ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು: ರಿಕ್ಕು ರಿಕ್ಷಣ್ಣನ ‘ವನ’ವಾಸದ ಕಥೆ

Last Updated 17 ಜುಲೈ 2022, 0:00 IST
ಅಕ್ಷರ ಗಾತ್ರ

ರಿಕ್ಕು ರಿಕ್ಷಣ್ಣಾ ಪುಟಾಣಿ ಮಕ್ಕಳನ್ನು ತನ್ನ ಚಿತ್ರಗಳಿಂದಲೇ ಸೆಳೆಯುವ ಕೃತಿ. ಇಲ್ಲಿನ ಕಥೆ ಬಹಳ ಸರಳ. ಮೇಲ್ನೋಟಕ್ಕೆ ಚಿತ್ರಗಳೇ ಕಥೆ ಹೇಳುತ್ತವೆ. ಪುಟಾಣಿ ಮಕ್ಕಳಿಗೆ ಚಿತ್ರಗಳನ್ನು ತೋರಿಸುತ್ತಾ ಕಥೆ ಓದಿ ಹೇಳಿದರೆ, ಅವರೂ ರಿಕ್ಕುವಿನ ಲೋಕಕ್ಕೊಂದು ಸುತ್ತು ಹೊಡೆದುಬಂದಾರು.

ವೃತ್ತಿಯಲ್ಲಿ ಎಂಜಿನಿಯರ್‌ ಆಗಿರುವ ಅನುಪಮಾ ಕೆ. ಬೆಣಚಿನಮರಡಿ, ಹಲವು ಪತ್ರಿಕೆಗಳಿಗೆ ಮಕ್ಕಳ ಕಥೆಗಳನ್ನು ಬರೆದಿದ್ದಾರೆ. ಪರಿಸರದಲ್ಲಿನ ಜೀವಪ್ರಪಂಚ ಇವರನ್ನು ಹೆಚ್ಚಾಗಿ ಆಕರ್ಷಿಸುವ ವಿಷಯ. ಈ ಕೃತಿಯಲ್ಲಿ ಅವರು ಆಯ್ದುಕೊಂಡಿರುವ ಕಥೆಯೂ ಅಷ್ಟೇ ಸರಳವಾಗಿದೆ. ರಿಕ್ಕು ಎಂಬ ರಿಕ್ಷಾ ಮತ್ತು ಆನೆಯೊಂದರ ನಡುವೆ ನಡೆಯುವ ಸಂಭಾಷಣೆ ಕಥೆಯಾಗುತ್ತಾ ಸಾಗುತ್ತದೆ. ವನ್ಯಜೀವಿ–ಮಾನವರ ನಡುವಿನ ಸಂಘರ್ಷದ ಪರಿಣಾಮವನ್ನೂ ತೆಳುವಾಗಿ ಕಥೆ ಬಿಚ್ಚಿಟ್ಟಿದೆ. ಈ ಅಕ್ಷರಗಳಿಗೆ ಜೀವ ತುಂಬಿದವರು ಉಡುಪಿ ಜಿಲ್ಲೆಯ ಸಂತೋಷ್‌ ಸಸಿಹಿತ್ಲು. ಪತ್ರಿಕೆಗಳಲ್ಲಿ ವ್ಯಂಗ್ಯಚಿತ್ರಕಾರರಾಗಿ ಕೆಲಸ ಮಾಡಿದ ಅನುಭವವುಳ್ಳ ಇವರು ರಿಕ್ಕುವಿಗೆ ಬಣ್ಣದ ಪ್ರಾಣವಾಯು ನೀಡಿದ್ದಾರೆ. ಆನೆಯೊಂದು ರಿಕ್ಷಾದೊಳಗೆ ಕುಳಿತರೆ ರಿಕ್ಷಾವೇ ಆನೆಯಾಗುವಂತಹ ಇವರ ಕೈಚಳಕ ಮಕ್ಕಳ ಕಣ್ಮನಗಳನ್ನು ಸೆಳೆಯುತ್ತದೆ.

ಕೃತಿ: ರಿಕ್ಕು ರಿಕ್ಷಣ್ಣಾ

ಕಥೆ: ಅನುಪಮಾ ಕೆ. ಬೆಣಚಿನಮರಡಿ

ಚಿತ್ರಕಲೆ: ಸಂತೋಷ್‌ ಸಸಿಹಿತ್ಲು

ಪ್ರ: ಹರಿವು ಬುಕ್ಸ್‌

ಸಂ: 8088822171

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT