ...."
ಗಂಡು ಆಕ್ರೋಶದಿಂದ ಹೇಳಿತು.

" ಈ ಮನುಷ್ಯ ಬಾರದಿರುವ ಜಾಗ , ಕಾಡು
ಈ ಭೂಮಿಯ ಮೇಲೆಲ್ಲಾದರೂ ಇದೆಯೇ ....?"
ಮತ್ತೆ ಹೆಣ್ಣು ಹಕ್ಕಿಯ ಅಸಹಾಯಕತೆ
" ಈ ನನ್ನ ಮುದ್ದು ಮೊಟ್ಟೆಗಳನ್ನೇನು ಮಾಡುವುದು......
ಇಲ್ಲಿಯೇ ಸಾಯಲು ಬಿಡುವುದೇ.......? "

" ಅವುಗಳನ್ನೂ ಎತ್ತಿಕೋ.....
ಹೊರಡು ಬೇಗ.....ಹಾರು
ಎಲ್ಲಾದರೂ ಸುರಕ್ಷಿತ ಜಾಗ ಹುಡುಕೋಣ "
ಗಂಡು ಅವಸರಿಸಿತು.
" ಹಾರುವಾಗ ಬಿದ್ದು ಒಡೆದು ಹೋದರೆ....!
ಹೆಣ್ಣು ಢವಗುಡುವ ಹೃದಯದಿಂದಲೇ
ಮೊಟ್ಟೆಗಳನ್ನೆತ್ತಿಕೊಂಡಿತು.

ಕೂಡಿ ಹಾರಿದವೆರಡೂ ಹಕ್ಕಿಗಳು
ರೆಕ್ಕೆ ಸೋಲುತ್ತಿದ್ದರೂ
ಬಹುದೂರ ಬಾನದಾರಿಯಲಿ ಬದುಕನರಸಿ

" ಪಾಪಿ ಮನುಷ್ಯರು ! ಹಾಳಾಗಿ ಹೋಗಲಿ !"
ರೆಕ್ಕೆ ಸೋತ ಹೆಣ್ಣುಹಕ್ಕಿ ಶಪಿಸಿತು.
" ಖಂಡಿತ " !
ದೂರದ ಆಕಾಶದಲ್ಲಿ
ಬೆಂಕಿಯುಗುಳುತ್ತಾ ಹಾರುತ್ತಿದ್ದ ಕ್ಷಿಪಣಿಗಳನ್ನೂ
ಎಳೆ ಮಕ್ಕಳನ್ನು ಎದೆಗವಚಿ
ಓಡುತ್ತಿದ್ದ ತಾಯಂದಿರನ್ನೂ
ತೋರಿಸಿ ಹೇಳಿತು ಗಂಡುಹಕ್ಕಿ

ನೋಡಿ
ಅಯ್ಯೋ ! ಎಂದು
ಕರುಣೆಯ ನಿಟ್ಟುಸಿರೊಂದ ಚಲ್ಲಿತು ಹೆಣ್ಣು ಹಕ್ಕಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.