“ಫೂಲ್ ಮೀ ಒನ್ಸ್, ಫೂಲ್ ಮೀ ಟ್ವೇಸ್, ಆರ್ ಯು ಡೆತ್ ಆರ್ ಪ್ಯಾರಡೈಸ್?”

ಹೊಸದಾಗಿ ತಂದ ಮಾರ್ಷಲ್ ಸ್ಟ್ಯಾನ್ ಮೊರ್ ವಯರ್ಲೆಸ್ ಬ್ಲೂಟೂಥ್ ಸ್ಪೀಕರಿನಿಂದ ತಣ್ಣನೆ ಕೊರೆವ ಎದೆಯ ಹಿಂಡುವ ಬಿಲ್ಲಿಯ ಧ್ವನಿ. ಮೊದಲೆಲ್ಲ ನಾಲ್ಕೈದು ಹಾಡುಗಳನ್ನು ಒಂದು ಪ್ಲೇ ಲಿಸ್ಟ್ ಮಾಡಿ ಅದಕ್ಕೆ ‘ಖಾಸ್ಬಾತ್’ ಎಂದು ಹೆಸರಿಟ್ಟು ಸ್ನಾನದ ಮನೆಗೆ ಹೊರಟವನೇ ಪ್ಲೇ ಮಾಡುತ್ತಿದ್ದ. ಹಾಡಿಲ್ಲದೆ ಸ್ನಾನ ಮಾಡಿದವನೇ ಅಲ್ಲ.

ಈಗೀಗ ನಾಲ್ಕೈದು ಹಾಡು ಕೇಳೋದೇ ಇಲ್ಲ. ನಾಲ್ಕರಲ್ಲಿ ಯಾವುದೋ ಒಂದು ಆವರೇಜ್ ಅನಿಸಿದಾಗ. ಮೈಗೆ ಸೋಪು ಹಚ್ಚಿಕೊಂಡು ಒದ್ದೆಗೈಯಲ್ಲಿ ಮೊಬೈಲ್ ಹಿಡಿದು ಇನ್ನೊಂದು ಹಾಡು ಬದಲಿಸುವಷ್ಟು ಸಹನೆ ಇಲ್ಲ. ಯಾವುದೋ ಒಂದು ಹಾಡು ಎದೆಯ ಸೀಳಿ ಇಳಿದರೆ ಮುಗಿಯಿತು, ಅದನ್ನೇ ಕೇಳಿ ಕೇಳಿ ಅದರ ಸಾಲುಗಳೆಲ್ಲ ಎದೆಗಿಳಿಸಿಕೊಂಡು ಇನ್ನು ಸಾಕಾಯ್ತು ಅನ್ನುವವರೆಗೂ ಅದೇ ಹಾಡು ಪ್ಲೇ ಆಗುತ್ತಿರುತ್ತದೆ. ಸದ್ಯ ಬಿಲ್ಲಿಯ ‘ನೋ ಟೈಮ್ ಟು ಡೈ’ ಹಾಡು ಕಳೆದ ಇಪ್ಪತ್ತೆಂಟು ದಿನಗಳಿಂದ.

ಮುಂಚೆ ಇದ್ದ ಜೆ.ಬಿ.ಎಲ್ ನ ಪುಟ್ಟ ಸ್ಪೀಕರ್ ದೊಡ್ಡ ಕಂದಕವನ್ನೇ ಹೊತ್ತುಕೊಂಡ ಅವನ ಹೃದಯಕ್ಕೆ ಸಾಲದಾಯ್ತೆನೋ? ಉದ್ದನೆಯ ಮಾರ್ಷಲ್ ಸ್ಪೀಕರ್ ತಂದಿಟ್ಟುಕೊಂಡಿದ್ದ.

ಅವಳಿಗೂ ಇಂತದ್ದೇ ವಿಶಿಷ್ಟ ರೋಗ. ಒಂದೇ ಹಾಡು ಕೇಳುವುದು. ಈಗ ಅವಳು ಕೂಡ ಸ್ನಾನದ ಮನೆಯಲ್ಲಿ ಚಾರ್ಲ್ಸ್ ಪುತ್ ನ ‘ವೀ ಡೋಂಟ್ ಟಾಕ್ ಎನಿ ಮೋರ್’ ಎಂದು ಹಾಡುತ್ತ ಭುಜದ ಮೇಲಿನ ಚಪ್ಪಟೆ ಮಚ್ಚೆಗೆ ಇಂಟು ದ ನೈಟ್ ಬಾಡಿ ವಾಷ್ ಹಚ್ಚುತ್ತಿರಬಹುದೇ? ಅವಳ ದೇಹದಲ್ಲಿ ಮಚ್ಚೆಗಳು ಅದೆಷ್ಟಿರಬಹುದು? ಎಂದು ಲೆಕ್ಕ ಹಾಕುತ್ತಲೇ ಕೊನೆಯ ಬಾರಿ ಚಾನೆಲ್ ಕೊಕೊ ಸೋಪ್ ಹಚ್ಚಿಕೊಂಡ..

ಕೊನೆ ಹತ್ತು ನಿಮಿಷ ಉಗುರು ಬೆಚ್ಚಗಿನ ನೀರು ಅವನ ತಲೆ ಮೇಲೆ ಬೀಳುವಾಗ ಒಂದು ರೀತಿಯ ನೆಮ್ಮದಿ. ಎಷ್ಟೋ ಸಲ ಸ್ನಾನ ಮಾಡಿ ಎಲ್ಲೋ ಹೋಗಬೇಕೆಂದುಕೊಂಡವನು ಆ ನೆಮ್ಮದಿ ಕಳೆದುಕೊಳ್ಳಲಾರದೆ ಹಾಗೆ ಹಾಸಿಗೆ ಮೇಲೆ ಬಿದ್ದಿದ್ದಾನೆ. ಇವತ್ತು ಆ ತರ ಮಾಡಲು ಸಾಧ್ಯವೇ ಇಲ್ಲ. ಪಾರಿಜಾತ ಅವನಿಗಾಗಿ ಕಾಯುತ್ತಿದ್ದಾಳೆ. ಮೈ ಒರೆಸಿಕೊಂಡು ಸ್ವಿಗ್ಗಿಯಲ್ಲಿ ಅಮೆರಿಕ್ಯಾನೊ ಆರ್ಡರ್ ಮಾಡಿದ. ಹತ್ತು ನಿಮಿಷಕ್ಕೆ ಡೆಲಿವರಿ ತೋರಿಸುತ್ತಿತ್ತು.

ತುಂಬಾ ದಿನ ಕಾದು ಪ್ಲ್ಯಾನ್ ಮಾಡಿದ ಮೀಟ್. ಇಬ್ಬರು ಜನ್ಮಕಾಲ ಬೆಂಕಿ ಹೊತ್ತಿಕೊಂಡ ಕೆಂಡಗಳಾಗಿ ಕಾದ ಗಳಿಗೆ ಇನ್ನೇನೋ ಆಗುವ ಹೊತ್ತಲ್ಲಿ ಅವಳನ್ನು ಮೀಟ್ ಮಾಡದೇ ಹಾಸಿಗೆ ಮೇಲೆ ಬಿದ್ದರೆ ಮತ್ತೆಂದೂ ಅವಳು ಸಿಗೋಲ್ಲ.

ಅವಳೇ ಗಿಫ್ಟ್ ಮಾಡಿದ, ಅವಳ ಮೈಯಲ್ಲಿ ಅದೆಂತಹುದೋ ಮಾಯಕ ಶಕ್ತಿ ಬರಿಸಿಕೊಂಡು ಅವನನ್ನು ಪ್ರತಿ ಸಲ ಇನ್ನಿಲ್ಲದಂತೆ ಕಾಡುತ್ತಿದ್ದ ಅವಳ ಮೈ ಮೇಲಿನ 'ಇಂಟು ದ ನೈಟ್' ಬಾಡಿ ಲೋಷನ್ ಹಚ್ಚಿಕೊಂಡ. ಅದರ ವಾಸನೆಗೆ ಅವಳೊಡನೆ ಕಾದಾಡಿದ ಸಿಹಿಗಳಿಗೆಗಳೆಲ್ಲಾ ನೆನಪಾಗಿ ಚಳಿಗುಳ್ಳೆ ಎದ್ದವು. ಅವಳ ಮೈ ವಾಸನೆ ಹಾಗೆ ಉಳಿಸಿಕೊಳ್ಳಲು ಎರಡು ಮೂರು ದಿನ ಸ್ನಾನ ಮಾಡದೇ ಇದ್ದ ದಿನಗಳು ನೆನಪಾದವು.

ಲಿವೈಸ್ ಜೀನ್ಸ್ ಸೊಂಟಕ್ಕೇರಿಸಿಕೊಂಡು ಮರೂನ್ ಪ್ಲೈನ್ ಟೀ ಶರ್ಟ್ ಹಾಕಿಕೊಂಡ. ಎಲಿಕ್ಸರ್ ಡಿಯೋ ಹೊಡೆದುಕೊಂಡು ಮುಖವನ್ನೊಮ್ಮೆ ತೀಡಿಕೊಂಡ. ಫ್ಲ್ಯಾಟಿನ ಬೆಲ್ ಸದ್ದು. ಸ್ಕ್ಯಾನ್ ಮಾಡಿ ಅಮೆರಿಕ್ಯಾನೊ ತೆಗೆದುಕೊಂಡ. ನಾಲ್ಕು ಸಿಪ್ ಹೀರಿದ.

‘ಕಚಗುಳಿ ಆಗುತ್ತೆ ಕಣೋ’ ಎಂದು ಅವನ ಬಿಯರ್ಡ್ ಮುಟ್ಟಿ ಮತ್ತೆ ಮತ್ತೆ ತೋಳಿಗಾತುಕೊಳ್ಳುವ ಅವಳ ಕಣ್ಣ ಹೊಳಪು ನೆನಪಾಯ್ತು. ಜೊತೆಗೊಂದು ಟೀ ಶರ್ಟ್ ಶಾಟ್ಸ್ ತೆಗೆದುಕೊಳ್ಳೋದ ಬೇಡ್ವಾ ಎಂದು ಸ್ವಲ್ಪ ಹೊತ್ತು ಒದ್ದಾಡಿ ಇರಲಿ ಎಂದು ಎತ್ತಿಕೊಂಡ. ಫ್ಲ್ಯಾಟಿನಿಂದ ಹೊರಬಿದ್ದ.

ಅವನು ನಂಬಿ ಕಳೆದುಕೊಂಡು ಮತ್ತೆ ನಂಬುತ್ತಾ ಎಷ್ಟೋ ಜೀವಗಳನ್ನು ದಾಟಿಬಿಟ್ಟಿದ್ದ. ಬೇಗ ಮುಗಿಯುವ ಸಂಬಂಧಗಳನ್ನು ಬೇಗ ಶುರು ಕೂಡ ಮಾಡಬಾರದು ಎಂದುಕೊಂಡಿದ್ದ. ಎಡವಿ ಬಿದ್ದಾಗ ಹೆಬ್ಬೆರಳಲ್ಲಿ ಜೀವ ತೆಗೆಯುವ ನೋವಿಗೆ ಮುಂದೆ ಯಾವತ್ತೂ ಎಡವಬಾರದೆಂದು ಅಂದುಕೊಳ್ಳುವಂತೆ ಪ್ರತಿ ಸಲ ಜೀವವೊಂದು ಅವನ ಹೃದಯಕ್ಕೆ ನೋವು ಕೊಟ್ಟು ಹೋಗುವಾಗ ಇನ್ನೂ ಸಾಕಪ್ಪ ಮನಸಿನ ಸುಡುಗಾಡು ಕನೆಕ್ಷನ್ ಅಂದುಕೊಳ್ಳುತ್ತಿದ್ದ. ಹಾಗೆಂದುಕೊಂಡಾಗಲೆಲ್ಲ ಎಲ್ಲಿಂದಲೋ ರೆಕ್ಕೆ ಹಾರಿಸುತ್ತ ಭೂಮಿಗೆ ಇಳಿದವಳೊಬ್ಬಳು ಅವನ ತೋಳಿಗೆ ಭುಜ ಕೊಡುತ್ತಿದ್ದಳು ಮತ್ತೆ ಸೋಲುತ್ತಿದ್ದ ಗೆಲ್ಲುತ್ತಿದ್ದ ಸೋಲುತ್ತಿದ್ದ.

ಬದುಕು ಸೋಲು ಗೆಲುವುಗಳ ನೆನಪಿನ ಗಂಟುಮೂಟೆ. ಒಂದು ಹಂತದಲ್ಲಿ ಉಳಿಯೋದು ನೆನಪುಗಳಷ್ಟೇ, ಪಾರಿಜಾತಾಳಿಗೆ ಅವನು ಹೊಡೆದ ಡೈಲಾಗು. ನಕ್ಕು ಅವನ ಕಿವಿ ಹಿಂಡಿದ್ದಳು.
ಪಾರಿಜಾತ ಜೊತೆ ಸ್ನೇಹವಾಗುವ ಹೊತ್ತಿಗೆ ಅದು ಮೋಹದ ಕಿಡಿಯಾಗಿತ್ತು. ಈ ಸಲವಾದರೂ ಅಟ್ಯಾಚ್ ಆಗದೆ ಸಂಭಾಳಿಸಿಕೊಳ್ಳಬೇಕೆಂದುಕೊಂಡವನು ಹೆಚ್ಚು ಕಮ್ಮಿ ಸಫಲನಾಗಿದ್ದ. ಅವನಿಗಿಂತ ಅವಳೇ ಮೇಲುಗೈ. ಇವನು ದೇಹದಿಂದ ಮನಸಿನ ಭಾಷೆ ಅನುವಾದ ಮಾಡುವಾಗ ಅವಳು ಕಟು ವಿಮರ್ಶಕಿಯಂತೆ ನಕ್ಕು ಹರಿದು ಮುಕ್ಕುತ್ತಿದ್ದಳು. ಆಗೆಲ್ಲ ಎಚ್ಚರವಾಗುತ್ತಿದ್ದ.

‘ತೀರಾ ಹತ್ತಿರವಾದವರೇ ತುಂಬಾ ನೋವು ಕೊಡುವುದು’ ಎನ್ನುವುದು ಅವನು ಮರೆಯಲು ಹೇಗೆ ಸಾಧ್ಯ.

‘ಇಟ್ಸ್ ಇಂಪಾಸಿಬಲ್’ ಎಂದು ಅವಳು ಹೇಳಿ ಅವನನ್ನು ಕೆಡವಿಕೊಂಡು ಏಳನೇ ಸಲದ ಸವಾರಿಯಲ್ಲಿ ಕಚ್ಚಿದ್ದಳು. ‘ಐ ನೆವರ್ ಮೆಟ್ ಸಚ್ ಹೈ ಟೆಸ್ಟೋಸ್ಟ್ರಿನ್ ಮ್ಯಾನ್’ ಎಂದು ತಬ್ಬಿಕೊಂಡಿದ್ದಳು. ಅವಳಿಗಾದ ಆಶ್ಚರ್ಯ ಅವನಿಗೂ ಕೂಡ ಆಗಿತ್ತು. ಮೂರಲ್ಲ ನಾಲ್ಕಲ್ಲ ಏಳು ಸಲ. ಮಿರ್ಯಾಕಲ್. ಅಂತದ್ದೇನಿತ್ತು ಅವಳಲ್ಲಿ? ನಮ್ಮಿಬ್ಬರಲ್ಲಿ? ಪ್ರಶ್ನೆ.

‘ಇದೆಲ್ಲ ಹೇಗೆ ಸಾಧ್ಯವಾಗಿತ್ತು?’ ಎಂದು ಯೋಚಿಸಿ ಉತ್ತರವಿಲ್ಲದೆ ನಿದ್ದೆ ಹೋಗಿದ್ದ.

‘ಸರ್, ಇದೆ ಲೊಕೇಶನಾ’ ಎಂದು ಕ್ಯಾಬಿನವನು ಕೇಳಿದ. ಕೆಫೆಯಲ್ಲಿ ಕ್ರಾಸ್ ಲೆಗ್ಗಿನಲ್ಲಿ ಕೋಲ್ಡ್ ಕಾಫಿ ಕುಡಿಯುತ್ತಿದ್ದ ಪಾರಿಜಾತ ಕಂಡಳು ಇಳಿದ. ನೀಲಿ ಫ್ರಾಕ್. ಇಳಿಬಿಟ್ಟ ಕೂದಲು. ಬೆಳ್ಳನೆಯ ಕಾಲುಗಳು. ಒಂದು ಬಿಂದಿ. ಪ್ಲ್ಯಾಟಿನಮ್ ಸರ ಕತ್ತಿನಲ್ಲಿ. ರಾಗಂ ವಾಚ್ ಕೈಯಲ್ಲಿ. ಚಿನ್ನದ ಬ್ರಾಸ್ಲೆಟ್. ತೆಳು ನೀಲಿಯ ಗುಚ್ಚಿ ಹ್ಯಾಂಡ್ ಬ್ಯಾಗ್ ಬಗಲಿನಲ್ಲಿ. ಅವನನ್ನು ನೋಡಿದೊಡನೆ ಕುಡಿಯುತ್ತಿದ್ದ ಕಾಫಿ ಟೇಬಲ್ ಮೇಲಿಟ್ಟು ಎದ್ದಳು.

ಪಾರಿಜಾತ ಮುಖದಲ್ಲಿ ಮೊದಲ ಸಲ ನರ್ವಸ್ ನೆಸ್ ಎದ್ದು ಕಾಣುತ್ತಿತ್ತು. ಸದಾ ನಗು ಹೊತ್ತುಕೊಂಡಿರುತ್ತಿದ್ದ ಮುಖ ಸ್ಟಿಫ್ ಆಗಿತ್ತು. ಅವಳ ಕಣ್ಣುಗಳು ರಸ್ತೆ ಮೇಲೆ ನೆಟ್ಟಿದ್ದರು ಮನಸಲ್ಲಿ ನಡೆಯುವ ಜೋಕಾಲಿ ಅವನಿಗೆ ಗೊತ್ತಾಯ್ತು.

ಮೊದಲು ಜೋಕಿಗೆ ಎಂದು ಹೇಳಿ ಕಣ್ಣು ಹೊಡೆದಿದ್ದ. ಅವಳು ಸೀರಿಯಸ್ ಆಗಿ ತಗೊಂಡಿದ್ದಳು. ಅದೇ ವಿಷಯದ ಮೇಲೆ ಚ್ಯಾಟ್, ಮಾತು, ಎಲ್ಲವೂ ನಡೆದು ಇಲ್ಲಿಗೆ ಬಂದಿತ್ತು.

'ಆರ್ ಯು ಟೆನ್ಸ್ಡ್' ಎಂದ. ನಗಲು ಪ್ರಯತ್ನಿಸಿ ಸೋತು ಮುಚ್ಚಿಡಲಾಗದೆಂದು ತಿಳಿದು ‘ಯಸ್.. ರಜತ್ ..ಏನು ಆಗಲ್ಲ ಅಲ್ವ? ಈಸ್ ಹೀ ವೈಲ್ಡ್? ಸಾಫ್ಟ್? ಕಿಂಕಿಶ್?’ ಅದದೇ ಪ್ರಶ್ನೆ. ಅದದೇ ರೋಚಕತೆಯ ಕಲ್ಪನೆ. ಮಾದಕ ನುಡಿಯಲ್ಲಿ ಪ್ರಶ್ನೆಗಳು. ಒಂದು ಕಡೆ ರೋಚಕತೆ ಮತ್ತೊಂದು ಕಡೆ ಹೊಸ ಸಾಹಸಕ್ಕೆ ತೆರೆದುಕೊಳ್ಳುವ ಭಯಕ್ಕೆ ದೀಪಕ್ಕೆ ಸಿಕ್ಕ ಚಿಟ್ಟೆಯಂತೆ ಒದ್ದಾಡುತ್ತಿತ್ತು ಅವಳ ಮಾತುಗಳು.

ಅವಳಿಗೆ ಇಂತಹುದೊಂದು ರೋಚಕತೆಯ ಬೀಜ ಬಿತ್ತಿದ್ದು ಅವನೇ. ಒಂದು ನದಿ ಒಂದು ಸಮುದ್ರ ಕೂಡುವ ಕಲ್ಪನೆ ಹೊಸಕಿ ಹಾಕಿ ಜೋರು ಪ್ರವಾಹದೆಯೇ ನುಗ್ಗುವ ಎರಡು ನದಿಗಳು ಒಂದು ಸಮುದ್ರ ಸೇರಿದರೆ ಎದ್ದೇಳುವ ಅಲೆಗಳು ಹೇಗಿರಬಹುದೆಂದು ಅವಳನ್ನು ಕೆಣಕಿ, ಜೀ.ಐ.ಎಫ್ ಕಳಿಸಿ ಕೆರಳಿ ನರಳಿಸಿ ಒಪ್ಪಿಸಿದ್ದ.

ಹಾಗೆ ನೋಡಿದರೆ ಎರಡು ಸಮುದ್ರ ಸೇರುವ ನದಿಯ ಫ್ಯಾಂಟಸಿ ಹೊತ್ತವನು ಅದ್ಯಾವ ಗಳಿಗೆಯಲ್ಲಿ ಎರಡು ನದಿ ಒಂದು ಸಮುದ್ರ ಸೇರುವ ಕನಸು ಕಂಡನೋ ಆ ಕನಸುಗಳಲ್ಲಿ ಅವಳ ಕಣ್ಣುಗಳು ತೃಪಿಯನ್ನು ಸೂಸಿ ಅವಳ ನರಳುವಿಕೆಗಳು ಆಕಾಶಕ್ಕೆ ಜಿಗಿದಂತೆ ಆಗುತ್ತಿತ್ತು.

‘ಇಲ್ಲ, ಆ ತರ ಏನು ಆಗಲ್ಲ, ಯು ಕ್ಯಾನ್ ವಿತ್ ಡ್ರಾ ನೌ..ಬೇಕೆಂದರೆ ವಾಪಸ್’ ಹೋಗೋಣ ಎಂದ.

‘ನೋ..ನೋ..’ ಎಂದವಳ ಧ್ವನಿಯಲ್ಲಿ ಆಸೆಯ ಕಮಲ ಅರಳಿತ್ತು.

ನಕ್ಕ.

ಅವರು ಸೇರುವ ಜಾಗ ಹತ್ತಿರತ್ತಿರ ಬಂದ ಹಾಗೆ ಅವಳು ಅವನ ಭುಜ ಗಟ್ಟಿ ಹಿಡಿದಿದ್ದಳು. ಕೊನೆಗೂ ಆ ಜಾಗ ಬಂತು.

‘ಇಲ್ಲೇ’ ಎಂದು ಕ್ಯಾಬ್ ನಿಲ್ಲಿಸಿದ.

ಇಳಿದ ಪಾರಿಜಾತಗೆ ಕಾಣಿಸಿದ್ದು ಸಾಲ್ಟ್ ಅಂಡ್ ಪೆಪ್ಪರ್ ಲುಕ್ ಇದ್ದು, ಕಣ್ಣಿಗೆ ಸ್ಪೆಕ್ಸ್ ಹಾಕಿಕೊಂಡು ನಗುತ್ತ ನಿಂತ ‘ನಚಿಕೇತ’

ಅವಳ ಜೀವ ಬಡಿದುಕೊಳ್ಳಲು ಶುರುವಾಯ್ತು

‘ಐ ಥಿಂಕ್ ಐ ಲವ್ಡ್ ಯೂ’ ಎಂದಾಗ ನಚಿಕೇತ ಅಲ್ಲಿರಲಿಲ್ಲ. ವಾಷ್ ರೂಮಿನಲ್ಲಿದ್ದ. ಆ ಕ್ಷಣ ಅವನ ಬಾಯಿಂದ ಅಂತಹ ಮಾತು ಯಾಕೆ ಬಂತು ಎಂದು ಭಯಗೊಂಡ. ಮತ್ತೆಂದೂ ಪಾರಿಜಾತ ಜೊತೆ ಇರಲಾರೆ ಅನಿಸಿತು. ಕೊನೆಯ ಭೇಟಿ ಅನಿಸಿತು. ಅವಳ ಕಣ್ಣುಗಳನ್ನೇ ನೋಡುತ್ತಿದ್ದ.

ಪಾರಿಜಾತ ‘ಲವ್ ಯು ಟೂ’ ಎಂದು ಅಪ್ಪಿಕೊಂಡಿದ್ದಳು.

ಇಬ್ಬರು ಸ್ಟಾರ್ ಬಕ್ಸಿನ ಕಾರ್ನರ್ ಸೀಟಲ್ಲಿ ಕುಳಿತಿದ್ದರು. ಅವಳು ಕೋಲ್ಡ್ ಕಾಫಿ ಕುಡಿಯುತ್ತಿದ್ದಳು. ಮುಖದಲ್ಲಿ ನಗುವಿತ್ತು. ಕಳೆಯಿತ್ತು. ಹೊಳೆಯುತ್ತಿದ್ದಳು. ಕೂಡಿದರೆ ಎನರ್ಜಿ ಟ್ರಾನ್ಸ್ಫರ್ ಆಗುತ್ತೆ ಗ್ಲೋ ಬರುತ್ತೆ ಪ್ರತಿ ಸಲ ಹೇಳುತ್ತಿದ್ದ ಅವಳ ಮಾತು. ಅವನು ಮ್ಲಾನನಾಗಿ ಪೀಚ್ ಐಸ್ ಟೀ ಕುಡಿಯುತ್ತಿದ್ದ. ಪಾರಿಜಾತ ಅಷ್ಟು ಮೋನ್ ಮಾಡಿದ್ದು ಇಲ್ಲಿವರೆಗೂ ಕೇಳಿಯೇ ಇರಲಿಲ್ಲ.

ಅವಳ ಮೋನುಗಳು ಅವನಿಗೆ ಸಿಹಿಗುಳಿಗೆಗಳಾಗಿದ್ದವು. ಇಂದು ಯಾಕೋ ಇಷ್ಟವಿಲ್ಲದ ಗುಳಿಗೆಯೊಂದು ಅಷ್ಟು ನೀರಿಲ್ಲದೆ ನಾಲಗೆಯಲ್ಲೇ ಉಳಿದು ಕಹಿಯಾದಂತೆ ಅನಿಸಿಬಿಟ್ಟಿತು.

ಪಾರಿಜಾತ ಇದ್ದಕ್ಕಿಂದಂತೆ ಜೋರು ನಕ್ಕಳು.

‘ಏನಾಯ್ತು’ ಎಂಬಂತೆ ನೋಡಿದ. ಕೇಳಿದ. ಮತ್ತೆ ನಕ್ಕು 'ಬಡ್ಡಿಮಗ ...ಶುಗರ್ ಮಾಮಿ ಅಂತಾನೆ' ಎಂದು ಮತ್ತೆ ನಕ್ಕಳು. ದಾರಿಯುದ್ದಕ್ಕೂ ನಚಿಕೇತ ಅವಳನ್ನು ಹೊಗಳಿ ಅಟ್ಟಕ್ಕೇರಿಸಿದ್ದ ಮಾತುಗಳನ್ನೇ ಹೇಳುತ್ತಿದ್ದಳು. ಶೀ ಈಸ್ ಚೆರಿಸಿಂಗ್ ಮೊಮೆಂಟ್ಸ್. ' ಬಡ್ಡಿಮಗ ಏಂಜಲ್ ಅಂತೇ' ನಗು....'ಬಡ್ಡಿ ಮಗ ಶುಗರ್ ತರ ಇದೆ ಅಂತೇ...' ನಗು... 'ಬಡ್ಡಿ ಮಗ ಲುಕ್ ಅಟ್ ಮೀ ...ಹಾಗೆ ನೋಡಕ್ ಆಗುತ್ತಾ ಫಸ್ಟ್ ಟೈಮ್...' ನಗು...'ಆದ್ರೂ ಸಕತ್ ಕಿಲಾಡಿ ಕಣೋ ನಿನ್ ಫ್ರೆಂಡ್...' ಎಂದು ದಾರಿಯುದ್ದಕ್ಕೂ ಹೇಳುತ್ತಾ ನಗುತ್ತ ತುಂಬಾ 'ಬಡ್ಡಿಮಗ' ಸೇರಿಸಿದ್ದಳು.

ಆದರೆ ಯಾಕೆ ರ್ಧಗಂಟೆಗೆ ಉತ್ಸಾಹ ಕಳೆದುಕೊಂಡು 'ಪ್ಲೀಸ್ ಹೋಗೋಣ' ಎಂದಿದ್ದು? ನನಗೆ ನೋವಾಯ್ತು ಎಂದುಕೊಂಡಳಾ? ನನಗೆ ನೋವಾಗಿದ್ದು ನಿಜಕ್ಕೂ ಕಂಡಳಾ?

ಯೋಚಿಸುತ್ತ ಅವಳ ನಗು ನೋಡುತ್ತಿದ್ದ.

‘ಐ ಥಿಂಕ್ ಐ ಲವ್ಡ್ ಯೂ’ ಎನ್ನುವ ಮುನ್ನ ಆಫೀಸಿನ ಕಾಲ್ ಬಂದಿತ್ತು. ಮೆಲ್ಲಗೆ ಎದ್ದ. ಪಕ್ಕದ ರೂಮಿಗೆ ಹೋಗಿ ಮಾತಾಡಿದ್ದ. ಹಾಲಿನಿಂದ ಪಾರಿಜಾತ ನರಳುವಿಕೆ ಕೇಳಿ ಎದೆಯಲ್ಲಿ ನೋವೊಂದು ಚಿಲ್ ಎಂದು ಸಿಡಿಯಿತು. ಪಕ್ಕದ ರೂಮ್ ಕಡೆ ನೋಡಲು ಭಯವಾಗಿ ಕೂತ. ವಾರದ ಹಿಂದೆ ಅವನು ಕಳಿಸಿದ ಜಿ.ಐ.ಎಫ್ ಗಳಿಗೆ ಜೀವ ಬಂದಿತ್ತು. ರೋಚಕತೆ ಕಣ್ಣೆದುರು ನಿಜವಾಗುತ್ತಿದ್ದ ಗಳಿಗೆ. ಒಂದು ಸಲ ಸ್ಖಲಿಸಿದವನಿಗೆ ರೋಚಕತೆ ಜಾರಿತ್ತು. ಮಿಥುನದಲ್ಲಿ ಗಂಡು ಯಾವತ್ತಿದ್ದರೂ ನದಿ. ಹೆಣ್ಣು ಸಮುದ್ರ.

ನಡುಗುತ್ತ ಬೆರಳುಗಳಲ್ಲಿ ನೋಟ್ ಮಾಡಿಕೊಂಡ

‘‘ನೂರು ಚೂರಿಗಳು ಇರಿದು ಕೊಂದವು.
ಹೃದಯ ನೆತ್ತರಲ್ಲಿ ಬಿದ್ದಿತ್ತು’’

ಜೀನ್ಸ್ ಏರಿಸಿಕೊಂಡ. ಫ್ರಿಡ್ಜಿನಲ್ಲಿ ಜೆಕಬ್ಸ್ ವೈನ್ ಇತ್ತು ಕುಡಿದ. ಹಾಲಿನಿಂದ ಪಾರಿಜಾತಳ ಕಿಲ ಕಿಲ ನಗು, ಸ್ಪಷ್ಟವಾಗಿ ಕೇಳಿಸದ ಅವಳ ಪಿಸುನುಡಿಗಳು, ಭಾರವಾದ ಉಸಿರು, ನಚೀ ಎಂಬ ನರಳಿಕೆ, ಇಡೀ ಮನೆಯನ್ನ ಆವರಿಸಿದ್ದ ಅವಳ ಮೈ ಪರಿಮಳ. ಮೋನಿಂಗ್ಸ್.

ಪಾರಿಜಾತ ನಗುತ್ತ ಬಂದು ಅವನ ಪಕ್ಕ ಕುಳಿತಳು. ನಚಿಕೇತ ವಾಷ್ ರೂಮಿನಲ್ಲಿ ಫ್ಲಶ್ ಮಾಡಿದ ಸದ್ದು. ಸುಸ್ತಾದವಳಂತೆ ಅವನ ಭುಜಕ್ಕೆ ಒರಗಿದಳು. ಅವನ ಬೆವರಿನ ಕೈ ಹಿಡಿದಳು. ಅವನ ಕೆನ್ನೆಗೆ ಮುತ್ತಿಟ್ಟಳು.

‘ಫ್ಲ್ಯಾಟಿಗೆ ಹೋಗೋಣ್ವಾ? ಪ್ಲೀಸ್ ..’ ಎಂದಳು. ನಚಿಕೇತ ಬಂದೊಡನೆ ನಿಲ್ಲಿಸಿದಳು. ‘ಬಡ್ಡಿಮಗ’ ಎಂದು ಮೆಲ್ಲಗೆ ಹೇಳಿದ್ದು ಕೇಳಿಸಿತು ಅವನಿಗೆ.

ಅಲ್ಲಿಂದ ಮರಳುವಾಗ ನಚಿಕೇತನನ್ನು ತಬ್ಬಿಕೊಂಡು ಬೈ ಅಂದಳು. ‘ಓಕೇ ಮಾಮಿ’ ಅಂದ. ಗೊಳ್ ಎಂದು ನಕ್ಕು ಕ್ಯಾಬ್ ಹತ್ತಿ ಕೂತಳು.

‘ಬಡ್ಡಿಮಗ’ ಅವಳ ಬಾಯಿಂದ ಎರಡನೇ ಸಲ ಬಂತು.

ಅವಳನ್ನು ಫ್ಲ್ಯಾಟಿಗೆ ಬಿಟ್ಟು ಹೊರಡಬೇಕೆಂದುಕೊಂಡಿದ್ದ. ಉಬರಿನಲ್ಲಿ ಕೈ ಹಿಡಿದು ಮಾತಾಡದೆ ಆಗಾಗ ನಕ್ಕು, ಬಡ್ಡಿಮಗ ಎಂದು ತನಗೆ ತಾನೇ ಹೇಳಿಕೊಂಡು ಕುಳಿತಿದ್ದಳು. ರಜತ್ ಖಾಲಿಯಾಗಿ ಹೊರಗೆ ನೋಡುತ್ತಿದ್ದ. ಖಾಲಿಯಾಗಿದ್ದ.

ಅವಳು ‘ಪ್ಲೀಸ್...ಬಾ..ಆಮೇಲೆ ಹೋಗು’ ಎಂದಳು.

ಬಿಡುಗಡೆಯ ಬಯಸಿ ಬಂಧನಕ್ಕೊಳಗಾದ.

‘ಮೊದಲೆಲ್ಲ ಲವ್ ಯು ಅಂದ್ರೆ ಮುಸುಡಿ ತಿರುಗಿಸಿ ನಗ್ತಿದ್ದೆ. ಅಟ್ಯಾಚ್ಮೆಂಟ್ ಬೇಡ ಅಂತಿದ್ದೆ. ಲವ್ವು ಪವ್ವು ನೋವು ಎಂದು ರೈಮ್ ಹೊಡಿತಿದ್ದೆ, ಈಗೇನಾಯ್ತು? ಇಗೋ ಹರ್ಟೆಡ್? ಏನಾಯ್ತು ನಿನಗೆ. ವೈ ಯು ಸೆಡ್ ಐ ಲವ್ಡ್ ಯು. ಡಿಡ್ ಯು ಹಾರ್ಟ್' ಎಂದಳು.

ಅವನಿಗೆ ಏನು ಹೇಳಬೇಕು ಗೊತ್ತಾಗಲಿಲ್ಲ. ಶೂನ್ಯ ದೃಷ್ಟಿಯಲ್ಲಿ ಅವಳನ್ನು ನೋಡುತ್ತಿದ್ದ ಅವಳು ತುಟಿ ಒತ್ತಿದ್ದಳು. ಲವ್ ಕ್ಯಾನ್ ಹ್ಯಾಪೆನ್ ಮೆನಿ ಟೈಮ್ ರಜೂ ಕಿವಿಯಲ್ಲಿ ಹೇಳಿದಳು.

‘ಡಿಡ್ ಯು ಎಂಜಾಯ್?’ ಎಂದ. ನೋ ಎನ್ನಲಿ ಎನ್ನುವಂತಿತ್ತು ಅವನ ನೋಟ. ನೋ ಎಂದರೆ ಸುಳ್ಳು. ಯೆಸ್ ಎಂದರೆ ಅವನಿಗೆ ನೋವು.

ನಕ್ಕಳು. ‘ಬಡ್ಡಿಮಗ’ ಎಂದಳು.

‘ಸರಿ ಐ ಲೀವ್ ನೌ’ ಅವನು ಅಲ್ಲಿಂದ ಹೊರಡಬೇಕು ಎಂದುಕೊಂಡ. ಕೆಡವಿಕೊಂಡಳು.

‘ಎಕ್ಸೈಟ್ ಆಗಿದ್ದೆ ನಿಜ. ಬಟ್ ನಿನ್ ತರ ಯಾರೂ ಇಲ್ಲ, ರಜತ್ ಟ್ರಸ್ಟ್ ಮೀ’ ಎಂದು ಗಾಢವಾಗಿ
ಚುಂಬಿಸಿದಳು. ಅವನು ಬಿಸಿಯಾದ. ಕರಗಿಹೋಗುತ್ತಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.