ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಿಕ್‌ ಸೃಷ್ಟಿಕರ್ತನ ಪಯಣ...

Last Updated 23 ನವೆಂಬರ್ 2018, 19:46 IST
ಅಕ್ಷರ ಗಾತ್ರ

* ಕಥೆಯ ಸಾಲುಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳುವಿರಿ?‌
ಇಂಥದ್ದೇ ಪ್ರಕಾರದ ಕಥೆಗಳು ಎಂಬ ಮಿತಿಯನ್ನು ಹೇರಿಕೊಂಡಿಲ್ಲ.ಮನಸ್ಸಿಗೆ ಇಷ್ಟವಾದ ಕಥೆಗಳು ಕಾಮಿಕ್‌ ರೂಪ ಪಡೆಯುತ್ತವೆ.

* ನಿಮ್ಮ ವೃತ್ತಿ ಬದುಕಿನ ಬಗ್ಗೆ ತಿಳಿಸಿ.
ಬಾಲ್ಯದಲ್ಲಿ ಎಲ್ಲ ಮಕ್ಕಳಂತೆ ಫ್ಯಾಂಟಮ್‌ ಕಥೆಗಳು ನನ್ನನ್ನು ಸೆಳೆದವು. ಟಿನ್‌ಟಿನ್‌, ಇಂದ್ರಜಾಲ, ಡೈಮಂಡ್‌ ಕಾಮಿಕ್‌, ಎ ಫ್ಯೂ ಡಿಸಿ ಓದುತ್ತಿದ್ದೆ. ಯೌವ್ವನದಲ್ಲಿ ಜೋನನ್‌ ವಾಸ್ಕ್ವೇಜ್‌, ರೋಮ್‌ ಡಿರ್ಜ್‌... ಹೀಗೆ ಹಲವು ಜನಪ್ರಿಯ ಕಾಮಿಕ್‌ ಸೃಷ್ಟಿಕರ್ತರ ಪುಸ್ತಕಗಳು ಸೆಳೆದವು. ಮಾಧ್ಯಮದೊಂದಿಗಿನ ನನ್ನ ಪ್ರಯೋಗವು ಈ ಮಹಾನ್ ವ್ಯಕ್ತಿಗಳಿಗೆ ಗೌರವಾರ್ಪಣೆ ಮಾಡಲು ಪ್ರಯತ್ನವಾಗಿ ಪ್ರಾರಂಭವಾಯಿತು.‌ ಸೂಫಿ ಸ್ಟುಡಿಯೊಗೆ 2011ರಲ್ಲಿ ಇಲ್ಲಸ್ಟ್ರೇಷನ್‌ ಮಾಡಲು ಆರಂಭಿಸಿದೆ. ಅಲ್ಲಿಯ ಕಥೆಗಳು ನನ್ನ ಪ್ರಕಾರಕ್ಕೆ ಒಗ್ಗುತ್ತಿರಲಿಲ್ಲ. ಹೀಗಾಗಿ ಆರಂಭಿಕ ಹಂತದಲ್ಲಿ ಅಲ್ಲಿ ಕೆಲಸ ಮಾಡುವುದು ಸವಾಲು ಎನಿಸಿತು. ಆದರೆ ಬದಲಾವಣೆಗಳನ್ನು ಸ್ವೀಕರಿಸಿದ ಕಾರಣ ಮೂರು ಗ್ರಾಫಿಕ್‌ ಕಾದಂಬರಿಗಳಿಗೆ ಇಲ್ಲಸ್ಟ್ರೇಷನ್‌ ಮಾಡುವುದು ಸಾಧ್ಯವಾಯಿತು.ಕಾಮಿಕ್‌ ಪುಸ್ತಕಗಳ ಕುರಿತು ಅರಿವು ಬೆಳೆಸುವ ಸಲುವಾಗಿ ಶಾಲೆಗಳಲ್ಲಿ ಕಾರ್ಯಾಗಾರ ನಡೆಸುತ್ತೇನೆ.

* ಯಾವ ರೀತಿಯ ಕಥೆಗಳು ಜನರನ್ನು ಹೆಚ್ಚು ಸೆಳೆಯುತ್ತವೆ?
ವಿವಿಧ ಪ್ರಕಾರದ ಕಾಮಿಕ್‌ಗಳಿಗೆ ಅದರದ್ದೇ ಆದ ಓದುಗರು ಇದ್ದಾರೆ. ಹಲವು ಪ್ರಕಾರದ ಕಥೆಗಳ ಕುರಿತು ಕೆಲಸ ಮಾಡಿದಾಗಲೇ ಓದುಗರ ಮನಸ್ಥಿತಿ ಅರಿಯುವುದು ಸಾಧ್ಯವಾಗುತ್ತದೆ.

* ನಿಮ್ಮ ಸೃಷ್ಟಿಯ ಕಾಮಿಕ್‌ಗಳ ಬಗ್ಗೆ ತಿಳಿಸಿ?
‘ಬಿಗ್‌ ಶೀಪ್‌’ ಮತ್ತು ‘ಕಿಸ್‌ ಕಿಸ್‌ ಬ್ಲಾಮ್‌ ಬ್ಲಾಮ್‌’ ಎಂಬ ಎರಡು ಸಣ್ಣ ಕಥೆಗಳು ಪ್ರಕಟವಾಗಿದೆ. ‘ಬ್ಲೇಮ್‌ ಇಟ್‌ ಆನ್‌ ರಹಿಲ್‌’ ಎಂಬ ಮೂರನೇ ಪುಸ್ತಕವನ್ನು ಕಾಮಿಕ್‌ ಕಾನ್‌ 2018ರಲ್ಲಿ ಬಿಡುಗಡೆ ಮಾಡಿದ್ದೇನೆ. ಇದರಲ್ಲಿ 9 ಕಥೆಗಳಿವೆ. ಎಂಟು ಕಾಮಿಕ್‌ ಪುಸ್ತಕಗಳಿಗೆ ಇಲ್ಯೂಸ್ಟ್ರೇಷನ್‌ ಮಾಡಿದ್ದೇನೆ. ಸ್ವಯಂ ಪ್ರಕಾಶನಕ್ಕೆ ಮೊದಲು, ಸೂಫಿ ಕಾಮಿಕ್ಸ್‌ಗೆ ಕೆಲಸ ಮಾಡುತ್ತಿದ್ದೆ. ಅಲ್ಲಿ ಮೂರು ಗ್ರಾಫಿಕ್‌ ಕಾದಂಬರಿಗಳಿಗೆಇಲ್ಯೂಸ್ಟ್ರೇಷನ್‌ ಮಾಡಿದ್ದೇನೆ.

* ಪ್ರಸ್ತುತ ಕಾಮಿಕ್‌ಗಳಿಗೆ ಜನರ ಪ್ರತಿಕ್ರಿಯೆ ಹೇಗಿದೆ?
ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಿಂದೆಲ್ಲ ಕಾಮಿಕ್‌ಗಳನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಆದರೆ ಈಗ ಕಾಲ ಬದಲಾಗುತ್ತಿದೆ.ಸೂಪರ್‌ ಹೀರೊ ಮಾದರಿಯ ಸಿನಿಮಾಗಳು ಜನರ ಮೇಲೆ ಪರಿಣಾಮ ಬೀರುತ್ತಿದೆ. ಸಿನಿಮಾ ನೋಡುವ ಮಂದಿ ಕಾಮಿಕ್‌ ಪುಸ್ತಕಗಳನ್ನು ಓದಲು ಉತ್ಸುಕತೆ ತೋರುತ್ತಾರೆ. ಕಾಮಿಕ್‌ ಕಾನ್‌ ಷೋ ಪ್ರಾರಂಭವಾದ ನಂತರವಂತೂ ಕಾಮಿಕ್‌ಗಳ ಕುರಿತು ಜನರ ಸೆಳೆತ ಹೆಚ್ಚಾಗಿದೆ. ಕಾಮಿಕ್‌ ಕಾನ್‌ ಶೋಗಳಲ್ಲಿ ಭಾಗವಹಿಸುವ ಜನರಿಗೆ ಕಾಮಿಕ್‌ ರಚನೆಕಾರರ ಪರಿಚಯವೂ ಸಾಧ್ಯವಾಗುತ್ತದೆ. ಆದರೂ, ಕಾಮಿಕ್‌ಗಳಿಗೆ ಈಗಿರುವ ಜನಪ್ರಿಯತೆ ಸಾಲದು. ನಾವು ಇನ್ನಷ್ಟು ದೂರ ಸಾಗಬೇಕಿದೆ. ಸ್ಥಳೀಯ ಕಾಮಿಕ್‌ಗಳ ಬಗ್ಗೆ ಜನರ ಗಮನ ಸೆಳೆಯುವ ಕೆಲಸ ನಡೆಯಬೇಕಿದೆ.

* ಎಲ್ಲೆಲ್ಲಿ ಪ್ರದರ್ಶನ ನೀಡಿದ್ದೀರಿ?
2012 ರಿಂದ 16ರವರೆಗೆ ‘ಕಾಮಿಕ್‌ ಕಾನ್‌’ನಲ್ಲಿ ಪ್ರದರ್ಶನ ನೀಡಿದ್ದೇನೆ.ಇಂಡಿ ಕಾಮಿಕ್ಸ್ ಫೆಸ್ಟ್ ಮತ್ತು ಗೈಸಿ ಝೈನ್ ಬಜಾರ್‌ನಲ್ಲಿ ಭಾಗವಹಿಸಿದ್ದೇನೆ.

* ಪಾಶ್ಚಾತ್ಯ ಕಾಮಿಕ್‌ ಮತ್ತು ದೇಶದ ಕಾಮಿಕ್‌ಗಳಿಗಿರುವ ವ್ಯತ್ಯಾಸ?
ಹೆಚ್ಚಿನ ವ್ಯತ್ಯಾಸವೇನು ಇಲ್ಲ. ಎರಡೂ ಕಡೆ ಪ್ರತಿಭಾನ್ವಿತ ಕಲಾವಿದರು, ಮಹ್ವಾಕಾಂಕ್ಷೆಯ ಪ್ರಕಾಶಕರು ಮತ್ತು ಕಾಮಿಕ್‌ ಸೃಷ್ಟಿಕರ್ತರು ಈ ಮಾಧ್ಯಮವನ್ನು ಜೀವಂತವಾಗಿ ಉಳಿಯಲು ಪ್ರಯತ್ನಿಸುತ್ತಿದ್ದಾರೆ.

* ಭವಿಷ್ಯದಲ್ಲಿ ಯಾವ ಪ್ರಕಾರದ ಕಾಮಿಕ್‌ಗಳಲ್ಲಿ ತೊಡಗಿಕೊಳ್ಳುವಾಸೆ?
ಹಾರರ್‌ ಕಾಮಿಕ್‌ಗಳ ಮೇಲೆ ನನಗೆ ಒಲವು ಹೆಚ್ಚು. ಆದರೆ ಈಗ ಲಘು, ತಮಾಷೆ, ವೈಜ್ಞಾನಿಕ, ಕಾರ್ಟೂನ್‌ ಕಥೆಗಳು ನನ್ನನ್ನು ಸೆಳೆಯುತ್ತಿವೆ. ಒಂದೇ ಪ್ರಕಾರಕ್ಕೆ ಅಂಟಿಕೊಳ್ಳುವ ಬದಲು ಎಲ್ಲಾ ಪ್ರಕಾರಗಳಲ್ಲಿಯೂ ಪ್ರತಿಭೆ ಪ್ರದರ್ಶಿಸುವ ಹಂಬಲವಿದೆ.

*ನಿಮ್ಮ ಬಹುಪಾಲು ಕಥೆಗಳಲ್ಲಿ ಬೆಕ್ಕುಗಳಿಗೆ ಪ್ರಾಧಾನ್ಯ ನೀಡಲು ಕಾರಣ?
ನನಗೆ ಬೆಕ್ಕುಗಳೆಂದರೆ ಅಪಾರ ಪ್ರೀತಿ. ಬಾಲ್ಯದಿಂದಲೂ ದಾರಿತಪ್ಪಿ ಮನೆಗೆ ಬಂದ ಬೆಕ್ಕುಗಳಿಗೆ ಬೆಚ್ಚನೆಯ ಗೂಡು ಸೃಷ್ಟಿಸುತ್ತಿದ್ದೆ. ಆದರೆಬೆಕ್ಕುಗಳು ಕ್ರಮೇಣವಾಗಿ ನನ್ನ ಸೃಜನಾತ್ಮಕ ಲೋಕವನ್ನು ಹೇಗೆ ಆಕ್ರಮಿಸಿಕೊಂಡಿದೆ ಎಂಬುದನ್ನು ನನಗೆ ವಿವರಿಸಲು ಸಾಧ್ಯವಿಲ್ಲ.ಬಹುಶಃ ಬೆಕ್ಕುಗಳ ಮೇಲಿನ ಪ್ರೀತಿಯೇ ನನ್ನ ಕಥೆಗಳಲ್ಲಿಯೂ ಅಭಿವ್ಯಕ್ತವಾಗಿರಬಹುದು.⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT