ಪ್ರಪಂಚದ ದೆವ್ವ, ಭೂತ, ಪಿಶಾಚಿಗಳೆಲ್ಲಾ ಜನರಲ್ ಬಾಡಿ ಮೀಟಿಂಗ್ ಸೇರಿದ್ದವು. ಸಂಘದ ಅಧ್ಯಕ್ಷನಾದ ಬ್ರಹ್ಮರಾಕ್ಷಸ, ‘ನನ್ನ ಪ್ರೀತಿಯ ದೆವ್ವ, ಭೂತ, ಪ್ರೇತ, ಪಿಶಾಚಿಗಳೇ’ ಅಂತ ಮಾತು ಆರಂಭಿಸಿದಾಗ, ಹಿಂದೆ ಗಲಾಟೆ ಸುರುವಾಯ್ತು. ‘ಯಾರ್ರೀ ಅದು. ಯಾಕೆ ಮನುಷ್ಯರ ಥರಾ ಆಡ್ತಿದ್ದೀರ. ಸ್ವಲ್ಪ ಡೀಸೆನ್ಸಿ ಇರಲಿ’ ಅಂತ ಅಧ್ಯಕ್ಷರು ಮಕ್ಕುಗಿದರು.

‘ಅಧ್ಯಕ್ಸರೇ, ನಾವೆಂಗೋ ನಂನಮ್ಮ ಗೋರಿ ಒಳಗೆ ಅಮಿಕ್ಕಂದು ಮಕ್ಕಂಡಿದ್ವಾ, ಯಾರೋ ಬಂದು, ಇಲ್ಲೇ ಹೂತುದ್ದೇ, ಇಲ್ಲೇ ಒಪ್ಪ ಮಾಡಿದ್ದೆ ಅಂತ ನೆಲ ಗೋರಿಸಿ ತೊಂದ್ರೆ ಕೊಡ್ತಾವ್ರೆ’ ಅಂತ ಪಿಶಾಚಿಯೊಂದು ಬುರುಡೆ ಕತೆ ಸುರು ಮಾಡಿತು.

‘ಇದ್ರೆ ನೆಮ್ದಿಯಾಗಿರ್ಬೇಕ್. ಆದ್ರೆ ಅದಕ್ಕೂ ನಿರ್ವಾಕಿಲ್ಲ. ಬಾಲಿವುಡ್, ಸ್ಯಾಂಡಲ್ವುಡ್ ಜನ ದಯ್ಯ, ಭೂತ ಅಂತ ಸಿನಿಮಾ ಮಾಡಿ ನಮ್ಮ ಮರ್ಯಾದೆ ತಗೀತಾವ್ರೆ’ ದೆವ್ವವೊಂದು ದುಃಖಿಸಿತು.

‘ದಿಟ ಕಯ್ಯಾ. ಹವಾ ತಕ್ಕಣಕೆ ಗೋರಿಯಿಂದ ಈಚೆಗೆ ಬಂದ್ರೆ ನಾಯಿಗಳು ನಮ್ಮನ್ನ ನೋಡಿ ವೊವ್ವೋ... ಅಂತ ಅಟ್ಟಾಡುಸ್ತವೆ. ನಾಯಿಗಳ ಕಣ್ಣಿಗೆ ಮಾತ್ರ ನಾವು ಕಾಣುಸ್ತೀವಂತಲ್ಲಾ ಅಧ್ಯಕ್ಸರೇ’ ಅಂತು ಇನ್ನೊಬ್ಬ ದಯ್ಯ.

‘ಅಷ್ಟೇ ಅಲ್ಲ ಕನ್ರೀ, ನೀನು ದೆವ್ವ, ನೀನು ಭೂತ, ನೀನು ಪಿಶಾಚಿ ಅಂತ ರಾಜಕಾರಣಿಗಳು ನಮ್ಮ ಹೆಸರು ತಕ್ಕಂದು ಬೋದಾಡಿಕ್ಯತ್ತಲೇ ಇರತರೆ. ನಡುರಾತ್ರಿವೊತ್ತು ಆಚೆಗೆಲ್ಲೂ ನಾವು ನಡೆಯಂಗೇ ಇಲ್ಲ. ಎತ್ತಗೋದ್ರೂ ಅಪಶಕುನ. ರಾಜಕಾರಣಿಗಳೇ ಎದುರಾಯ್ತರೆ’ ಸೀನಿಯರ್ ದೆವ್ವಕ್ಕೆ ಬೇಜಾರಾಗಿತ್ತು.

‘ಅದುಕ್ಕೇ ನಾನೇಳದು, ನಾವು ನಮ್ಮ ಯಂಗ್ ಪಿಶಾಚಿ, ದೆವ್ವಗಳನ್ನೆಲ್ಲಾ ಆನ್ ಅಫಿಶಿಯಲ್ ಡ್ಯೂಟಿ ಅಂತ ಓಓಡಿ ಕಳ್ಸಿ, ರಾಜಕಾರಣಿಗಳ ಅಮರಿಕ್ಯಂದು ಬಾಳಗೆಡಿಸನ. ಅವರಿಂದ ಯಾರು ಉದ್ಧಾರಾಗೋದೂ ಅಷ್ಟರಾಗೇ ಅದೆ’ ಎಂದರು ಅಧ್ಯಕ್ಷರು. ಆ ಮಾತಿಗೆ ಎಲ್ಲಾ ದೆವ್ವಗಳೂ ‘ಹಂಗೇ ಮಾಡಮು’ ಅಂತ ನಿರ್ಣಯ ತಕ್ಕಂದೋ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.