ಬುಧವಾರ, ಜುಲೈ 28, 2021
28 °C

ಕವಿತೆ | ಅದರಿಂದಲೇ..

ರಾಜು ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಕೋಣೆ ನನ್ನ ಸುತ್ತ
ನಿಂತುಕೊಂಡಿದೆ
ಮಲಗಿದರೆ ಹಾವು
ಹಾಡುತ್ತದೆ
ನಾನೇ ಬಿಟ್ಟುಕೊಂಡಿದ್ದು
ನಿದ್ದೆ ಬರಲಿ ಎಂದು.
ಈಗ
ಅವುಗಳ ಜೊತೆಗೆ
ಅದೆ ಅದೇ ಆಟವಾಡಿ
ಬೇಸರ ಬಂದಿದೆ
ಒಮ್ಮೊಮ್ಮೆ
ನಕ್ಷತ್ರಗಳನ್ನು
ತಿಂಗಳ ಬೆಳಕಲ್ಲಿ ಬೇಯಿಸೋಣ
ಅನಿಸುತ್ತದೆ
ಆದರೆ ನನಗೆ
ನಿರಂತರ ನಡೆಯುವುದು
ಕಷ್ಟ
ನನ್ನೊಳಗೆ ಹರಿವ
ನದಿ ಕಾಡು ಕಡಲು
ಮರುಭೂಮಿಯ ಕುಡಿದಂತಿವೆ
ದಿನಗಳು ಮಗುಚುತ್ತಿವೆ
ಕಾವಲಿಯ ಮೇಲೆ
ಅದನ್ನು
ನಾನೇ ತಿನ್ನುತ್ತಿದ್ದೇನೆ

ಎಲ್ಲವೂ ಅದರಿಂದಲೇ
ಬಂದಿರಬಹುದು ಎನ್ನುವ
ಗಾಳಿಯನ್ನು ಉಸಿರಾಡುತ್ತಾ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.