ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು: ಭೀಮಣ್ಣನ ಜೀವನ ದರ್ಶನ

Last Updated 6 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಹಿಂದೂಸ್ತಾನಿ ಸಂಗೀತದ ದಿಗ್ಗಜ ಪಂಡಿತ್‌ ಭೀಮಸೇನ ಜೋಶಿ ಅವರ ಬಗ್ಗೆ ಕನ್ನಡದಲ್ಲಿ ಈಗಾಗಲೇ ಕೆಲವು ಕೃತಿಗಳು ಹೊರಬಂದಿವೆ. ಸಂಗೀತಾಸಕ್ತರಾಗಿದ್ದು, ಈ ಕ್ಷೇತ್ರದ ಮೇರು ಗಾಯಕರಾದ ಕುಮಾರ ಗಂಧರ್ವ, ರಾಮಭಾವು ವಿಜಾಪುರೆ, ಬಸವರಾಜ ರಾಜಗುರು ಅವರ ಜೀವನಚರಿತ್ರೆಗಳನ್ನು ಬರೆದಿರುವ ಶಿರೀಷ್ ಜೋಶಿ ಅವರು ‘ಭಾರತ ರತ್ನ ಭೀಮಣ್ಣ’ ಕೃತಿಯಲ್ಲಿ ಭೀಮಸೇನ ಜೋಶಿ ಅವರ ಸಂಗೀತ ರಸಯಾನದ ಮೈಲುಗಲ್ಲುಗಳನ್ನು ಕಟ್ಟಿಕೊಟ್ಟಿದ್ದಾರೆ.

ಸಂಗೀತ ಕಲಿಕೆಯ ಬೆನ್ನುಹತ್ತಿದ ಜೋಶಿ ಅವರು ಆರಂಭಿಕ ದಿನಗಳಲ್ಲಿ ಪಟ್ಟ ಪಾಡು, ಅವರ ಯಶಸ್ಸಿನ ದಿನಗಳು, ವೈಯಕ್ತಿಕ ಬದುಕು, ಅವರ ಬಗ್ಗೆ ಇತರ ದಿಗ್ಗಜರ ಅನಿಸಿಕೆಗಳನ್ನು 9 ಅಧ್ಯಾಯಗಳಲ್ಲಿ ಸರಳವಾಗಿ ಕಟ್ಟಿಕೊಟ್ಟಿದ್ದಾರೆ. ಜೋಶಿ ಬಗ್ಗೆ ಬರೆದ ಇತರ ಲೇಖಕರ ಕೃತಿಗಳ ಉಲ್ಲೇಖಗಳನ್ನೂ ಸಾಂದರ್ಭಿಕವಾಗಿ ದಾಖಲಿಸಿದ್ದಾರೆ. ಜೋಶಿ ಅವರಿಗೆ ನೆರವಾದ ಆ ಕಾಲದ ಇತರ ಸಂಗೀತಗಾರರ ಬಗ್ಗೆಯೂ ವಿವರಗಳನ್ನು ನೀಡಿದ್ದಾರೆ.

ಜೊತೆಗೆ ವಿವಿಧೆಡೆ, ಕಿರಾನಾ ಘರಾಣೆಯ ಹಿನ್ನೆಲೆ, ಕಯಾಲ್‌ ಸೇರಿದಂತೆ ಸಂಗೀತದ ಕೆಲವು ಪಾರಿಭಾಷಿಕ ಪದಗಳ ಬಗ್ಗೆ ವಿವರಣೆಯನ್ನೂ ನೀಡಿದ್ದಾರೆ. ಸಂಗೀತ ಕಲಿಯುವ ವಿದ್ಯಾರ್ಥಿಗಳಿಗೆ ಕಿವಿಮಾತುಗಳೂ ಇವೆ. ಈ ಕಾರಣಗಳಿಂದ ಇದು, ಪಂ.ಗಣಪತಿ ಭಟ್‌ ಹಾಸಣಗಿ ಅವರು ಮುನ್ನುಡಿಯಲ್ಲಿ ಬರೆದಿರುವಂತೆ ಸಂಗೀತಾಸಕ್ತ ವಿದ್ಯಾರ್ಥಿಗಳು ಓದಲೇಬೇಕಾದ ಕೃತಿ.

ಕೃತಿಯ ಕೆಲವು ಕಡೆ ‍ಪುನರಾವರ್ತನೆಯಿದೆ ಎಂಬ ಭಾವನೆ ಮೂಡುತ್ತದೆ. ಆದರೆ ಕುತೂಹಲಕರ ಮಾಹಿತಿಯಿಂದಾಗಿ ಓದಿಸಿಕೊಂಡು ಹೋಗುತ್ತದೆ.

ಕೃತಿ: ಭಾರತರತ್ನ ಭೀಮಣ್ಣ

ಲೇ: ಶಿರೀಷ್ ಜೋಶಿ

ಪ್ರ: ಯಾಜಿ ಪ್ರಕಾಶನ

ಸಂ: 7019637741

ಪು: 238

₹260

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT