ಸ್ವರ್ಗ ಅನ್ನುವುದೊಂದಿದೆಯಾ
ಇರುವುದನ್ನು ಇಲ್ಲ ಅಂತಲೋ ಇಲ್ಲದುದ ಇದೆ ಅಂತಲೋ
ಹೇಗೆ ಹೇಳುವುದು ಮತ್ತು ಹಾಗೆ ಹೇಳಲು ನಾನು ಯಾರು

ಹೌದು ಸ್ವರ್ಗದಲ್ಲಿ ಟಪಾಲು ಕಚೇರಿ ಇದೆ
ಗಾಳಿಯಲ್ಲಿ ಸೂಕ್ಷ್ಮ ಹುಳುವಿನಂಥ ದೇವರುಗಳು ಸಂಚರಿಸುತ್ತಾರೆ
ನಿಮ್ಮ ಅಹವಾಲುಗಳನ್ನು ಅವರು ನಮೂದಿಸುತ್ತಿರುತ್ತಾರೆ
ಎಷ್ಟು ಚಿಕ್ಕ ವಿಷಯಗಳನ್ನೂ ಬಿಡದೆ ಮನಸ್ಸಿನ ನೇರ
ಜೆರಾಕ್ಸ್ ಪ್ರತಿಯಂತೆ ಮುದ್ದಾದ ಅಕ್ಷರಗಳಲ್ಲಿ ಚಿತ್ರಿಸುವರು
ಟಾಮಿ ನಾಯಿಯ ಮೂಳೆಯ ಕುರಿತು ಹಲ್ಲಿಯ ಲೊಚಗುಟ್ಟು ಆಸೆಯನ್ನು
ಮನುಷ್ಯನ ತೀರಾ ವಾಮ ಕಾಮದ ಬಯಕೆಗಳನ್ನೂ ಕೂಡಾ

ಉಸಿರಿಗುಸಿರು ಸೇರಿಸುವ ಕಲಾ ಪರಿಣತನೊಬ್ಬ
ಈ ಟಪಾಲುಗಳನ್ನು ಸ್ವರ್ಗದ ಅಂಚೆ ಕಚೇರಿಗೆ ಸೇರಿಸುವನು
ರಾತ್ರಿಯ ನಡು ಮಧ್ಯಾಹ್ನದ ಹೊತ್ತಲ್ಲಿ ಕೆಲಸ ಸಾಗುತ್ತದೆ
ಇವ ಎಲ್ಲಾ ಖಾಸಗಿ ಪತ್ರಗಳನ್ನೂ ಓದಿ ಸ್ವತಃ ವಿಮರ್ಶಿಸಿ ತಿದ್ದುತ್ತಾನೆ
ಪಾಪಗಳ ಲೆಕ್ಕ ತಗ್ಗಿಸಿ ನಿಮ್ಮ ಖಾತೆಗೆ ಜಮಾ ಪಾವತಿಸಲು

ದೇವಾಲಯದ ಮಹಾ ದೇವರೆದುರು ಮಂಡಿಯೂರಿ ಪ್ರಾರ್ಥಿಸುವ
ಮನುಷ್ಯನ ಮುಗ್ಧತೆ ದೇವರಿಗೆ ಮೆಚ್ಚುಗೆಯಾಗುವುದಿಲ್ಲ
ಅಸಹಾಯಕ ಸ್ಥಿತಿಯಲ್ಲಿಯೂ ಬೇಡದೆ ಬೀದಿಗಳಲ್ಲಿ ಹಾಡುವ ಕುರುಡರು
ಮೌನದಲ್ಲೇ ಮಾತನಾಡಿ ಸಮಾಧಾನಿಸುವ ಮೂಕರು
ತಮಗೇ ತಿಳಿಯದಂತೆ ಸಹಾಯ ತೋರುವ ಹೃದಯವಂತರು
ನರಕದ ಯಮನಿಗೂ ಪ್ರಿಯವಾಗುತ್ತಾರೆ

ದೇವದೂತರು ಟಪಾಲುಗಳನ್ನು ಓದಿ ಅಳಿಸಿ ಹಾಕುತ್ತಾರೆ
ನಂತರ ದೇವರು ಅವನ್ನು ಹರಿದು ಬಿಸಾಡುತ್ತಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.