ಬುಧವಾರ, ಏಪ್ರಿಲ್ 8, 2020
19 °C

‘ಗ್ಯಾಂಬ್ಲಿಂಗ್’ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಾವಿದ ನವೀನ್ ಕುಮಾರ್ ಬಿ., ಅವರ ‘ಗ್ಯಾಂಬ್ಲಿಂಗ್’ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಇದೇ 27ರಿಂದ ಆಯೋಜನೆಗೊಂಡಿದೆ. ಹಿರಿಯ ಕಲಾವಿದರಾದ ಚಂದ್ರನಾಥ್ ಆಚಾರ್ಯ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಆರ್ಟ್‌ ಪ್ರಮೋಟರ್ ಸಾರಾ ಅರಕ್ಕಲ್‌, ಆನಂದಸಾಯಿ ಶಿವಲಿಂಗನ್ ಭಾಗವಹಿಸುವವರು.

ನವೀನ್ ಕುಮಾರ್ ಬಿ ಕಲಾಕೃತಿಯು ದಿನ ನಿತ್ಯದ ಸಾಮಾಜಿಕ ಹಾಗೂ ರಾಜಕೀಯ ವಿದ್ಯಮಾನಗಳತ್ತ ಸ್ವಯಂ ಅನುಭವದ ಪ್ರತಿಬಿಂಬವಾಗಿದೆ. ಅಸ್ಪಷ್ಟ ಹೇಳಿಕೆಗಳು ಬಣ್ಣ ಮತ್ತು ಕುಂಚಗಳ ಸಮಾಗಮದಿಂದ ಅಧಿಕೃತ ರೂಪವಾಗಿ ಕ್ಯಾನ್‌ವಾಸ್‌ ಮೇಲೆ ನಿರ್ಮಿಸಿದ್ದಾರೆ.

ಕಲಾಕೃತಿಯು ಮನುಷ್ಯನ ಅಸ್ತಿತ್ವ ಹಾಗೂ ಕಲಾವಿದನ ಮನಸ್ಸು ಮತ್ತು ಹೊರ ಜಗತ್ತಿನ ಘರ್ಷಣೆಗಳನ್ನು ಒಂದು ಚೌಕಟ್ಟಿನಲ್ಲಿ ಮೂಡಿಸಿದ್ದ ಕಲಾಕೃತಿಗಳು ದೃಶ್ಯಾತ್ಮಕ ಚರ್ಚೆಯಾಗಿವೆ.

ಇವರ ಕಲಾಕೃತಿಗಳು ಪ್ರಸ್ತುತ ರಾಜಕೀಯದ ವಿಡಂಬನಾತ್ಮಕ ಚಿತ್ರಣವನ್ನು ವ್ಯಾಖ್ಯಾನಿಸುತ್ತಿವೆ.

ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ ಕುಮಾರ ಕೃಪ ರಸ್ತೆ, ಸಂಜೆ 5 ಗಂಟೆಗೆ ಮಾರ್ಚ್‌ 1ರವರೆಗೆ ಪ್ರದರ್ಶನವಿರುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)