ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಧಾನಿಯಲ್ಲಿ ಮೈಸೂರು ಕಲಾವಿದನ ಚಿತ್ರಕಲಾ ಪ್ರದರ್ಶನ

Last Updated 6 ಜುಲೈ 2018, 12:55 IST
ಅಕ್ಷರ ಗಾತ್ರ

ಮೈಸೂರಿನ ಹಿರಿಯ ಕಲಾವಿದ ಎಲ್.ಶಿವಲಿಂಗಪ್ಪ ಅವರು ಇದುವರೆಗೂ ಬಿಡಿಸಿದ ಪೇಂಟಿಂಗ್‌ಗಳಲ್ಲಿ ಆಯ್ದ 40 ಹಾಗೂ ಥರ್ಮಾಕೋಲ್‌, ಮರಳು, ಸಿಮೆಂಟ್‌, ಕಲ್ಲಿನಿಂದ ಮಾಡಿದ 10 ಕೆತ್ತನೆಗಳ ಪ್ರದರ್ಶನ ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ಶುಕ್ರವಾರ (ಜುಲೈ 6) ಆರಂಭವಾಗಿದ್ದು ಜುಲೈ 8ರವರೆಗೆ ನಡೆಯಲಿದೆ.

ನಿಸರ್ಗ ಚಿತ್ರಗಳನ್ನು ಕುಂಚದಿಂದ ಹಾಗೂ ಪ್ಲಾನೆಟ್‌ ನೈಫ್‌ ಮೂಲಕ ಬಿಡಿಸಿದ್ದು ಅವುಗಳನ್ನು ನೋಡಿದಾಗ ಆ ಸ್ಥಳವನ್ನು ನೇರವಾಗಿ ನೋಡಿ ಬಂದ ಅನುಭವ ಆಗುವಂತಿವೆ. ನೈಜ ಚಿತ್ರಗಳಲ್ಲಿ ಸಿಂಗಲ್‌ ಹಾಗೂ ಡಬಲ್‌ ಕಲರ್‌ನಲ್ಲಿ ಹಳ್ಳಿಯ ಬದುಕು, ನಿರೀಕ್ಷೆ ಸಂದೇಶ ಸಾರುವ ಇಳಿಸಂಜೆಯಲ್ಲಿ ಕುಳಿತ ಅಜ್ಜಿ, ಬಸವ ತತ್ವ, ವಚನಗಳ ಸಾರಕ್ಕೆ ಬಣ್ಣ ತುಂಬಿದ ಚಿತ್ರ ಅದರಲ್ಲಿ ‘ತನು ಬೆತ್ತಲಾದರೇನು... ಮನಬೆತ್ತಲಾಗದ ತನಕ..’ ಎಂದು ಜ್ಞಾನಕ್ಕೆ ಪೂಜಾ ವಸ್ತ್ರದಲ್ಲಿ ಅರ್ಧದೇಹವನ್ನು ಬೆತ್ತಲಾಗಿಸಿಕೊಂಡು ಕುಳಿತರು, ಮನದಲ್ಲಿ ನಾನಾ ವಿಚಾರಗಳನ್ನು ಮಾಡುತ್ತಿದ್ದರೆ ಏನು ಪ್ರಯೋಜನ ಎಂಬುದನ್ನು ಅತ್ಯಂತ ಮನಮೋಹಕವಾಗಿ ಚಿತ್ರಿಸಿದ್ದಾರೆ.

ವಸಂತ ಕಾಲದಲ್ಲಿ ಪ್ರಕೃತಿ ಸೌಂದರ್ಯ, ಮಲೆನಾಡಿನ ಮಳೆಗಾಲದ ದೃಶ್ಯ, ಕೂಡಲಸಂಗಮ ಐಕ್ಯ ಮಂಟಪ, ಹಲವು ನಿಸರ್ಗ ಚಿತ್ರಣ, ಮನಸ್ಸೊಂದು–ಮಾತೊಂದು (ದ್ವಿಮುಖ ನೀತಿ), ಅರ್ಚನೆ–ಶೋಷಣೆ (ಭಕ್ತನ ಚಿತ್ರ ದೇವರತ್ತ, ಪೂಜಾರಿ ದೃಷ್ಟಿ ಆರತಿ ತಟ್ಟೆಯತ್ತ), ಬಡತನಕೆ ಉಂಬುವ ಚಿಂತೆ, ಜಾತಿ ಹಲವು ಮಿಲನ ಒಂದೇ, ಜನಪದರ ವೇಷ ಹೀಗೆ ಹಲವು ಪೇಂಟಿಂಗ್‌ಗಳು ಜೀವನದ ನೈಜತೆಗೆ ಕನ್ನಡಿ ಹಿಡಿಯುವಂತಿವೆ.

ಮಂಗೋಲಿಯಾದಲ್ಲಿ ದಾಳಿ ನಡೆದಾಗ ಕ್ರೂರತೆಯು ಶಾಂತಿಧೂತ ಬುದ್ಧನ ಕಣ್ಣಲ್ಲಿ ನೀರು ತರಿಸಿದ್ದನ್ನು ಮಾರ್ಮಿಕವಾಗಿ ಚಿತ್ರಿಸಿದ್ದಾರೆ.

ಬಡತನವಿದ್ದರೂ ಕಲೆಯನ್ನು ಆರಾಧಿಸಿದ್ದೆನೆ. ನನಗೆ ಕಲೆ ಹೆಸರು, ಗೌರವ ತಂದುಕೊಟ್ಟಿದೆ. ಈಗ ಚಿತ್ರಕಲಾ ಪರಿಷತ್‌ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಕ್ಕೆ ಅವಕಾಶ ನೀಡಿದ್ದು ಸಂತಸ ತಂದಿದೆ. ಯುವಕಲಾವಿದರಿಗೆ ಸಹಾಯ, ಮಾರ್ಗದರ್ಶನ ಜೊತೆ ಅವರ ಪೇಂಟಿಂಗ್ ಪ್ರದರ್ಶನಕ್ಕೆ ಮೈಸೂರಿನಲ್ಲಿ ನನ್ನ ಮನೆಯಲ್ಲಿಯೇ ಗ್ಯಾಲರಿ ಒದಗಿಸಿದ್ದು ಮಾನಸಿಕ ನೆಮ್ಮದಿ ನೀಡಿದೆ ಎನ್ನುತ್ತಾರೆ ಹಿರಿಯ ಕಲಾವಿದ ಎಲ್.ಶಿವಲಿಂಗಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT