ಮಂಗಳವಾರ, ಫೆಬ್ರವರಿ 25, 2020
19 °C

ಚಿಟ್ಟೆ ಹಿಡಿದುಬಿಟ್ಟೆ

ಶರಣು ಚಟ್ಟಿ Updated:

ಅಕ್ಷರ ಗಾತ್ರ : | |

Prajavani

ಶಾಲೆಯ ತರಗತಿ

ಕೋಣೆಯಲ್ಲಿ

ನೆಚ್ಚಿನ ಗುರುಗಳು

ಬಂದರು

 

ಶುಭ ಮುಂಜಾನೆ

ಹೇಳುತಲಿ

ಮೊಗದಿ ನಗುವ

ತಂದರು

 

ಕೇಳಿರಿ ಮಕ್ಕಳೇ

ಬಣ್ಣದ ಚಿಟ್ಟೆ

ಪದ್ಯ ಹೇಳುವೆ

ಎಂದರು

 

ಹಾವಭಾವದಿ

ಹಾಡುತಲಿ

ಮಕ್ಕಳೊಂದಿಗೆ

ನಿಂತರು

 

ತರಗತಿಯೊಳಗೆ

ಅಪ್ಪಣೆ ಕೇಳದೆ

ಹಾರಿ ಬಂತು

ಒಂದು ಚಿಟ್ಟೆ

 

ಗೆಳತಿಯರೆಲ್ಲರ

ಪಕ್ಕಕೆ ಸರಿಸಿ

ಆ ಚಿಟ್ಟೆಯನು

ಹಿಡಿದುಬಿಟ್ಟೆ

 

ಚಿಟ್ಟೆಯ ಹಿಡಿದು

ಶಾಲೆಯಂಗಳದಿ

ಓಡಾಡಿ

ಖುಷಿಪಟ್ಟೆ

 

ಗುರುಗಳ

ಮಾತಿಗೆ ತಲೆಬಾಗಿ

ಬದುಕಲೆಂದು

ಹಾರಿ ಬಿಟ್ಟೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)