ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಒಎಗೆ ಗೋವಿಂದರಾಜ್ ಅಧ್ಯಕ್ಷ

Last Updated 6 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಪರಿಷತ್ ಸದಸ್ಯ ಮತ್ತು ಮುಖಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಕೆ.ಗೋವಿಂದರಾಜ್‌ ಅವರು ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದಾರೆ. ಕರ್ನಾಟಕ ಒಲಿಂಪಿಕ್ ಭವನದಲ್ಲಿ ಭಾನುವಾರ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮುಂದಿನ ನಾಲ್ಕು ವರ್ಷಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷ ಸೋಮಶೇಖರ್ ಅವರ ಬದಲಿಗೆ ರಾಜ್ಯ ಅಮೆಚೂರ್‌ ಸೈಕ್ಲಿಂಗ್ ಸಂಸ್ಥೆಯ ಅಧ್ಯಕ್ಷ ಎಸ್‌.ಎಂ.ಗೋರೆ ಅವರು ಆಯ್ಕೆಯಾದರು. ಈ ಬದಲಾವಣೆ ಬಿಟ್ಟರೆ ಉಳಿದಂತೆ ಎಲ್ಲರೂ ಪುನರಾಯ್ಕೆ ಆದರು.

ಪದಾಧಿಕಾರಿಗಳು: ಕೆ.ಗೋವಿಂದರಾಜ್‌ (ರಾಜ್ಯ ಬ್ಯಾಸ್ಕೆಟ್‌ಬಾಲ್ ಸಂಸ್ಥೆ–ಅಧ್ಯಕ್ಷ); ಎಂ.ಮೋಹನರಾಜ್‌ (ಫುಟ್‌ಬಾಲ್ ಸಂಸ್ಥೆ), ಜೆ.ಪಿ.ಕಾರ್ನೆರೊ (ಟ್ರಯಾಥ್ಲಾನ್ ಸಂಸ್ಥೆ), ಎಸ್‌.ಎಂ.ಗೋರೆ (ಅಮೆಚೂರ್ ಸೈಕ್ಲಿಂಗ್ ಸಂಸ್ಥೆ), ಆರ್‌.ವೆಂಕಟೇಶ್‌ (ಅಮೆಚೂರ್ ಆರ್ಚರಿ ಸಂಸ್ಥೆ), ಡಿ.ಚಂದ್ರಹಾಸ ರೈ (ವೇಟ್‌ಲಿಫ್ಟಿಂಗ್‌ ಸಂಸ್ಥೆ–ಎಲ್ಲರೂ ಉಪಾಧ್ಯಕ್ಷರು); ಅನಂತರಾಜು (ಅಮೆಚೂರ್‌ ಆರ್ಚರಿ ಸಂಸ್ಥೆ–ಪ್ರಧಾನ ಕಾರ್ಯದರ್ಶಿ); ಎಸ್‌.ಆರ್.
ಶಿವಾನಂದ (ಜೂಡೊ ಸಂಸ್ಥೆ–ಜಂಟಿ ಕಾರ್ಯದರ್ಶಿ), ಆರ್‌.ಪ್ರಕಾಶ್‌ (ಫೆನ್ಸಿಂಗ್ ಸಂಸ್ಥೆ–ಜಂಟಿ ಕಾರ್ಯದರ್ಶಿಗಳು); ರಾಜೇಶ್‌ ಎನ್‌.ಜಗ
ದಾಳೆ (ಶೂಟಿಂಗ್ ಸಂಸ್ಥೆ–ಖಜಾಂಚಿ); ಬ್ಯಾಡ್ಮಿಂಟನ್ ಸಂಸ್ಥೆ, ಕನೋಯಿಂಗ್ ಮತ್ತು ಕಯಾಕಿಂಗ್‌ ಸಂಸ್ಥೆ, ಹಾಕಿ ಕರ್ನಾಟಕ, ಲಾನ್ ಟೆನಿಸ್‌ ಸಂಸ್ಥೆ, ಈಜು ಸಂಸ್ಥೆ, ಟೇಕ್ವಾಂಟೊ ಸಂಸ್ಥೆ, ವಾಲಿಬಾಲ್ ಸಂಸ್ಥೆ ಮತ್ತು ಕುಸ್ತಿ ಸಂಸ್ಥೆಗಳನ್ನು ಕಾರ್ಯಕಾರಿ ಸಮಿತಿಗೆ ಸೇರಿಸಲಾಯಿತು.

ಜಿಲ್ಲಾ ನಿವೃತ್ತ ನ್ಯಾಯಾಧೀಶ ಪಿ.ಎಸ್. ಹಿರೇಮಠ ಅವರು ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT