ಗುರುವಾರ , ಜೂನ್ 30, 2022
27 °C

ಪುಸ್ತಕ ವಿಮರ್ಶೆ | ಸಾರ್ವತ್ರಿಕ ಕೃತಿ ಅನಿಮಲ್‌ ಫಾರ್ಮ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಈ ಕೃತಿಯು ಇಂಗ್ಲಿಷ್‌ನ ನೂರು ಪ್ರಸಿದ್ಧ ಕಾದಂಬರಿಗಳ ಪೈಕಿ ಒಂದು ಎಂದು ಟೈಮ್‌ ಮ್ಯಾಗಜಿನ್‌ನಿಂದ ಉಲ್ಲೇಖಗೊಂಡ ಜಾರ್ಜ್‌ ಆರ್ವೆಲ್‌ ಅವರ ‘ಅನಿಮಲ್‌ ಫಾರ್ಮ್‌’ನ ಅನುವಾದ.

ಜಾರ್ಜ್‌ ಆರ್ವೆಲ್‌ ಮೂಲ ಹೆಸರು ಎರಿಕ್‌ ಅರ್ಥರ್‌ ಬ್ಲೇರ್‌. ಮೊನಚಾದ ಬರವಣಿಗೆಯೇ ‘ಜಾರ್ಜ್‌ ಆರ್ವೆಲ್‌’ ಎಂಬ ಕಾವ್ಯನಾಮದ ಹುಟ್ಟಿಗೆ ಕಾರಣ. ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುವವರನ್ನು ತೀಕ್ಷ್ಣವಾಗಿ ಟೀಕಿಸುವುದರಲ್ಲಿ ಆರ್ವೆಲ್‌ಗಿಂತ ಬೇರೊಬ್ಬ ಲೇಖಕರು ಇರಲಿಲ್ಲ ಎಂದು ವಿಮರ್ಶಕರು ಉಲ್ಲೇಖಿಸುತ್ತಾರೆ.

ಈ ಕೃತಿಯಲ್ಲಿ, ಕೊಟ್ಟಿಗೆಯಲ್ಲಿರುವ ವಿವಿಧ ಪ್ರಾಣಿಗಳನ್ನೇ ಪಾತ್ರಗಳನ್ನಾಗಿಸಿ ರಷ್ಯಾ ಕ್ರಾಂತಿಯ ಪೂರ್ವ ಮತ್ತು ನಂತರದ ಘಟನೆಗಳನ್ನು ಆರ್ವೆಲ್‌ ಮರುಸೃಷ್ಟಿಸುತ್ತಾರೆ. ಇಂದಿಗೂ ಪ್ರಸ್ತುತ ಎನ್ನುವಂತೆ ದೌರ್ಜನ್ಯವನ್ನು ಕಾಲ್ಪನಿಕ ಕಥೆಯ ರೂಪದಲ್ಲಿ ಇಲ್ಲಿ ಆರ್ವೆಲ್‌ ಪ್ರಸ್ತುತಪಡಿಸಿದ್ದಾರೆ. ‘ಹೀಗಾಗಿ ಇದು ಕೇವಲ ಪ್ರಾಣಿಗಳ ಕಥೆಯಲ್ಲ. ರಷ್ಯಾ ಕ್ರಾಂತಿಯ ನಂತರ, ನಿರಂಕುಶ ಪ್ರಭುತ್ವದ ಪ್ರತಿಪಾದಕನಾಗಿದ್ದ ಸ್ಟಾಲಿನ್‌ ವಾದದ ಉದಯ ಹಾಗೂ ಸೋವಿಯತ್‌ ಒಕ್ಕೂಟದ ಅವನತಿಯನ್ನು ಬಿಂಬಿಸುತ್ತವೆ’ ಎಂದಿದ್ದಾರೆ ಲೇಖಕ ಈಶ್ವರ ಹತ್ತಿ.  ಈ ಕೃತಿಯು ಈಗಲೂ ಪ್ರಸ್ತುತ ಎನ್ನುವಂತಿದೆ. ಹಲವು ವಿದ್ಯಮಾನಗಳಿಗೆ ಕೈಗನ್ನಡಿಯಂತೆ ಕೆಲ ಪಾತ್ರಗಳು, ಘಟನೆಗಳು ತೋಚುತ್ತವೆ. ಪ್ರಾಣಿಗಳ ಲೋಕದ ಮೂಲಕ ಈ ಜಗತ್ತಿನ ಹಲವು ವಿಚಾರಗಳು ಇಲ್ಲಿ ಅನಾವರಣಗೊಳ್ಳುತ್ತವೆ. ‘ಮನುಷ್ಯರು ಮನುಷ್ಯರೆ! ಪ್ರಾಣಿಗಳು ಪ್ರಾಣಿಗಳೆ’ ಎನ್ನುವ ಕೊನೆಯಲ್ಲಿನ ಉಲ್ಲೇಖ ಕೃತಿಯ ಜೀವಾಳ. ಗೂಢಾರ್ಥಗಳನ್ನೊಳಗೊಂಡ ಭಾಷಾಂತರ ಪರಿಣಾಮಕಾರಿಯಾಗಿದ್ದು, ಓದಿಗೆ ಪೂರಕವಾಗಿದೆ.

ಕೃತಿ: ಅನಿಮಲ್‌ ಫಾರ್ಮ್‌

ಮೂಲ: ಜಾರ್ಜ್‌ ಆರ್ವೆಲ್‌

ಕನ್ನಡಕ್ಕೆ: ಈಶ್ವರ ಹತ್ತಿ

ಪ್ರ: ಎಸ್‌.ಎಚ್‌.ಐ ಪ್ರಕಾಶನ, ಕೊಪ್ಪಳ

ಸಂ: 9823050797

ಪುಟ: 166

ದರ: 160

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು