ಸುನೇರಿ ಬಣ್ಣದ ಸೀರೆ

7

ಸುನೇರಿ ಬಣ್ಣದ ಸೀರೆ

Published:
Updated:
Deccan Herald

ನನ್ನ ತವರೂರು ಶಿವಮೊಗ್ಗ. ನನಗಾಗ 19. ನನ್ನಪ್ಪಂದು ದರ್ಜಿ ವೃತ್ತಿ. ‘ಒಳ್ಳೆಯ ಸಂಬಂಧದಲ್ಲಿ ವರನಿದ್ದಾನೆ ನಿನ್ನ ಮಗಳನ್ನು ಕೊಟ್ಟು ಮದುವೆ ಮಾಡಬಾರದೇಕೆ’ ಎಂಬ ಸಂಬಂಧಿಕರ ಮಾತಿಗೆ ಒಪ್ಪಿ ವಿವಾಹ ಮಾಡಲು ಮುಂದಾದರು. ಅಪ್ಪನ ಮಾತಿಗೆ ಒಪ್ಪಿದೆ.

ಧಾರವಾಡದಿಂದ ನನ್ನನ್ನು ನೋಡಲು ಬಂದ ವರನ ಕಡೆಯವರು ಮದುವೆಗೆ ಸಮ್ಮತಿಸಿದರು. ವಾರದ ಬಳಿಕ ಅವರು 15 ಮಂದಿ ಬಂಧು ಬಳಗದೊಂದಿಗೆ ಬಂದು ನಿಶ್ಚಿತಾರ್ಥವನ್ನೂ ಮಾಡಿಕೊಂಡರು. ಬರುವಾಗ ಶಿವಮೊಗ್ಗದ ಟಿ.ಖಂಡೇರಾವ್ ಬಟ್ಟೆ ಅಂಗಡಿಯಿಂದ ‘ಸುನೇರಿ ಬಣ್ಣದ ಚಾಕಲೇಟ್ ಅಂಚಿನ ಮಿರಿಮಿರಿ ಮಿಂಚುವ ಸೆರಗಿನ ಸೀರೆ’ಯನ್ನು ನನಗಾಗಿ ತಂದಿದ್ದರು. ಆ ಅಂಗಡಿಯಲ್ಲಿ ಆ ಸೀರೆಯನ್ನು ಹಾಗೇ ಹೇಳುತ್ತಿದ್ದುದು.

ಅದು ಅವರು ನನಗೆ ಕೊಟ್ಟ ಮೊದಲ ಸೀರೆ. ಅದು ಇಂದಿಗೂ ನನ್ನಲ್ಲಿದೆ. ನನಗೀಗ ಐವತ್ತಾರು ವರ್ಷ.

ನನ್ನ ಸೊಸೆಯಂದಿರು ‘ಇಷ್ಟೊಂದು ಹಳೆಯ ಸೀರೆ ಬೇಡ ತೆಗೆದುಬಿಡಿ’ ಎಂದು ಎಷ್ಟೋ ಬಾರಿ ಹೇಳಿದ್ದರು. ಅವರ ಮಾತಿಗೆ ತಲೆಕೆಡಿಸಿಕೊಳ್ಳದೆ ‘ನನಗೆ ನನ್ನವರು ನಿಶ್ಚಿತಾರ್ಥಕ್ಕೆಂದು ತಂದ ಈ ಸೀರೆ ನನ್ನವರ ನೆನಪಿಗಾಗಿ ನನ್ನಲ್ಲಿರಲಿ ನಮ್ಮಿಬ್ಬರ ಸಂಬಂಧ ಬೆಸೆದ ಈ ಸೀರೆಯನ್ನು ಎಂದಿಗೂ ಮರೆಯಲಾಗದು. ಮೂಲೆಗುಂಪು ಮಾಡಲಾರೆ’ ಎಂದೇ ಉತ್ತರಿಸುತ್ತೇನೆ. ಅದನ್ನು ಕೇಳಿದ ಸೊಸೆಯಂದಿರು ನನ್ನನ್ನು ಬಿಗಿದಪ್ಪಿದ್ದುಂಟು.
–ಗಾಯಿತ್ರಿ ಏಕನಾಥರಾವ್ ಮಹೀಂದ್ರಕರ್, ಧಾರವಾಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !