ನಿನ್ ಟಯರ್ ನಂಕೊಡು

7

ನಿನ್ ಟಯರ್ ನಂಕೊಡು

Published:
Updated:

ನೀವು ಉಡುಪಿ ಜಿಲ್ಲೆಯಲ್ಲಿರುವ ಕಾಪು ಅನ್ನೋ ಪುಟ್ಟ ಊರಿಗೆ ಬಂದಿದ್ದೀರೋ ಇಲ್ಲವೋ ಗೊತ್ತಿಲ್ಲ. ಸುಂದರ ನೀಲ ಕಡಲಿರುವ ಊರದು. ಆವತ್ತೊಂದಿನ ನಾನು ಆ ಊರಿನ ಕಡಲು ನೋಡಿಕೊಂಡು ಬೈಕೇರಿ ಬರುತ್ತಿರಬೇಕಾದರೆ ಸಂಜೆಯಾಗಿತ್ತು. ಆ ಊರಿನ ಪುಟ್ಟ ಪುಟ್ಟ ಕನ್ನಡ ಶಾಲೆಗಳಿಂದ ಮಕ್ಕಳು, ಇವತ್ತಿನ ಶಾಲೆ ಒಮ್ಮೆ ಮುಗಿಯಿತಲ್ಲ ಎನ್ನುವ ಖುಷಿಯಿಂದ ನಿಟ್ಟುಸಿರುಬಿಟ್ಟು ಬರುತ್ತಿದ್ದರು.

ಅಲ್ಲಿರುವ ಮಕ್ಕಳ ದೊಡ್ಡ ಗುಂಪಲ್ಲಿ ನನಗೆ ಬಹಳವಾಗಿ ಆಕರ್ಷಿಸಿದ್ದು, ಅಲ್ಲೇ ರಸ್ತೆ ಪಕ್ಕ ನಿಂತುಕೊಂಡು ಎಲ್ಲೋ ಸಿಕ್ಕ ಸೈಕಲ್ ಚಕ್ರದ ಟಯರ್‌ಗಳನ್ನು ಹಿಡಿದು ಆಟವಾಡುತ್ತಿದ್ದ ಮೂವರು ಮಕ್ಕಳು. ಆ ಗುಂಪಿನ ಪುಟ್ಟ ಹುಡುಗಿ, ತನ್ನಲ್ಲಿರುವ ಟಯರ್ ಸರಿಯಿಲ್ಲವೆಂದೂ, ‘ನನಗೆ ನಿನ್ನ ಸೈಕಲ್ ಟಯರ್ ಕೊಡು’ ಎಂದು ಗುಂಪಿನ ಹುಡುಗನ ಬಳಿ ಹಟ ಹಿಡಿದಿದ್ದಳು. ಅಲ್ಲಿದ್ದ ಕೆಂಪು ಬ್ಯಾಗಿನ ಹುಡುಗ, ಆಕೆಯ ಮೇಲೆ ಒಂದು ಚೂರೂ ರೇಗದೇ ತನ್ನಲ್ಲಿರುವ ಚಂದದ ಟಯರ್ ಅನ್ನು ಆಕೆಗೆ ನೀಡಿದಾಗ, ಆ ಹುಡುಗಿಯ ಮುಖ ಪೂರಿಯಂತೆ ಅರಳಿತು. ಆಮೇಲೆ ಮೂವರೂ ಸೇರಿ ಖುಷಿಯಿಂದ ಆಟ ಶುರು ಮಾಡಿದರು.

ಈ ಕಾಪು ಅನ್ನುವ ಊರಲ್ಲಿ ಈಗಲೂ ಮಕ್ಕಳು ಸೈಕಲ್ ಟಯರ್ ಅನ್ನು ಸಣ್ಣ ಕೋಲಿನಿಂದ ಹೊಡೆದುಕೊಂಡು ಅದನ್ನು ಊರಿಡಿ ಸುತ್ತಿಸುತ್ತಾ ಬಂಡಿ ಆಟ ಆಡುತ್ತಾರೆ. ಆ ಆಟ ನೋಡುವುದೇ ಎಷ್ಟು ಮಜಾ ಅಂತೀರಿ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !