ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಂಕರ್ ಸಿಹಿಮೊಗೆ ಬರೆದ ಕವಿತೆ: ಯುದ್ಧ ಮತ್ತು ಗಾಂಧೀ

Last Updated 1 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಸುಟ್ಟುಬಿಡಬೇಕು
ಎಲ್ಲರನ್ನೂ, ಇಲ್ಲಿರುವ ಎಲ್ಲರನ್ನು !
ಸಿಂಧೂವಿನಿಂದ ಹಿಡಿದು
ಕನ್ಯಾಕುಮಾರಿಯವರೆಗೂ
ಕೊಂದುಬಿಡಬೇಕು!
ಈಗಾ ಗಾಂಧೀಯಿಲ್ಲ
ಯುದ್ಧವೊಂದೆ ಗಾಂಧೀ ಎನ್ನಬೇಕು!

ಚಳಿಗಾಲದಲ್ಲಿ ಬಟ್ಟೆ ತೊಡದೆ
ಕೊರಗಿದ ಮೈಯಿಗೆ
ಶಾಂತಿಯೆಂಬ ಬಿಳಿಯ ಕವಚವ ತೊಟ್ಟು,
ಮಳೆಗಾಲದಲ್ಲಿ ಹಸಿರೆಂಬ
ವಸಂತವ ಮಡಿಲಲ್ಲಿ ಉಟ್ಟು,
ಬೇಸಿಗೆಯಲ್ಲಿ ಬೇಸತ್ತು ಕೇಸರಿಯ
ದುರಿತ ಕಾಲವನ್ನು ನಿರಾಕರಿಸಿದ ಗಾಂಧೀಗೆ
ಈಗಾ ಯುದ್ಧ ಬೇಕಾಗಿದೆ !

ಜಪಾನ್, ಜರ್ಮನಿ, ಕೊರಿಯ
ಚೀನಾ, ಅಮೇರಿಕಾದಂತಹ ರಾಷ್ಟ್ರಗಳು
ಭಾರತದ ಗತಿಯ ನೋಡಿ
ಗಾಂಧೀಯ ನಿರಾಕರಿಸಬೇಕಾಗಿದೆ!
ಗಾಂಧೀಯನ್ನು ಕೊಂದು
ವೀರಾವೇಶದಿಂದ ಭಾರತದಲ್ಲಿ ನಡೆದವರಿಗೆ
ಗಾಂಧೀಯ ಯುದ್ಧ ಬೇಕಾಗಿದೆ!

ಗಾಂಧೀ ಯುದ್ಧವೆಂದರೆ
ಬಂದೂಕುಗಳಿಂದ ಸುಡುವುದಲ್ಲ!
ಗಾಂಧೀ ಯುದ್ಧವೆಂದರೆ
ಪ್ರಾಣಿಗಳಿಗೆ ತಿವಿಯುವಂತೆ ತಿವಿಯುವುದಲ್ಲ!
ಧರ್ಮದ ಬೀಜ ಬಿತ್ತಿ
ಅಂಧದ ಹೊಲದಲ್ಲಿ ಬಿಟ್ಟು
ಕೇಕೆಯಾಡುವುದಲ್ಲ!

ಗಾಂಧೀಯ ಯುದ್ಧವೆಂದರೆ ಇಷ್ಚೇ,
ಪ್ರೀತಿಯಿಂದ ಕೊಲ್ಲಬೇಕು,
ಅಹಿಂಸೆಯಿಂದ ಕೊಲ್ಲಬೇಕು,
ಸತ್ಯಾಗ್ರಹದಿಂದ ಕೊಲ್ಲಬೇಕು,
ಅಸಹಕಾರದಿಂದ ಕೊಲ್ಲಬೇಕು,
ಕೊಲ್ಲುವುದಾದರೆ ಇವುಗಳಿಂದ ಕೊಲ್ಲಿ!
ಅಂಧಕಾರ ಅಜ್ಞಾನ ಅಸೂಯೆ ದ್ವೇಷವನ್ನು
ಕರುಣೆಯಿಂದ ಸುಟ್ಟು ಸಹನೆಯಿಂದ ಕೊಲ್ಲಿ,
ಯುದ್ಧ ಮಾಡಬೇಕೆಂದರೆ
ಪ್ರೀತಿಯಿಂದ ಯುದ್ಧ ಮಾಡಿ !

ಅಲ್ಲಿ ಯಾವಾಗಲೂ,
ಪ್ರತಿಯೊಬ್ಬರಲ್ಲೂ
ಗಾಂಧೀ ಇರುತ್ತಾನೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT