ದಿನ ಮುಂಜಾನೆ ಎದ್ದು
ಗಡಿಯಾರದ ಮುಳ್ಳನ್ನೇ ನೋಡುತಿರುತ್ತೇನೆ
ನನಗೊಂದೇ ಆಶ್ಚರ್ಯ!
ಮನಸುಗಳ ನಡುವೆ, ದೇಶಗಳ ನಡುವೆ
ಗಡಿ ಕಟ್ಟಿರುವ ನಮಗೆ
ಕಾಲಕ್ಕೂ ಗಡಿಗಳಿರಬಹುದೇ ಎಂದು

ತಕ್ಷಣವೇ ದೂರದ ದೇಶದಲ್ಲಿರುವ
ಸ್ನೇಹಿತನಿಗೆ ಫೋನಾಯಿಸಿ ಕೇಳುತ್ತೇನೆ
ಅವ, ಸೂರ್ಯ ಉದಯಿಸುವ ಪರಿ
ಹೂ ಅರಳುವ ಸದ್ದು ಎಲ್ಲವನ್ನೂ
ಚಂದವಾಗಿ ವಿವರಿಸುತ್ತಾನೆ

ಮತ್ತೋರ್ವನಿಗೆ ಮಾತಾಡಿಸಿದೆ
ಅವ, ಅಯ್ಯೋ ದಿನಬೆಳಗಾದರೆ
ಮದ್ದು, ಗುಂಡುಗಳ ಸದ್ದು
ತುಂಡು ರೊಟ್ಟಿಗಾಗಿ
ಕೊಳೆತ ನಗುವಿಗೆ ಮುಲಾಮು ಹಚ್ಚಿ
ರಾತ್ರಿ ಫಕೀರನಾಗುತ್ತೇನೆ
ಜೋಳಿಗೆ ತುಂಬ ನೆಮ್ಮದಿಯ ನಾಳೆಗಳ ತುಂಬಿಸಲು,
ನಿಮ್ಮಲ್ಲಿನ ಬುದ್ದನ ನಗು ನನಗೂ
ತುಸು ಕೊಡುವೆಯಾ ಎಂದು ಕೇಳುತ್ತಾನೆ
ನಾನು, ಇಲ್ಲಿ ಅಣುಶಕ್ತಿ ಪರೀಕ್ಷೆಗಿಟ್ಟ
ಹೆಸರು ಸ್ಮೈಲಿಂಗ್ ಬುದ್ದನ ಬಗ್ಗೆ
ಕೇಳುತಿದ್ದಾನೆಂದುಕೊಂಡು ತೆಪ್ಪಗಾಗುತ್ತೇನೆ

ಆವತ್ತೇ ಗೊತ್ತಾಗಿದ್ದು
ಕಾಲಕ್ಕೆ ಗಡಿಗಳ ಹಂಗಿಲ್ಲ
ಪ್ರೀತಿಸುವುದೂ ಗೊತ್ತು
ದ್ವೇಷಿಸುವುದೂ ಗೊತ್ತೆಂದು

ಶಿಲಾಯುಗದಿಂದ ಸಂಚರಿಸಿ
ವಾಸ್ತವಕ್ಕೆ ಬಂದು ನಿಂತಿದ್ದೇನೆ
ನನಗೆ ಕಂಡಿದ್ದು,
ರಕ್ತದಿಂದ ಕಟ್ಟಿದ ಗಡಿಗಳಲ್ಲಿ
ಪ್ರೀತಿಗೆ ಆಸ್ಪದವಿಲ್ಲ
ಎಲ್ಲ ಕಾಲಕ್ಕೂ ಸಾಕ್ಷಿಯಾಗಿ
ಗಹ ಗಹಿಸಿ ನಗುವ ಸೂರ್ಯನ ಕಂಡು
ಲಜ್ಜೆಯಿಂದ ತಲೆ ತಗ್ಗಿಸುತ್ತೇನೆ,
ಮಾನಗೆಟ್ಟ ಚರಿತ್ರೆಯ ಹೊತ್ತು
ಇನ್ನೂ ನಡೆಯಲಾರೆ,
ಬಿಟ್ಟು ಹೋದ ನೆನಪುಗಳಿಗೆ ವೈರಾಗ್ಯ ಮೂಡಿ
ಕಲ್ಲು ಬಂಡೆಯಾದರೆ
ನಾಳೆ ಆಗುವ ನೋವುಗಳಿಗೆ
ಮುನ್ನುಡಿ ಕೆತ್ತದಿರಿ
ಶತಮಾನಗಳಿಂದ ನೋವುಂಡ
ಈ ಕಲ್ಲು ಶಾಂತಿಯ ಪ್ರತೀಕವಾಗಿ
ಮರುಹುಟ್ಟು ಪಡೆದಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ದಿನ ಮುಂಜಾನೆ ಎದ್ದು
ಗಡಿಯಾರದ ಮುಳ್ಳನ್ನೇ ನೋಡುತಿರುತ್ತೇನೆ
ನನಗೊಂದೇ ಆಶ್ಚರ್ಯ!
ಮನಸುಗಳ ನಡುವೆ, ದೇಶಗಳ ನಡುವೆ
ಗಡಿ ಕಟ್ಟಿರುವ ನಮಗೆ
ಕಾಲಕ್ಕೂ ಗಡಿಗಳಿರಬಹುದೇ ಎಂದು

ತಕ್ಷಣವೇ ದೂರದ ದೇಶದಲ್ಲಿರುವ
ಸ್ನೇಹಿತನಿಗೆ ಫೋನಾಯಿಸಿ ಕೇಳುತ್ತೇನೆ
ಅವ, ಸೂರ್ಯ ಉದಯಿಸುವ ಪರಿ
ಹೂ ಅರಳುವ ಸದ್ದು ಎಲ್ಲವನ್ನೂ
ಚಂದವಾಗಿ ವಿವರಿಸುತ್ತಾನೆ

ಮತ್ತೋರ್ವನಿಗೆ ಮಾತಾಡಿಸಿದೆ
ಅವ, ಅಯ್ಯೋ ದಿನಬೆಳಗಾದರೆ
ಮದ್ದು, ಗುಂಡುಗಳ ಸದ್ದು
ತುಂಡು ರೊಟ್ಟಿಗಾಗಿ
ಕೊಳೆತ ನಗುವಿಗೆ ಮುಲಾಮು ಹಚ್ಚಿ
ರಾತ್ರಿ ಫಕೀರನಾಗುತ್ತೇನೆ
ಜೋಳಿಗೆ ತುಂಬ ನೆಮ್ಮದಿಯ ನಾಳೆಗಳ ತುಂಬಿಸಲು,
ನಿಮ್ಮಲ್ಲಿನ ಬುದ್ದನ ನಗು ನನಗೂ
ತುಸು ಕೊಡುವೆಯಾ ಎಂದು ಕೇಳುತ್ತಾನೆ
ನಾನು, ಇಲ್ಲಿ ಅಣುಶಕ್ತಿ ಪರೀಕ್ಷೆಗಿಟ್ಟ
ಹೆಸರು ಸ್ಮೈಲಿಂಗ್ ಬುದ್ದನ ಬಗ್ಗೆ
ಕೇಳುತಿದ್ದಾನೆಂದುಕೊಂಡು ತೆಪ್ಪಗಾಗುತ್ತೇನೆ

ಆವತ್ತೇ ಗೊತ್ತಾಗಿದ್ದು
ಕಾಲಕ್ಕೆ ಗಡಿಗಳ ಹಂಗಿಲ್ಲ
ಪ್ರೀತಿಸುವುದೂ ಗೊತ್ತು
ದ್ವೇಷಿಸುವುದೂ ಗೊತ್ತೆಂದು

ಶಿಲಾಯುಗದಿಂದ ಸಂಚರಿಸಿ
ವಾಸ್ತವಕ್ಕೆ ಬಂದು ನಿಂತಿದ್ದೇನೆ
ನನಗೆ ಕಂಡಿದ್ದು,
ರಕ್ತದಿಂದ ಕಟ್ಟಿದ ಗಡಿಗಳಲ್ಲಿ
ಪ್ರೀತಿಗೆ ಆಸ್ಪದವಿಲ್ಲ
ಎಲ್ಲ ಕಾಲಕ್ಕೂ ಸಾಕ್ಷಿಯಾಗಿ
ಗಹ ಗಹಿಸಿ ನಗುವ ಸೂರ್ಯನ ಕಂಡು
ಲಜ್ಜೆಯಿಂದ ತಲೆ ತಗ್ಗಿಸುತ್ತೇನೆ,
ಮಾನಗೆಟ್ಟ ಚರಿತ್ರೆಯ ಹೊತ್ತು
ಇನ್ನೂ ನಡೆಯಲಾರೆ,
ಬಿಟ್ಟು ಹೋದ ನೆನಪುಗಳಿಗೆ ವೈರಾಗ್ಯ ಮೂಡಿ
ಕಲ್ಲು ಬಂಡೆಯಾದರೆ
ನಾಳೆ ಆಗುವ ನೋವುಗಳಿಗೆ
ಮುನ್ನುಡಿ ಕೆತ್ತದಿರಿ
ಶತಮಾನಗಳಿಂದ ನೋವುಂಡ
ಈ ಕಲ್ಲು ಶಾಂತಿಯ ಪ್ರತೀಕವಾಗಿ
ಮರುಹುಟ್ಟು ಪಡೆದಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.