ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಭಿವ್ಯಕ್ತಿ’ಯಲ್ಲಿ ತಬಲ ಕಛೇರಿ ಹಿಂದೂಸ್ತಾನಿ ಜುಗಲ್‌ಬಂದಿ

Last Updated 30 ಜನವರಿ 2019, 20:00 IST
ಅಕ್ಷರ ಗಾತ್ರ

‘ತಾಲ್‌ ಸುರಾಂಗನ್‌’ ಮತ್ತು ‘ಕ್ಯಾನ್ಸರ್‌ ಕೇರ್‌ ಇಂಡಿಯಾ’ ಜಂಟಿಯಾಗಿ ಆಯೋಜಿಸಿರುವ ‘ಅಭಿವ್ಯಕ್ತಿ’ ಕಾರ್ಯಕ್ರಮದಲ್ಲಿ ಖ್ಯಾತ ತಬಲಾ ಕಲಾವಿದ ಉಸ್ತಾದ್‌ ನಿಸಾರ್‌ ಅಹಮದ್‌ ಅವರ ತಬಲ ಕಛೇರಿಯನ್ನು ಫೆ.2 (ಶನಿವಾರ)ರಂದು ಸಂಜೆ 6 ಗಂಟೆಗೆ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಆಯೋಜಿಸಿದೆ. ಈ ಕಾರ್ಯಕ್ರಮಕ್ಕೆ ‘ಸಾಕ್ರ ವರ್ಲ್ಡ್‌ ಹಾಸ್ಪಿಟಲ್‌’ ಸಹ ಪ್ರಾಯೋಜಕತ್ವ ವಹಿಸಿದೆ.

ಇದೇ ಕಾರ್ಯಕ್ರಮದಲ್ಲಿ ಹಿಂದೂಸ್ತಾನಿ ವಾದ್ಯಗಳ ಜುಗಲ್‌ಬಂದಿಯಲ್ಲಿ ಪಂಡಿತ್‌ ರಂಜನ್‌ ಕುಮಾರ್‌ ಬವುರಾ, ಪಂಡಿತ್‌ ರಘುನಾಥ್‌ ವಿ ಬದಿ, ಉಸ್ತಾದ್‌ ಮೊಹಸಿನ್‌ ಖಾನ್‌ ಭಾಗವಹಿಸುವರು. ಮುಖ್ಯ ಅತಿಥಿಗಳಾಗಿ ಹಿರಿಯ ತಬಲಾ ಕಲಾವಿದ ವಿಶ್ವನಾಥ್ ನಾಕೋಡ್‌, ಸಕ್ರ ವರ್ಲ್ಡ್‌ ಹಾಸ್ಪಿಟಲ್‌ನ ಯುಚಿ ನಾಗನೊ ಸನ್‌, ವೈದ್ಯ ಡಾ. ಅನಿಲ್‌ ಕುಮಾರ್‌ ಪಿ.ಎಲ್‌, ಬಾಸ್ಕ್‌ ಇಂಡಿಯಾ ಫೌಂಡೇಷನ್‌ನ ಎಂ. ಪುಂಡಲೀಕ ಕಾಂತ್‌ ಡಾ. ಸಾಯಿ ಸತೀಶ್‌ ತೋಟಯ್ಯ, ಡಾ. ಪಿ. ರಾಜಶೇಖರ ರೆಡ್ಡಿ ಭಾಗವಹಿಸುವರು.

ತಾಲ್‌ ಸುರಾಂಗನ್‌: ಇದೊಂದು ಸಾಮಾಜಿಕ– ಸಾಂಸ್ಕೃತಿಕ ಸಂಘಟನೆ. ಭಾರತೀಯ ಶಾಸ್ತ್ರೀಯ ಸಂಗೀತವನ್ನು ಪ್ರಚಾರಪಡಿಸುತ್ತಿದೆ. ಇದರ ಜೊತೆಗೆ ದೇಶದಾದ್ಯಂತ ಸಾಮಾಜಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.

ಕಲಾವಿದರ ಕುರಿತು: ಖ್ಯಾತ ತಬಲ ವಾದಕ ನಿಸಾರ್‌ ಅವರು ಬೆಳಗಾವಿ ಜಿಲ್ಲೆಯ ಸವದಿ ಗ್ರಾಮದವರು. ಧಾರವಾಡದ ‘ದಕ್ಷಿಂಕ ತಿರಕ್ಕವ’ ಪಂಡಿತ್‌ ಬಸವರಾಜ್‌ ಬೆಂಡಿಗೇರಿ ಅವರ ಶಿಷ್ಯ.

ಪಿಟೀಲು ವಾದಕ ರಂಜನ್‌ ಕುಮಾರ್‌ ಬೆವುರಾ ಒಡಿಶಾದ ಭುವನೇಶ್ವರದವರು. ಇವರು ಪಂಡಿತ್‌ ಸುನಿಲ್ ಸಿಂಗ್‌ ಮಹಾಂತ್‌ ಮತ್ತು ಕೆ. ಭುವನೇಶ್ವರಿ ಮಿಶ್ರಾ ಅವರ ಶಿಷ್ಯ. ಪಿಟೀಲಿನಲ್ಲಿ ಭಾರತೀಯ ಮತ್ತು ಪಾಶ್ಚಿಮಾತ್ಯ ಶೈಲಿಯನ್ನು ಅಳವಡಿಸಿವರಲ್ಲಿ ಪ್ರಮುಖರು.

ಕೊಳಲು ವಾದಕ ಪಂಡಿತ್‌ ರಘುನಾಥ್‌ ವಿ ಬದಿ ಅವರು ಧಾರವಾಡದವರು. ಆರಂಭದಲ್ಲಿ ಗುರು ಸೋಮಶೇಖರ್ ಅವರ ಬಳಿ ತಬಲಾ ಕಲಿತವರು. ನಂತರ ಕೊಳಲಿನ ಕಡೆಗೆ ಆಕರ್ಷಿತರಾಗಿ ತಂದೆ ಧಾರವಾಡ ಆಕಾಶವಾಣಿಯಲ್ಲಿ ಕೊಳಲು ವಾದಕರಾಗಿದ್ದ ವಿಥಲ್ಸಾ ಎನ್‌. ಬದಿ ಅವರ ಬಳಿ ಕೊಳಲು ತರಬೇತಿ ಪಡೆಯುತ್ತಾರೆ. ಉಸ್ತಾದ್‌ ಹಮೀದ್‌ ಖಾನ್‌ ಬಳಿಯೂ ತರಬೇತಿ ಪಡೆದಿದ್ದಾರೆ.

ಉಸ್ತಾದ್‌ ಮೊಹಸೀನ್‌ ಖಾನ್‌ ಕೂಡಾ ಧಾರವಾಡದವರು. ಇಂದೋರ್‌ ಮೂಲದ ಬೀಂಕರ್ ಘರಾನಾದ ಸಂಗೀತಗಾರರ ಕುಟುಂಬದ ಏಳನೇ ತಲೆಮಾರಿನವರು. ಮೊಹಸೀನ್‌ ಅವರ ತಾತ ಅಬ್ದುಲ್‌ ಕರೀಂ ಖಾನ್‌ ಅವರ ಬಳಿ ಸಿತಾರ್‌ ಕಲಿತವರು. ನಂತರ ತಂದೆ ಉಸ್ತಾದ್‌ ಹಮೀದ್‌ ಖಾನ್‌ ಬಳಿಯೂ ತರಬೇತಿ ಪಡೆದಿದ್ದಾರೆ.

ಪಾಸ್‌ ಬೇಕೇ?

ಈ ಕೆಳಗಿನ ಪ್ರಶ್ನೆಗಳಿಗೆ ಸರಿ ಉತ್ತರ ನೀಡಿ, ಆಯ್ಕೆಯಾಗುವ ಅದೃಷ್ಟಶಾಲಿಗಳಿಗೆ ಕಾರ್ಯಕ್ರಮದ ಉಚಿತ ಪಾಸ್‌ಗಳನ್ನು ನೀಡಲಾಗುವುದು. ಉತ್ತರಗಳನ್ನು ಫೆಬ್ರುವರಿ 1ರ ಮಧ್ಯಾಹ್ನ 1 ಗಂಟೆಯೊಳಗೆ ಕಳುಹಿಸಬೇಕು. ಉತ್ತರಗಳನ್ನು contest@prajavani.co.in ಮೇಲ್‌ಗೆ ಕಳುಹಿಸಬೇಕು.

1. ಭಾರತೀಯ ಶಾಸ್ತ್ರೀಯ ಸಂಗೀತದ ಎರಡು ವಿಧಗಳಾವುವು?

2. ಭಾರತದ ರಾಷ್ಟ್ರೀಯ ಸಂಗೀತ ಸಾಧನ ಯಾವುದು?

3. ಸಂಗೀತದ ಮೂರು ಅಂಶಗಳಾವುವು?

4. ತಬಲಾ ಘರಾನದ ವಿಧಗಳು ಯಾವುವು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT