ಶುಕ್ರವಾರ, ಮೇ 14, 2021
32 °C

ಕವಿತೆ: ಬಾ ವಸಂತವೆ ಬಾ

ಹೊರೆಯಾಲ ದೊರೆಸ್ವಾಮಿ Updated:

ಅಕ್ಷರ ಗಾತ್ರ : | |

Prajavani

ಬಾ ವಸಂತವೆ ಬಾ
ಕಳೆದುಹೋದ ಸಂತಸವ
ತಾ ಮತ್ತೆ ತಾ ||

ಮರದ ಟೊಂಗೆಗಳಲ್ಲಿ
ಬೆಳೆದ ಹೊಂಗೆಗಳಲ್ಲಿ
ಮೈಮರೆತು ಮಲಗಿರುವ
ಜಡತೆಯನು ಕಳಚಿಟ್ಟು
ಮತ್ತೆ ನೀ ನಳನಳಿಸು
ಬಾ ವಸಂತವೆ ಬಾ ||

ಬೆಂಗಾಡು ನೆಲದಲ್ಲಿ
ಹಸಿರೊನ್ನ ಪೈರಾಗಿ
ತೊನೆದಾಡೊ ತೆನೆಯಾಗಿ
ದುಂಡನೆಯ ಕಣದಲ್ಲಿ
ಉಂಡನೆಯ ಕಾಳಾಗಿ
ಬಾ ವಸಂತವೆ ಬಾ ||

ಬತ್ತಿರುವ ಕೆರೆಯಲ್ಲಿ
ಬಿತ್ತುತ್ತ ನೀರನ್ನು
ಭುವಿಯ ಕನ್ನಡಿಯಾಗಿ
ಕವಿಯ ಹೊನ್ನುಡಿಯಾಗಿ
ಬೆಡಗಾಗಿ ಬೆರಗಾಗಿ
ಬಾ ವಸಂತವೆ ಬಾ ||

ಪುರುಡು ಮನಗಳ ಬೆಳಗಿ
ಬರಡು ಕೊಮೆಕೊಮೆಗಳಲ್ಲಿ
ಬಣ್ಣಬಣ್ಣದ ಹೂ ಅರಳಿಸಿ
ಸುತ್ತೆಲ್ಲ ಮಧುರ ಕಂಪನ್ನು
ಇಡಿದಿಡಿದು ಹರಡುತ್ತ
ಬಾ ವಸಂತವೆ ಬಾ ||

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು