ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಳೆಯರ ಜೀವಜಲ

Last Updated 5 ಜನವರಿ 2019, 19:45 IST
ಅಕ್ಷರ ಗಾತ್ರ

ಹಳ್ಳಿ ಬಿಟ್ಟು ನಗರ ಸೇರಿ ಅಲ್ಲಿಯೇ ಜೀವನ ರೂಪಿಸಿಕೊಳ್ಳುವ ಈಗಿನ ತಲೆಮಾರಿನ ಜನರ ನಡುವೆ ಭಿನ್ನ ಎನಿಸುವ ನಿಲುವಿನ ಇಬ್ಬರು ಗೆಳೆಯರ ಮೂಲಕ ‘ಜೀವಜಲ’ ಕಾದಂಬರಿಯ ಕಥನ ದಾಖಲಾಗುತ್ತದೆ. ಭಾರಿ ಸಂಬಳದ ಕೆಲಸ ಬಿಟ್ಟು ಹುಟ್ಟೂರು ಸೇರುತ್ತಾರೆ ಈ ಗೆಳೆಯರು.

ಹುಟ್ಟೂರು ಎಂದರೆ ಹಳ್ಳಿಯೇ ಎಂದು ನಿರ್ದಿಷ್ಟವಾಗಿ ಹೇಳಬೇಕಿಲ್ಲ. ಏಕೆಂದರೆ ಒಂದಾನೊಂದು ಕಾಲದಲ್ಲಿ ದೇಶವೆಲ್ಲಾ ಬಹುಪಾಲು ಹಳ್ಳಿಗಳಿಂದಲೇ ಕೂಡಿತ್ತು. ನಿಜಕ್ಕೂ ಗ್ರಾಮಭಾರತವಾಗಿತ್ತು. ಭೂತಕಾಲ ಅದು. ಈಗ ಇಂತಹ ಗ್ರಾಮಭಾರತದ ಕುರುಹು ಅಷ್ಟಿಷ್ಟು ಇನ್ನೂ ಉಳಿದುಕೊಂಡಿದೆ. ಹೀಗೊಂದು ಹಳ್ಳಿಯ ಈ ಯುವಕರು ನಕ್ಸಲಿಸಂ ಚಳವಳಿಯ ಕುರಿತು ಒಲವು ಬೆಳೆಸಿಕೊಂಡಿರುತ್ತಾರೆ. ಆದರೆ ಚಳವಳಿಯ ಆಳಕ್ಕೆ ಧುಮುಕದೆ, ಸಮಾಜದೊಂದಿಗೆ ಬೆರೆತುಕೊಂಡೇ ಸುಧಾರಣೆ, ಕ್ರಾಂತಿ ಸಾಧ್ಯವಾಗಿಸಿಕೊಳ್ಳುತ್ತಾರೆ.

ಗ್ರಾಮಭಾರತದ ಆದರ್ಶ ಬಹುತೇಕ ಕಡೆಗಣನೆಯಾಗಿರುವ ಈ ಕಾಲಘಟ್ಟದ ದುರಂತಗಳನ್ನು ಚರ್ಚಿಸುವ ಸನ್ನಿವೇಶಗಳು ಈ ಕಾದಂಬರಿಯಲ್ಲಿವೆ. ಜಾತಿ, ಮತಗಳ ಮೂಲಕ ಜನರಲ್ಲಿ ಬಿರುಕು ಮೂಡಿಸಿ ತಮ್ಮ ಕಾರ್ಯ ಸಾಧಿಸಿಕೊಳ್ಳುವ ರಾಜಕೀಯ ಶಕ್ತಿಗಳನ್ನು ಮೀರಲು ಜನರ ಸಂಘಟನಾ ಶಕ್ತಿ ಸಮರ್ಥವಿದೆ ಎನ್ನುವುದನ್ನು ಇಲ್ಲಿ ಚಿತ್ರಿಸಲಾಗಿದೆ.

**

ಜೀವಜಲ

ಪುಟ: 656

300 ರೂ

ಪ್ರಕಾಶನ: ಜಾಣಗೆರೆ ಪತ್ರಿಕೆ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT