ಅಂದು.. ಗುಡಿಸಲಲಿ ಕುಳಿತು, ದೀಪದ ಬುಡ್ಡಿಯಿಟ್ಟು ಓದಲು ಕುಳಿತರೆ, ಜೋಪಾನವೆನ್ನುತ್ತಿದ್ದಳು ನನ್ನವ್ವ! ನಿದ್ದೆಗಣ್ಣಲಿ ದೀಪ ಬೀಳಿಸಿ, ಬೆಂಕಿ ಹಚ್ಚಿ ಬಿಡುವನೇನೊ ಮನೆಗೆ, ಎಂಬ ಆತಂಕ ನನ್ನವ್ವನಿಗೆ! ಇಂದು.. ಸದಾ ಎಚ್ಚರದ ಸಿಸಿಟಿವಿ ಕಣ್ಣು, ಗರಿಗಳಿಲ್ಲದ ಕಬ್ಬಿಣ-ಸಿಮೆಂಟುಗಳ ಮನೆ, ಆದರೂ ಬೆಂಕಿ ಹಚ್ಚುವ ಚಾಳಿ ನನಗೆ!