ಶನಿವಾರ, ಸೆಪ್ಟೆಂಬರ್ 19, 2020
27 °C

ಮೊಮ್ಮಗಳ ಆಟ (ಕವಿತೆ)

ಮಂಡಲಗಿರಿ ಪ್ರಸನ್ನ Updated:

ಅಕ್ಷರ ಗಾತ್ರ : | |

ನಂಜೊತೆ ಆಟಕ್ಕಿಳಿವ ಮೊಮ್ಮಗಳು
ಮನಸಿಗೆ ಬಂದಂಗೆ ಆಡ್ತಾಳೆ
ತಾನೇ ಗೆಲ್ಲಬೇಕು ಎಂಬಾಸೇಲಿ
ಸೋಲದಂಗೆ ಎಚ್ಚರ ವಹಿಸ್ತಾಳೆ

ಕೇರಂ ಆಡಲು ಕೂತ್ರೆ ಶುರು
ಬೋರ್ಡ್ ತುಂಬಾ ನೆಗೆದಾಡ್ತಾಳೆ
ಪಾಕೇಟ್‌ಗೆ ಬೀಳೋ ಕಾಯಿನ್ಸ್
ಎಲ್ಲ ತನ್ನವೆಂದು ಹಾರಿಸಿ ಬಿಡ್ತಾಳೆ

ಕ್ರಿಕೆಟ್‍ನಲ್ಲೂ ಹಿಂಗೆ ನ್ಯಾಯ
ತಾನು ಔಟಾಗದಂಗೆ ನೋಡ್ಕತಾಳೆ
ಕ್ಯಾಚು ಹಿಡಿದು ಗೋಗರೆದ್ರೂ
ರಂಪ ಮಾಡಿ ಬ್ಯಾಟ್ ಹಿಡಿತಾಳೆ

ಚೆಸ್‍ನಲ್ಲೂ ಮುಗಿಯದ ಕಥೆ:
‘ತಾತಾ ತಲೆ ಓಡ್ಸು’ ಅಂತಾಳೆ
ಕೊನೆಗೂ ನನ್ನ ಬಲೆಗೆ ಸಿಕ್ಕಿಸಿ
ತಾನೆ ಚಾಂಪಿಯನ್ ಆಗ್ತಾಳೆ

ನನ್ನ ಸೋಲೇ ಅವಳ ಗೆಲುವು
ಅನ್ನೋ ಗುಟ್ಟು ತಿಳಕೊಂಡೆ
ಸೋಲೋದ್ರಲ್ಲೆ ಖುಷಿ ಕಂಡು
ಮೊಮ್ಮಗಳನ್ನ ಅಪ್ಪಿಕೊಂಡೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.