ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು: ವ್ಯಕ್ತಿಯಾಚೆಗಿನ ವಿಶಾಲ ನೋಟ

Last Updated 23 ಜುಲೈ 2022, 22:30 IST
ಅಕ್ಷರ ಗಾತ್ರ

‘ಸೇವೆ ಮತ್ತು ರಾಜಕೀಯಕ್ಕೆ ಇರುವ ಸಂಬಂಧ ಪ್ರಾಯೋಗಿಕ ರಾಜಕಾರಣಕ್ಕೆ ಬರುವಾಗ ಬೇರೆಯೇ ಆಗಿದೆ. ಚುನಾವಣಾ ರಾಜಕೀಯದಲ್ಲಿ ಗೆಲ್ಲುವ ಸಾಮರ್ಥ್ಯ ಮುಂದಕ್ಕೆ ಬಂದಷ್ಟೂ ರಾಜಕಾರಣ ಮತ್ತು ಸೇವೆಯ ನಡುವಣ ಸಂಬಂಧ ಶಿಥಿಲವಾಗುತ್ತದೆ...’

ಇದು ಈ ಕೃತಿಯಲ್ಲಿರುವ ‘ರಾಜಕೀಯ ಒಂದು ಸೇವೆ’ ಲೇಖನದಲ್ಲಿ ಎ.ನಾರಾಯಣ ಅವರು ಬರೆದಿರುವ ಸಾಲು. ಇದೇ ಸಾಲಿನ ಚೌಕಟ್ಟಿನಲ್ಲಿ ಸಿದ್ದರಾಮಯ್ಯ ಅವರ ರಾಜಕೀಯ ಬದುಕಿನ ಅವಲೋಕಿಸುವ ಪ್ರಯತ್ನ ನಡೆದಿದೆ.

2013ರ ಮೇ 10ರಂದು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರು ತಮ್ಮ ಐದು ವರ್ಷಗಳ ಅಧಿಕಾರವಧಿಯಲ್ಲಿ ಜಾರಿಗೆ ತಂದ ಯೋಜನೆಗಳ ಪರಿಣಾಮ ಏನಾಗಿದೆ ಎಂಬುದರ ಮೆಲುಕು ಇಲ್ಲಿದೆ. ಅವುಗಳ ಅಗತ್ಯದ ಬಗ್ಗೆ ಅಲ್ಲಲ್ಲಿ ಒತ್ತಿ ಹೇಳಲಾಗಿದೆ.

ತಾತ್ವಿಕ ವಿವೇಚನೆ ಅನ್ನುವುದೂ ಪುಸ್ತಕದ ಆಶಯವಾಗಿರುವ ಕಾರಣ, ಅಲ್ಲಲ್ಲಿ ವಿವಿಧ ರಾಜಕೀಯ ಸಂದರ್ಭಗಳ ಸೈದ್ಧಾಂತಿಕ ಉಲ್ಲೇಖಗಳು, ಅಧ್ಯಯನಗಳ ಸಂಗತಿಗಳೂ ಇವೆ. ಈ ವಿವರಗಳು ಸಿದ್ದರಾಮಯ್ಯ ಅವರ ವ್ಯಕ್ತಿ ಚಿತ್ರದಾಚೆಗೂ ಒಂದಿಷ್ಟು ಹೊಳಹುಗಳನ್ನು ನೀಡುವ ಪ್ರಯತ್ನ ಮಾಡಿವೆ. ರಾಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ಇಲ್ಲಿನ ಹಲವು ವಿವರಗಳು ಕುತೂಹಲ ಹುಟ್ಟಿಸಬಹುದು.

ಕೃತಿಯ ಅಗತ್ಯವೇನೋ ಎಂಬಂತೆ ಒಂದಿಷ್ಟು ‘ರಾಷ್ಟ್ರೀಯವಾದಿ’, ‘ಪುರೋಹಿತಶಾಹಿ’ಗಳನ್ನು ಟೀಕಿಸಿದ್ದೂ ಇದೆ. ಚಿಂತನೆ ಮತ್ತು ವಾಸ್ತವದ ವೈರುಧ್ಯಗಳನ್ನು ತೆರೆದಿಟ್ಟದ್ದೂ ಇದೆ. ಲೇಖನಗಳನ್ನು ನಾಡಿನ ಖ್ಯಾತನಾಮ ವಿದ್ವಾಂಸರು, ಲೇಖಕರು, ಪತ್ರಕರ್ತರು ಬರೆದಿದ್ದಾರೆ. ಹಾಗಾಗಿ ವಿಶ್ಲೇಷಣೆಗಳಲ್ಲಿ ತೀಕ್ಷ್ಣತೆಯೂ ಉಂಟು. ಸಿದ್ದರಾಮಯ್ಯ ಅವರನ್ನು ತಿಳಿದುಕೊಳ್ಳುವ ನೆಪದಲ್ಲಿ, ಕಾಂಗ್ರೆಸ್‌, ರಾಜಕೀಯ ಸಿದ್ಧಾಂತ, ಸಮಕಾಲೀನ ರಾಜಕೀಯ ಪಲ್ಲಟಗಳನ್ನು ಓದುವ ಅವಕಾಶ ಇಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT