ಕಾಡಿನ ರಾಜನೆಂಬ ಬಿರುದು ಹೊತ್ತ ಸಿಂಹರಾಜನ ಅಧ್ಯಕ್ಷತೆಯಲ್ಲಿ ಎಂದಿನಂತೆ ಶನಿವಾರ ರಾತ್ರಿ ಮೃಗಾಲಯದ ಪ್ರಾಣಿಗಳೆಲ್ಲ ಸಭೆ ಸೇರಿದ್ದವು. ಅದು ಪ್ರಾಣಿಗಳ ತಿಂಗಳ ಸಭೆ. ಪ್ರತೀ ತಿಂಗಳ ಸಭೆಯಲ್ಲಿ ಒಂದೊಂದು ವಿಚಾರ ಚರ್ಚಿಸಲು, ಆಗುಹೋಗುಗಳ ಬಗ್ಗೆ ತಿಳಿದುಕೊಳ್ಳಲು, ಕಷ್ಟ–ಸುಖ ಹಂಚಿಕೊಳ್ಳಲು ಕಪಿರಾಯನ ಸಲಹೆ ಮೇರೆಗೆ ಸಿಂಹರಾಜನು ಈ ಸಭೆಯನ್ನು ಆಯೋಜಿಸಿದ್ದನು.

ಹುಲಿರಾಯ ಸಭೆಗೆ ಬರುವುದು ತಡವಾಗಿದ್ದರಿಂದ ಸಭೆ ಆರಂಭವಾದಾಗ ಸರಿಸುಮಾರು ಮಧ್ಯರಾತ್ರಿ ಆಗಿತ್ತು. ಆಗಲೇ ಹಲವು ಪ್ರಾಣಿಗಳು ತೂಕಡಿಸುತ್ತಿದ್ದವು. ಆನೆರಾಯನ ಸೂಚನೆ ಮೇರೆಗೆ ಜಿಂಕೆಯು ವಯ್ಯಾರದಿಂದಲೇ ನಿರೂಪಣೆ ಆರಂಭಿಸಿತು. ಯಾವ್ಯಾವುದೋ ಹಳೇ ಕವಿತೆಗಳನ್ನು ಉದ್ಗರಿಸಿ ಒಗ್ಗರಣೆ ಹಾಕಿ ಲಂಬಿಸುತ್ತಿರುವುನ್ನು ಕಂಡ ನಾಗಪ್ಪ ತಲೆ ಎತ್ತಿ ಸಾಕು ಎಂದು ಕೊಟ್ಟ ಸೂಚನೆಗೆ ಸ್ವಲ್ಪ ಭಯಗೊಂಡ ಜಿಂಕೆ ತನ್ನ ಮಾತು ಮೊಟಕುಗೊಳಿಸಿತು.

ಗಾನಕೋಗಿಲೆಯ ಸುಶ್ರಾವ್ಯ ಕಂಠದಿಂದ ಮೊಳಗಿದ ಪ್ರಾರ್ಥನಾ ಗೀತೆ, ಆಗಲೇ ತೂಕಡಿಸುತ್ತಿದ್ದವರಿಗೆ ತಲೆ ನೇವರಿಸಿ ತಟ್ಟಿ ಮಲಗಿಸಿದಂತಿತ್ತು. ಗಜರಾಜನ ಸ್ವಾಗತ, ಹುಲಿರಾಯನ ಪ್ರಾಸ್ತಾವಿಕ ಮಾತು ಮುಗಿದ ನಂತರ, ಹುಲಿರಾಯನಿಂದ ಸಭೆ ತಡವಾಯಿತೆಂದು ಅನಿಸಿದರೂ ಒಳಗೊಳಗೆ ಕೋಪಿಸಿಕೊಂಡರೂ ತೋರ್ಪಡಿಸದೆ ಚಿಂಪಾಂಜಿಯು ತಡವರಿಸುತ್ತಲೇ, ‘ನಾಳೆ ಭಾನ್ವಾರ ಬೇರೆ, ಬೆಳಿಗ್ಗೆ ಬೇಗ ಏಳ್ಬೇಕು, ದರ್ಶನ ಕೊಡೋಕೆ ಸಿದ್ಧ ಆಗ್ಬೇಕು. ಬೇಗ ಬೇಗ ಸಭೆ ಮುಗ್ಸಿ ವಿಶ್ರಾಂತಿ ಪಡೆಯೋಣ ನಡೀರಿ ನಡೀರಿ’ ಎಂದು ಆಕಳಿಸಿತು.

‘ಸಭೆ ಕರ್ದಿರೋ ವಿಷ್ಯಾನೇ ಇನ್ನೂ ಆರಂಭ ಆಗಿಲ್ಲ, ಆಗ್ಲೇ ಹೋಗೋಣ ಅಂದ್ರೆ ಹೆಂಗೆ? ನಿನ್ ರಾಗ ಯಾವಾಗ್ಲೂ ಇದ್ದಿದ್ದೇ. ನೀನಂತೂ ಎಷ್ಟೇ ಪೌಡರ್ ಹಾಕಿದ್ರೂ ಹೊಳೆಯಲ್ಲ, ಪವರ್ ಕಟ್ ಆದ್ರಂತೂ ನೀನು ಇನ್ನೊಬ್ಬರಿಗೆ ಕಾಣ್ಸೋದೂ ಇಲ್ಲ. ಸುಮ್ನೇ ಇರು’ ಎಂದು ಚಿಂಪಾಂಜಿಯನ್ನು ಕುಟುಕಿತು ನರಿ.

ನರಿಯ ವ್ಯಂಗ್ಯದ ಮಾತುಕೇಳಿ ಸಿಟ್ಟಾಗಿ ಚಿಂಪಾಜಿ, ‘ನೋಡು ನಾಗಣ್ಣ, ಈ ನರಿಯ ಕೀಟಲೆ ಮಾತನ್ನ. ಈಗೀಗ ಈ ನರಿ ಮಾತು ಮಿತಿ ಮೀರ್ತಾ ಇದೆ, ಹಿರಿಯರು ಅನ್ನೋ ಭಯ ಆಗ್ಲೀ ಗೌರವ ಆಗ್ಲೀ ಇಲ್ಲ. ಎಲ್ಲ ಗೊತ್ತಿದ್ರೂ ನೀನು ಸುಮ್ನೇ ಇರ್ತೀಯಪ್ಪಾ’ ಎಂದು ತನ್ನ ಅಸಮಾಧಾನವನ್ನು ನಾಗಪ್ಪನಲ್ಲಿ ತೋಡಿಕೊಂಡಿತು. ಚಿಂಪಾಂಜಿಯ ಮಾತು ಕೇಳಿ ಕೋಪ ತಾಳಿ ಏನಾದ್ರೂ ಈ ನಾಗಪ್ಪ ಹೆಡೆ ಬಿಚ್ಚಿದರೆ ಕಷ್ಟ ಕಷ್ಟ ಎಂದರಿತ ಕರಡಿಯು ಮಧ್ಯೆ ಪ್ರವೇಶಿಸಿ ಎಲ್ಲರನ್ನೂ ಸಮಾಧಾನಪಡಿಸಿ ಸಭೆ ಆರಂಭಿಸುವಂತೆ ಸಿಂಹರಾಜನಿಗೆ ವಿನಂತಿಸಿತು.

ಅಧ್ಯಕ್ಷತೆ ವಹಿಸಿ ಮಾತು ಆರಂಭಿಸಿದ ಸಿಂಹರಾಜ, ಒಮ್ಮೆ ಚಿಂಪಾಂಜಿಯನ್ನೂ, ಇನ್ನೊಮ್ಮೆ ನರಿಯನ್ನೂ ದಿಟ್ಟಿಸಿ, ‘ಎಲ್ಲರೂ ಸಮಾಧಾನವಾಗಿರಿ. ಸಭೆ ಎಂದಮೇಲೆ ಇವೆಲ್ಲ ಇದ್ದಿದ್ದೇ. ನಮ್ಮ ನಮ್ಮಲ್ಲೇ ಈ ಕಾಲೆಳೆದಾಟ, ಕುಹಕ ಬೇಡ’ ಎನ್ನುತ್ತ ಸಭೆಯ ಮುಖ್ಯ ವಿಷಯ ಪ್ರಸ್ತಾಪಿಸುವಂತೆ ಆನೆಗೆ ಅನುಮತಿ ನೀಡಿದನು.

ಮಾತು ಆರಂಭಿಸಿದ ಆನೆ, ‘ಸಿಂಹರಾಜ, ನಮ್ಮ ಬದುಕು ಈಗೀಗ ಗಂಭೀರವಾಗುತ್ತಿದೆ. ಭವಿಷ್ಯದ ಬಗ್ಗೆ ಯೋಚಿಸಿದರೆ ಭಯವಾಗುತ್ತದೆ. ವಾರದ ಕೊನೆಯ ದಿನವಾದ ಭಾನುವಾರ ಸಹ ನಮ್ಮ ದರ್ಶನಕ್ಕೆ ಬರುವ ಜನರ ಸಂಖ್ಯೆ ಈಗೀಗ ಬಹಳ ಕಡಿಮೆಯಾಗುತ್ತಿದೆ. ಹೀಗಾದರೆ ಮೃಗಾಲಯದ ಆದಾಯ ಕಡಿಮೆಯಾಗಬಹುದು. ನಮ್ಮ ಯೋಗಕ್ಷೇಮಕ್ಕೂ ಕತ್ತರಿ ಬೀಳಬಹುದು. ನಾಳೆ ನಮ್ಮನ್ನು ಮರೆತು ಬಿಟ್ಟರೂ ಅಚ್ಚರಿಯಿಲ್ಲ’ ಎಂದು ಗಂಭೀರ ಸಮಸ್ಯೆಯನ್ನೇ ಸಭೆಯಲ್ಲಿ ಪ್ರಸ್ತಾಪಿಸಿತು.

ಆನೆಯ ಮಾತಿಗೆ ದನಿಗೂಡಿಸಿದ ಜಿರಾಫೆ, ‘ಸಿಂಹರಾಜ, ಇದಕ್ಕೆಲ್ಲ ಈ ಮೊಬೈಲೇ ಕಾರಣ. ಜನ ಬರುತ್ತಿರುವುದೇ ಕಡಿಮೆ. ಅವರು ಕೂಡ ನಮ್ಮೊಂದಿಗೆ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಆ ಚಿತ್ರಗಳನ್ನು ವೈರಲ್ ಮಾಡುತ್ತಿದ್ದಾರೆ. ನಮ್ಮ ಚಿತ್ರಗಳನ್ನು ಮೊಬೈಲ್‍ನಲ್ಲೇ ಸೇವ್ ಮಾಡಿಕೊಂಡು ಮಕ್ಕಳಿಗೂ ಅಲ್ಲೇ ನಮ್ಮ ಪರಿಚಯ ಮಾಡಿಸುತ್ತಿದ್ದಾರೆ. ಹೀಗಾಗಿ ನಮ್ಮನ್ನು ನೋಡುವ ಆಸಕ್ತಿ, ಕುತೂಹಲ ಈಗ ಯಾರಿಗೂ ಇಲ್ಲವಾಗುತ್ತಿದೆ. ಇತ್ತ ಕಾಡೂ ಇಲ್ಲದೆ ಅತ್ತ ನಾಡೂ ಇಲ್ಲದೆ ನಾವು ಅತಂತ್ರವಾಗುತ್ತೇವೆ. ಇದಕ್ಕೆ ಪರಿಹಾರ ಹುಡುಕದಿದ್ದರೆ ನಾಳೆ ನಮಗೆ ಭವಿಷ್ಯವೇ ಇರುವುದಿಲ್ಲ’ ಎಂದು ನೊಂದು ನುಡಿಯಿತು.

‘ಓ ಇದಾ ವಿಷ್ಯಾ? ಹಾಗಾದ್ರೇ, ನಾಳೆಯಿಂದ ನಾನು ಯಾರಿಗೂ ಸೆಲ್ಫಿಗೆ ಫೋಸ್ ಕೊಡೋದೆ ಇಲ್ಲ’ ಎಂದು ಪರಪರ ಕೆರೆದುಕೊಳ್ಳುತ್ತಾ ಹೇಳಿತು ಕಪಿರಾಯ. ‘ಓ ನೀನೇನ್ ಸೂಪರ್ ಫಿಗರ್‍ರು, ಏನ್ ಎಲ್ಲಾ ಮುತ್ಕೋತೌರೆ ನಿನ್ಹತ್ರ! ಮುಖ ನೋಡು ಮುಖ’ ಎಂದು ಪಿಳಿ ಪಿಳಿ ಕಣ್ಣು ಬಿಡುತ್ತಾ ಕಂಪಿಸುತ್ತಲೇ ಮೊಲ ಕಪಿರಾಯನಿಗೆ ಛೇಡಿಸಿತು.

ಕಪಿರಾಯ ಹಾಗೂ ಮೊಲದ ಮಾತು ಕೇಳಿ ಒಳಗೊಳಗೆ ನಕ್ಕ ನವಿಲು ‘ಅಯ್ಯೋ ಸುಮ್ಮನಿರಿ. ಸಮಯ ಆಗ್ತಿದೆ. ಈ ಜನ ಕೆಂಬೂತಕ್ಕೆ ರೆಕ್ಕೆ ಕಟ್ಟಿ ಅದನ್ನೇ ನವಿಲು ನರ್ತಿಸಿತು ಅಂತಾರೆ. ಬೇಗ ಒಂದು ತೀರ್ಮಾನ ಮಾಡ್ಲಿ’ ಎಂದಿತು. ಹುಲಿರಾಯನ ಕಿವಿಯಲ್ಲಿ ಪಿಸುಮಾತಿನ ಮೂಲಕ ಚರ್ಚಿಸಿದ ಸಿಂಹರಾಜ ಅಂತಿಮವಾಗಿ ಒಂದು ತೀರ್ಮಾನವನ್ನು ಸಭೆಯ ಮುಂದಿರಿಸಿದನು.

ಮೃಗಾಲಯದ ಒಳಗೆ ಮೊಬೈಲ್ ಮತ್ತು ಕ್ಯಾಮೆರಾ ಸಂಪೂರ್ಣವಾಗಿ ನಿಷೇಧಿಸುವಂತೆ ಒತ್ತಾಯಿಸುವುದು. ಸೆಲ್ಫಿಗೆ ಅಥವಾ ಪೋಟೋಗೆ ಯಾರೂ ಫೋಸ್ ನೀಡದಿರುವುದು. ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಚಿತ್ರಗಳನ್ನು ವೈರಲ್ ಮಾಡದಂತೆ ಹಾಗೂ ಸೇವ್ ಮಾಡಿಕೊಳ್ಳದಂತೆ ಕಾನೂನು ರೂಪಿಸಲು ಆಗ್ರಹಿಸುವುದು. ಪ್ರಮುಖವಾದ ಈ ನಿರ್ಣಯಗಳನ್ನು ಮಾನ್ಯ ಮುಖ್ಯಮಂತ್ರಿಗಳಿಗೆ, ಅರಣ್ಯ ಸಚಿವರಿಗೆ, ಪ್ರವಾಸೋದ್ಯಮ ಸಚಿವರಿಗೆ ಹಾಗೂ ಸಂಬಂಧಿಸಿದ ಎಲ್ಲರಿಗೂ ತಲುಪಿಸಲು ದಸರಾ ವೇಳೆಗೆ ಮನವಿ ಪತ್ರ ತಯಾರಿಸಲು ನಿರ್ಣಯ ಕೈಗೊಂಡು ಸಿಂಹರಾಜನು ಸಭೆಯನ್ನು ಮುಗಿಸಿದನು.

ಅದಾಗಲೇ ಹಲವು ಪ್ರಾಣಿಗಳು ಸಭೆಯಲ್ಲಿ ನಿದ್ರೆಗೆ ಜಾರಿದ್ದರಿಂದ ವಂದನಾರ್ಪಣೆ ಮಾಡಲು ಎದ್ದು ನಿಂತ ಹುಂಜಕ್ಕೆ, ‘ಇನ್ನೇನು ನೀನು ಕೊಕ್ಕೋ ಕೊಕ್ಕೋ ಎಂದು ಕೂಗುವ ಸಮಯವೇ ಬರುತ್ತಿದೆ. ಸುಮ್ಮನಿರು’ ಎಂದ ಗಿಳಿಯು ದೀಪ ಆರಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.