ಬಣ್ಣದ ಸಾಲು ದೋಣಿಯ ನೆನಪು

7

ಬಣ್ಣದ ಸಾಲು ದೋಣಿಯ ನೆನಪು

Published:
Updated:
Deccan Herald

ನನಗೆ ಮಳೆಯೆಂದರೆ ಇಷ್ಟ. ಅದರಲ್ಲೂ ಮುಂಗಾರಿನ ಮೊದಲ ಮಳೆಯ ಮಣ್ಣಿನ ಘಮಲು ಬಲು ಇಷ್ಟ. ಚಿಕ್ಕವರಿದ್ದಾಗ ಮನೆಯಲ್ಲಿ ಇದ್ದಾಗ ಮಳೆ ಬಂದರೆ ನೆನೆಯಲು ಬಿಡುತ್ತಿರಲಿಲ್ಲ. ಹಾಗಾಗಿ ಶಾಲೆಗೆ ಹೋಗುವಾಗ ಮಳೆ ಬರಲೆಂದು ಬೇಡುತ್ತಿದ್ದೆ. ಮಳೆ ಬಂದರೆ ರೋಮಾಂಚನ.

ನಮ್ಮ ಶಾಲೆಯ ಎದುರಿಗೆ ಒಂದು ಆಳವಾದ ಗುಂಡಿ ಇತ್ತು. ಅದು ಮಳೆ ಬಂದಾಗ ತುಂಬುತಿತ್ತು. ನಾವು ಐವರು ಗೆಳತಿಯರು ಶಾಲೆ ಮುಗಿದ ಮೇಲೆ ಒಬ್ಬೊಬ್ಬರು ಒಂದೊಂದು ಬಣ್ಣದ ಕಾಗದದ ಹಾಳೆಯಲ್ಲಿ ದೋಣಿಗಳನ್ನ ಮಾಡಿ  ಬಿಡುತ್ತಿದ್ದೆವು. ಆ ಐದು ಬಣ್ಣದ ದೋಣಿಗಳನ್ನು ನೋಡುವುದೇ ನಮಗೆ ಸೊಬಗು. ಈಗಲೂ ಬಣ್ಣದ ಸಾಲು ದೋಣಿಗಳು ನೆನಪಾಗುತ್ತವೆ.

ವೀಣಾ ಕುಂಬಾರ್, ಎಂ.ಕೆ. ಬಡಾವಣೆ. ಕೊಟ್ಟೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !