ರೈತನೊಮ್ಮೆ ತೋಟದಲ್ಲಿ
ಮಾವು ಸಸಿಯ ನೆಟ್ಟನು,
ಮಾವು ಚಿಗುರಿ, ಹೂವು ಬಂದು
ಹಣ್ಣು ಪಕ್ವ ಆಯಿತು. ||1||

ಒಂದು ದಿನ ಪಕ್ವ ಹಣ್ಣು
ನೋಡಿತೊಂದು ಚತುರ ಕಣ್ಣು
ಆಸೆಗಾಗಿ ಕಾಲು ಎರಡು
ಚಲಿಸಿ ಮರದಿ ನಿಂತವು. ||2||

ಥಟ್ಟನೆಂದು ಕೈಯೊಂದು
ಪಕ್ವ ಹಣ್ಣು ಹರಿಯಿತು
ಹರಿದ ಹಣ್ಣು ಗಪ್ಪನೆಂದು
ಬಾಯಿ ಕಸಿದು ತಿಂದಿತು. ||3||

ಹೊಟ್ಟೆಕಿಚ್ಚು ಪಟ್ಟ ಹೊಟ್ಟೆ
ಬಾಯಿಯಿಂದ ಸರ‍್ರನೆಂದು ಹೀರಿತು
ರಕ್ತ ಬಂದು ನನಗೆ ಬೇಕು
ಎನುತ ಕಸಿದುಕೊಂಡಿತು.|| 4||

ಅಷ್ಟರಲ್ಲಿ ದೊಣ್ಣೆ ಹಿಡಿದು
ರೈತನಲ್ಲಿ ಬಂದನು
ಸಿಟ್ಟಿನಿಂದ ದೊಣ್ಣೆ ಹಿಡಿದು
ಬೆನ್ನು ಬೆನ್ನು ಹೊಡೆದನು. ||5||

ದೊಣ್ಣೆ ಬಿದ್ದ ಬೆನ್ನು ಮಾತ್ರ
ನೋವಿನಿಂದ ನಲುಗಿತು
ಎಲ್ಲ ತಪ್ಪು ನನ್ನದೆಂದು
ಕಣ್ಣು ನೀರು ಸುರಿಯಿತು. ||6||

ಅಂದಿನಿಂದ ಕಣ್ಣು ಎಂದೂ
ಹೀನದತ್ತ ಅಣುಕಲಿಲ್ಲ
ಅಂದ-ಚೆಂದ ನೋಡುತ
ಸತ್ಯ-ಶಾಂತಿ ಮರೆಯಲಿಲ್ಲ. || 7||

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ರೈತನೊಮ್ಮೆ ತೋಟದಲ್ಲಿ
ಮಾವು ಸಸಿಯ ನೆಟ್ಟನು,
ಮಾವು ಚಿಗುರಿ, ಹೂವು ಬಂದು
ಹಣ್ಣು ಪಕ್ವ ಆಯಿತು. ||1||

ಒಂದು ದಿನ ಪಕ್ವ ಹಣ್ಣು
ನೋಡಿತೊಂದು ಚತುರ ಕಣ್ಣು
ಆಸೆಗಾಗಿ ಕಾಲು ಎರಡು
ಚಲಿಸಿ ಮರದಿ ನಿಂತವು. ||2||

ಥಟ್ಟನೆಂದು ಕೈಯೊಂದು
ಪಕ್ವ ಹಣ್ಣು ಹರಿಯಿತು
ಹರಿದ ಹಣ್ಣು ಗಪ್ಪನೆಂದು
ಬಾಯಿ ಕಸಿದು ತಿಂದಿತು. ||3||

ಹೊಟ್ಟೆಕಿಚ್ಚು ಪಟ್ಟ ಹೊಟ್ಟೆ
ಬಾಯಿಯಿಂದ ಸರ‍್ರನೆಂದು ಹೀರಿತು
ರಕ್ತ ಬಂದು ನನಗೆ ಬೇಕು
ಎನುತ ಕಸಿದುಕೊಂಡಿತು.|| 4||

ಅಷ್ಟರಲ್ಲಿ ದೊಣ್ಣೆ ಹಿಡಿದು
ರೈತನಲ್ಲಿ ಬಂದನು
ಸಿಟ್ಟಿನಿಂದ ದೊಣ್ಣೆ ಹಿಡಿದು
ಬೆನ್ನು ಬೆನ್ನು ಹೊಡೆದನು. ||5||

ದೊಣ್ಣೆ ಬಿದ್ದ ಬೆನ್ನು ಮಾತ್ರ
ನೋವಿನಿಂದ ನಲುಗಿತು
ಎಲ್ಲ ತಪ್ಪು ನನ್ನದೆಂದು
ಕಣ್ಣು ನೀರು ಸುರಿಯಿತು. ||6||

ಅಂದಿನಿಂದ ಕಣ್ಣು ಎಂದೂ
ಹೀನದತ್ತ ಅಣುಕಲಿಲ್ಲ
ಅಂದ-ಚೆಂದ ನೋಡುತ
ಸತ್ಯ-ಶಾಂತಿ ಮರೆಯಲಿಲ್ಲ. || 7||

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.