ಭಾನುವಾರ, ಮಾರ್ಚ್ 29, 2020
19 °C

ಇಸ್ರೊ ಮಾಡಿದ ತಪ್ಪು!

ಚಂದ್ರಗೌಡ ಕುಲಕರ್ಣಿ Updated:

ಅಕ್ಷರ ಗಾತ್ರ : | |

Prajavani

ಇಸ್ರೊದವರು ಕೇಳಿಬಿಟ್ಟಿದ್ರೆ

ಒಂದೇ ಒಂದು ಮಾತು!

ಚಂದ್ರಯಾನಕೆ ಹೋಗಿಬಿಡುತ್ತಿದ್ದೆ

ರೋವರ್‌ನಲ್ಲಿ ಕೂತು!

ಭೂಮಿ ಕಕ್ಷೆಯಲ್ಲಿ ಸುತ್ತದೆ

ಹೋಗೇ ಬಿಡುತ್ತಿದ್ದೆ ನೇರ!

ಲ್ಯಾಂಡರ್‌ನಿಂದ ರೋವರ್ ಇಳಿಸಿ

ಕಾಲಿಡುತ್ತಿದ್ದೆ ಹಗುರ!

 

ದಕ್ಷಿಣ ಧ್ರುವದ ಕುಳಿಯಲಿ ತಿರುಗಿ

ಮಾಡುತಿದ್ದೆ ಶೋಧ!

ಬೀಜ ನೆಟ್ಟು ಅರಿಯುತಿದ್ದೆ

ಮಣ್ಣಿನ ಗುಣದ ಸ್ವಾದ!

 

ಹಸಿವು ಊಟದ ಪರಿವೆ ಇಲ್ದೆ

ನೋಡುತ್ತಿದ್ದೆ ಸುತ್ತಿ!

ಚಣಚಣಕೊಮ್ಮೆ ಕಳಿಸುತ್ತಿದ್ದೆ

ತಾಜಾ ಜ್ಞಾನದ ಬುತ್ತಿ!

 

ಭೇಟಿಯಾಗಿ ಚಂದ್ರನಿಂದ

ಪಡೆಯುತ್ತಿದ್ದೆ ಮಾಹಿತಿ!

ಹಿಂದೆ ಜೀವಿಗಳ್ಯಾರಾದ್ರೇನು

ಹೂಡಿದ್ರೇನು ವಸತಿ!

 

ಇಸ್ರೊದವರು ನನ್ನನ್ನ ಕೇಳ್ದೆ

ತಪ್ಪು ಮಾಡಿಬಿಟ್ರು!

ಕುತೂಹಲದಿಂದ ಕಾಯೋ ಮಕ್ಕಳ

ಕತ್ತಲಿನಲ್ಲೆ ಇಟ್ರು!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು