ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿಗೆ ‘ಪಿಜನ್‌’ ಕೊಡುಗೆ

Last Updated 29 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ಗೃಹಬಳಕೆ ವಸ್ತುಗಳ ತಯಾರಿಕಾ ಕಂಪನಿಯಾದ ‘ಪಿಜನ್’ ದೀಪಾವಳಿ ಹಬ್ಬದ ಅಂಗವಾಗಿ ತನ್ನ ಉತ್ಪನ್ನಗಳ ಮೇಲೆ ಶೇಕಡ 35ರಿಂದ 40ರಷ್ಟು ರಿಯಾಯಿತಿ ಘೋಷಿಸಿದೆ.

₹ 25,286 ದರವುಳ್ಳ ಮೂರು ಬರ್ನರ್‌ಗಳ ಗ್ಯಾಸ್ ಹಾಗೂಚಿಮಣಿಯ ಬೆಲೆಯು ಸದ್ಯ ₹13,995ಗೆ ಕಂಪನಿಯು ಗ್ರಾಹಕರಿಗೆ ನೀಡುತ್ತಿದೆ. ಇದೇ ರೀತಿ,ಅಲ್ಯುಮಿನಿಯಂ ಪ್ರೆಷರ್ ಕುಕ್ಕರ್ ಮತ್ತು ಮಿಕ್ಸರ್ ಗ್ರೈಂಡರ್ (ಕಾಂಬೋ ಆಫರ್) ಬೆಲೆ₹ 3,695ಗೆ ಲಭ್ಯ

3 ಬರ್ನರ್ ಗ್ಯಾಸ್ ಕುಕ್ ಟಾಪ್ ಮತ್ತು ಪ್ರೆಷರ್ ಕುಕ್ಕರ್ (ಕಾಂಬೋ ಆಫರ್), 2 ಬರ್ನರ್ ಇರುವ ಗ್ಯಾಸ್ ಸ್ಟವ್, ಒಂದು ಫ್ರೈ ಪ್ಯಾನ್ ಮತ್ತು ಕಡಾಯಿ (ಕಾಂಬೋ) ಬೆಲೆ ₹ 3,495. ಗ್ಯಾಸ್ ಕುಕ್ ಟಾಪ್, ಫ್ರೈ ಪ್ಯಾನ್ ಮತ್ತು ಪ್ರೆಷರ್ ಕುಕ್ಕರ್ (ಕಾಂಬೋ) ದರ ₹ 3,495ಕ್ಕೆ ಸಿಗಲಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಎಲೆಕ್ಟ್ರಿಕ್ ಕೆಟಲ್, ಥರ್ಮಲ್ ಫ್ಲಾಸ್ಕ್ ಮತ್ತು ಟೋಸ್ಟರ್ (ಕಾಂಬೋ ಆಫರ್) ರಿಯಾಯಿತಿ ಇದೆ. ಉಳಿದಂತೆ, ತನ್ನ ಬಹುತೇಕ ಎಲ್ಲ ಉತ್ಪನ್ನಗಳಿಗೂ ಶೇಕಡಾ 35ರಷ್ಟು ರಿಯಾಯಿತಿ ನೀಡಲಾಗಿದೆ. ಅಡುಗೆ ಮನೆಯ ಉತ್ಪನ್ನಗಳ ಜತೆಗೆ ಪಿಜನ್ ಸಂಸ್ಥೆಯು ಎಲ್ಇಡಿ ಬಲ್ಬ್‌ಗಳು ಡೌನ್ ಲೈಟ್ಸ್, ಸ್ಲಿಮ್ ಪ್ಯಾನೆಲ್ಸ್, ಸರ್ಫೇಸ್ ಪ್ಯಾನೆಲ್ಸ್, ಟಿ5 ಬ್ಯಾಟನ್ಸ್, ಆಲಂಕಾರಿಕ ದೀಪಗಳು ಮತ್ತಿತರ ಸಾಧನಗಳ ಮೇಲೂ ಆಕರ್ಷಕ ರಿಯಾಯಿತಿ ಲಭ್ಯ. ಈ ಕೊಡುಗೆ ನವೆಂಬರ್ ಅಂತ್ಯದವರೆಗೆ ಮಾತ್ರ ಎಂದಿದೆ ಕಂಪನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT