ಬುಧವಾರ, ಮಾರ್ಚ್ 29, 2023
24 °C

ಪುಸ್ತಕ ವಿಮರ್ಶೆ: ಹಾಡಷ್ಟೇ ಅಲ್ಲ, ಆಳಕ್ಕಿಳಿದ ಆಲಾಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಲವು ಸಾಹಿತ್ಯ ಪ್ರಕಾರಗಳ ಪರಿಚಯ (ಗಝಲ್‌, ಹಾಯ್ಕು, ಕವಿತೆ, ಬರಹ...), ಅವುಗಳ ಒಂದಿಷ್ಟು ಉದಾಹರಣೆ, ಸರಳವಾದ ನಿರೂಪಣೆ, ತನ್ನದೇ ಆದ ವಿಮರ್ಶೆಯ ಕಿರುನೋಟ –ಇವು ಈ ಕೃತಿಯ ಜೀವಾಳ. ಹೌದು ಒಲಿದಂತೆ ಹಾಡಿದ್ದಷ್ಟೇ ಅಲ್ಲ, ಆಳಕ್ಕಿಳಿದು ಆಲಾಪಿಸಿದ್ದೂ ಬರಹಗಳಲ್ಲಿ ಇಣುಕಿದಾಗ ಕಾಣುತ್ತದೆ. 

ಕೃತಿಯಲ್ಲಿ ಲಂಕೇಶರ ನೆನಪುಗಳಿವೆ, ಪತ್ರಕರ್ತರ ಬಗೆಗೆ ಅಭಿಮಾನದ ನುಡಿಗಳಿವೆ. ನಾಡಿನ ಪ್ರಮುಖ ಬರಹಗಾರರ ಕೃತಿಗಳ ಆಳವಾದ ಓದು ಮತ್ತು ಒಳನೋಟ ಇದೆ. ಲೇಖಕರು ವಿಮರ್ಶೆಗೊಳಪಡಿಸಿದ ಹೆಚ್ಚಿನ ಸಾಹಿತ್ಯ ಕೃತಿಗಳು ಗಝಲ್‌, ಕವನ ಸಂಕಲನಗಳಿಗೆ ಸೇರಿದವುಗಳು. ಅವುಗಳನ್ನು ಅಲ್ಲಲ್ಲಿ ಉದಾಹರಿಸಿರುವುದರಿಂದ ಓದುವಿಕೆಯ ಓಘವನ್ನು ಸರಾಗವಾಗಿಸಿವೆ. ಏಕತಾನತೆ ನೀಗಿಸಿವೆ. ಮಾತ್ರವಲ್ಲ, ಕನ್ನಡದ ಪುಟ್ಟ ಪುಟ್ಟ ಕವಿಗಳು ವಿಮರ್ಶೆಯ ಮೂಸೆಯಲ್ಲಿ ಇಲ್ಲಿ ದಾಖಲಾಗಿದ್ದು ಕೂಡ ಗಮನಾರ್ಹವಾಗಿದೆ. 

ಅಕ್ಬರನ ಮನೆಯಲ್ಲಿ ರಾಮ; ಕೃಷ್ಣನ ಮನೆಯಲ್ಲಿ ರಹೀಮ/ ಒಬ್ಬರನ್ನೊಬ್ಬರು ಬಚ್ಚಿಟ್ಟುಕೊಂಡು ಕಾಪಾಡಿದೆವು.../ ಇಂದು ರಾಮನನ್ನು ಕೊಲ್ಲಲು ಅಕ್ಬರನು ಕತ್ತಿ ಮಸೆಯುತಿಹನು/ ರಹೀಮನನ್ನು ಕೊಲ್ಲಲು ಕೃಷ್ಣನು ಹೊಂಚು ಹಾಕುತಿಹನು. (ಕವಯಿತ್ರಿ ನೂರ್‌ ಜಹಾನ್‌ ಅವರ ಸಾಲುಗಳು) ಇಂಥ ಉದಾಹರಣೆಗಳನ್ನು ಉಲ್ಲೇಖಿಸಿ ಕವಿಯ ಜವಾಬ್ದಾರಿಯನ್ನು ಎತ್ತಿ ಹಿಡಿದಿದ್ದಾರೆ ಲೇಖಕರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು