ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತ ಮಾಂತ್ರಿಕ ಪಂಡಿತ್ ಜಸ್‌ರಾಜ್ ವಿಧಿವಶ

Last Updated 17 ಆಗಸ್ಟ್ 2020, 14:09 IST
ಅಕ್ಷರ ಗಾತ್ರ

ನವದೆಹಲಿ:ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಮಾಂತ್ರಿಕ ಪಂಡಿತ್ ಜಸ್‌ರಾಜ್ ಸೋಮವಾರ ನ್ಯೂಜೆರ್ಸಿಯಲ್ಲಿ ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.

ಜಸ್‌ರಾಜ್ ಅವರ ಪುತ್ರಿ ದುರ್ಗಾ ಜಸ್‌ರಾಜ್ ಅವರುಅಪ್ಪನ ನಿಧನ ಸುದ್ದಿ ತಿಳಿಸಿದ್ದಾರೆ ಎಂದು ಟೈಮ್ಸ್ ನೌ ಪತ್ರಿಕೆ ವರದಿ ಮಾಡಿದೆ.

80 ವರ್ಷಗಳಿಗಿಂತಲೂ ಹೆಚ್ಚುಕಾಲ ಸಂಗೀತ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದ ಮಹಾನ್ ಗಾಯಕ ಜಸ್‌ರಾಜ್ ಪದ್ಮಶ್ರೀ , ಪದ್ಮಭೂಷಣ್ ಮತ್ತು ಪದ್ಮವಿಭೂಷಣ್ ಪ್ರಶಸ್ತಿಗೆ ಭಾಜನರಾಗಿದ್ದರು.

ಹರ್ಯಾಣದಲ್ಲಿ ಜನಿಸಿದ್ದ ಜಸ್‌ರಾಜ್ ಶಾಸ್ತ್ರೀಯ ಮತ್ತು ಸೆಮಿ ಕ್ಲಾಸಿಕಲ್ ಸಂಗೀತದಲ್ಲಿ ಮೇರು ಗಾಯಕರಾಗಿದ್ದು ಭಾರತ , ಕೆನಡಾ ಮತ್ತು ಅಮೆರಿಕಾದಲ್ಲಿ ಸಂಗೀತ ಪಾಠ ಹೇಳಿಕೊಡುತ್ತಿದ್ದರು.

ವರ್ಷದ ಹಿಂದೆ ಮಂಗಳ ಮತ್ತು ಗುರು ಗ್ರಹಗಳ ನಡುವೆ ಪತ್ತೆ ಮಾಡಲಾಗಿರುವ ಚಿಕ್ಕ ಗ್ರಹವೊಂದಕ್ಕೆ ಇಂಟರ್‌ನ್ಯಾಷನಲ್‌ ಅಸ್ಟ್ರಾನಾಮಿಕಲ್‌ ಯೂನಿಯನ್‌ (ಐಎಯು) ಜಸ್‌ರಾಜ್ ಅವರ ಹೆಸರನ್ನಿರಿಸಿತ್ತು. 2006ರ ನವೆಂಬರ್‌ 11ರಂದು ಈ ಗ್ರಹವನ್ನು ಪತ್ತೆ ಮಾಡಲಾಗಿದ್ದು ಅದನ್ನು'2006ವಿಪಿ32' ಎಂದು ಕರೆಯಲಾಗಿತ್ತು.

ಜಸ್‌ರಾಜ್‌ ಅವರ ಜನ್ಮದಿನಾಂಕ (28-01/30)ವನ್ನು ಉಲ್ಟಾ ಬರೆದಾಗ 300128 ಆಗುತ್ತದೆ. ಐಎಯುನ ವೆಬ್‌ಸೈಟ್‌ನಲ್ಲಿ ಈ ಸಂಖ್ಯೆಯನ್ನು ನಮೂದಿಸಿದಾಗ 'ಪಂಡಿತ್‌ಜಸ್‌ರಾಜ್‌' ಗ್ರಹದ ಚಿತ್ರ ಹಾಗೂ ವಿವರಗಳು ಲಭ್ಯವಾಗುತ್ತವೆ.

ಪಂಡಿತ್ ಜಸ್‌ರಾಜ್ ನಿಧನಕ್ಕೆ ಗಣ್ಯರ ಸಂತಾಪ

ಪಂಡಿತ್ ಜಸರಾಜ್ ಜಿ ಅವರನಿಧನವು ಭಾರತೀಯ ಸಾಂಸ್ಕೃತಿಕ ಕ್ಷೇತ್ರದಲ್ಲಿ ಖಾಲಿತನವನ್ನುಂಟುಮಾಡಿದೆ. ಅವರ ಗಾಯನ ಅತ್ಯುತ್ತಮವಾಗಿದ್ದವು ಮಾತ್ರವಲ್ಲದೆ, ಇತರ ಹಲವಾರು ಗಾಯಕರಿಗೆ ಅಸಾಧಾರಣ ಮಾರ್ಗದರ್ಶಕರಾಗಿ ಅವರು ಗುರುತಿಸಿಕೊಂಡವರು ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT