ಆಗುವುದೇನಮ್ಮಾ?

7

ಆಗುವುದೇನಮ್ಮಾ?

Published:
Updated:
Deccan Herald

ಆಗಸದಿ ಹಾರಿದೆ
ಬಾನಲಿ ತೇಲಿದೆ
ಏನದು ಹೇಳಮ್ಮಾ?

ಬಣ್ಣದ ಹಾಳೆಗೆ
ಬಾಲವ ಕಟ್ಟಿದೆ
ಕಾರಣವೇನಮ್ಮ?

ರೆಕ್ಕೆಯು ಇಲ್ಲ
ಪುಕ್ಕವು ಇಲ್ಲ
ಹಾರುವದ್ಹೇಗಮ್ಮಾ?

ಅಲ್ಲಿಂದಿಲ್ಲಿಗೆ
ಇಲ್ಲಿಂದಲ್ಲಿಗೆ
ಬಾಗಿದೆ, ಬಳುಕಿದೆ
ಏನದು ಹೇಳಮ್ಮಾ?

ಕಣ್ಣನು ಸೆಳೆದಿದೆ
ಖುಷಿಯನು ಕೊಡುತಿದೆ
ನನಗೆ ಈಗಮ್ಮ,

ಬಾನಲಿ ಹಾರಲು
ನನಗೂ ಮನಸಿದೆ
ಆಗುವುದೇನಮ್ಮ?

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !