ಪೂಜಾ ಗಾಂಧಿ ಮುಖದಲ್ಲಿ ಹೂನಗೆ! ಅದು `ದಂಡುಪಾಳ್ಯ~ ಚಿತ್ರದ ಅಭಿನಯಕ್ಕೆ ಸಿಗುತ್ತಿರುವ ಮನ್ನಣೆಯಿಂದ ಮೂಡಿದ್ದು.

`ದಂಡುಪಾಳ್ಯ~ ಚಿತ್ರದ ಅವರ ಪೋಸ್ಟರ್ ವಿರುದ್ಧ ಪ್ರತಿಭಟನೆ ಮಾಡಿದ್ದವರೇ ಸಿನಿಮಾ ನೋಡಿಕೊಂಡು ಬಂದು ಹೊಗಳಿದ್ದು ಅವರಿಗೆ ವಿಚಿತ್ರ ಸಂತೋಷ ಕೊಟ್ಟಿದೆಯಂತೆ.
`ಮೊಬೈಲ್ ತುಂಬಾ ಪ್ರಶಂಸೆಗಳ ಸುರಿಮಳೆ ಇದೆ. ಅದಕ್ಕಿಂತ ದೊಡ್ಡದೆಂದರೆ, ಅಂದು ಪ್ರತಿಭಟನೆ ಮಾಡಿದವರೂ ಇಂದು ನನ್ನ ನಟನೆಯನ್ನು ಮೆಚ್ಚಿಕೊಂಡು ಮಾತನಾಡಿದ್ದು ಖುಷಿ ನೀಡಿದೆ.

ಇದೇ ನನ್ನ ದೊಡ್ಡ ಸಾಧನೆ. ನಾನು ಕನ್ನಡದಲ್ಲಿ ಒಳ್ಳೆಯ ಅಭಿನೇತ್ರಿ ಎನಿಸಿಕೊಂಡಿರುವೆ. ಅದಕ್ಕಿಂತ ಒಬ್ಬ ನಟಿಗೆ ಇನ್ನೇನು ಬೇಕು~ ಎಂದರು ಪೂಜಾ.`ಪ್ರಶಸ್ತಿ ಬೇಡವೇ? ಎಂದದ್ದಕ್ಕೆ `ಬೇಕು ಬೇಕು ಬೇಕು~ ಎನ್ನುತ್ತಾ ಜೋರು ನಗೆ ನಕ್ಕರು.

`ಪ್ರತಿಭಟನಾಕಾರರನ್ನು ಕಂಡಾಗ ಸಿನಿಮಾ ನೋಡದೇ ಇವರು ಪ್ರತಿಭಟನೆ ಯಾಕೆ ಮಾಡುತ್ತಿದ್ದಾರೆ ಎನಿಸಿತ್ತು. ಆದರೆ ನನ್ನ ಪಾತ್ರದ ಬಗ್ಗೆ ನನಗೆ ಗಟ್ಟಿಯಾದ ನಂಬಿಕೆ ಇತ್ತು. ಅದು ಇಂದು ನಿಜವಾಗಿದೆ. ಎಲ್ಲರೂ ನನ್ನ ಅಭಿನಯವನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಪಾತ್ರ ನನಗೊಂದು ದೊಡ್ಡ ಸವಾಲಾಗಿತ್ತು. ಅದು ನಾನು ಕಲಾವಿದೆಯಾಗಿ ಬೆಳೆದಿರುವುದನ್ನು ತೋರಿಸುತ್ತಿದೆ~ ಎಂದು ಮುದಗೊಂಡರು.

ಸಾಮಾನ್ಯವಾಗಿ ಒಂದು ಪಾತ್ರ ಹಿಟ್ ಆದರೆ ಅಂಥದೇ ಪಾತ್ರಗಳು ಹುಡುಕಿ ಬರುತ್ತವೆ. ಮತ್ತೆ ಅಂಥದೇ ಪಾತ್ರ ಬಂದರೆ ಮಾಡುವಿರಾ? ಎಂಬ ಪ್ರಶ್ನೆಗೆ ಪೂಜಾ, `ಇಲ್ಲ. ಮತ್ತೆ ಮತ್ತೆ ದಂಡುಪಾಳ್ಯ ಮಾಡೋಕಾಗಲ್ಲ. ಆದರೆ ಅದೇ ಲೆವೆಲ್ನ ಪಾತ್ರ ಬಂದರೆ ಖಂಡಿತ ಮಾಡುವೆ~ ಎನ್ನುತ್ತಾರೆ.

ಅವರ ಪಾತ್ರಕ್ಕೆ ಸಿಗುತ್ತಿರುವ ಪ್ರಶಂಸೆಯೊಂದಿಗೆ ಸಿನಿಮಾ ಹಿಟ್ ಆಗಿರುವುದು ಪೂಜಾ ಅವರಿಗೆ ಮತ್ತಷ್ಟು ಸಂತೋಷ ತಂದಿದೆಯಂತೆ.`ಅಮ್ಮ ನನ್ನ ಸಿನಿಮಾಗಳ ವಿಮರ್ಶಕಿ. ಅವರು `ದಂಡುಪಾಳ್ಯ~ ನೋಡಿ, ನೀನು ಸ್ಮಿತಾ ಪಾಟೀಲ್ ಮಟ್ಟಕ್ಕೆ ನಟಿಸಿರುವೆ ಎಂದು ಹೇಳಿದರು.

ಅಮ್ಮ ಒಪ್ಪಿಕೊಂಡ ಮೇಲೆ ಇಡೀ ಪ್ರಪಂಚವೇ ಒಪ್ಪಿಕೊಂಡ ಹಾಗೆ~ ಎಂದ ಪೂಜಾ, ಇದೀಗ ತಮ್ಮ ಇಮೇಜ್ ಬದಲಾಗಿರುವುದರಿಂದ ರೊಮ್ಯಾಂಟಿಕ್ ಪಾತ್ರಗಳಿಗೆ ಕರೆ ಬರುವುದಿಲ್ಲ ಎಂಬ ಮಾತನ್ನು ನಿರಾಕರಿಸಿದರು. `ನಾನು ಸಾಕಷ್ಟು ರೊಮ್ಯಾಂಟಿಕ್ ಸ್ಕ್ರಿಪ್ಟ್ಗಳನ್ನು ಕೇಳಿ ಬೇಸರಗೊಂಡಿದ್ದೆ.

ಅದೇ ಸಮಯದಲ್ಲಿ ದಂಡುಪಾಳ್ಯಕ್ಕೆ ಅವಕಾಶ ಬಂತು. ಇನ್ನು ಮುಂದೆ ವಿಭಿನ್ನವಾದ ಪಾತ್ರಗಳನ್ನು ನಿರೀಕ್ಷಿಸುತ್ತಿರುವೆ. ನನಗೆ ಸಂಪೂರ್ಣ ಹಾಸ್ಯಮಯ ಚಿತ್ರದಲ್ಲಿ ನಟಿಸುವಾಸೆ ಇದೆ. ಆಕ್ಷನ್ ಮಾಡುವಾಸೆಯೂ ಇದೆ. ಕೇವಲ ಗ್ಲಾಮರ್, ಹೋಮ್ಲಿ ಎಂದು ಕೂರುವುದಿಲ್ಲ. ಪ್ರಯೋಗಾತ್ಮಕವಾಗಿ ನನ್ನ ಕಲೆಯನ್ನು ಪಣಕ್ಕಿಡುವೆ~ ಎಂದರು ಪೂಜಾ. ಅವರಿಗೀಗ `ದಂಡುಪಾಳ್ಯ~ಕ್ಕಾಗಿ ಒಂದು ವರ್ಷ ಪಟ್ಟ ಕಷ್ಟ ಸಾರ್ಥಕ ಎನಿಸಿದೆಯಂತೆ.

`ದಂಡುಪಾಳ್ಯ~ ಚಿತ್ರದ ಲಕ್ಷ್ಮಿ ಪಾತ್ರಕ್ಕೆ ಪೂಜಾ ಗಾಂಧಿ ತಮ್ಮ ದೇಹ ಭಾಷೆ, ಮಾತನಾಡುವ ರೀತಿಯನ್ನು ಸಂಪೂರ್ಣವಾಗಿ ಬದಲಿಸಿಕೊಂಡಿದ್ದರು. ಜೊತೆಗೆ ಪಾತ್ರಕ್ಕೆ ಸ್ವತಃ ಡಬ್ ಮಾಡಿದ್ದರು. ಪಾತ್ರವನ್ನು ಆವಾಹಿಸಿಕೊಂಡಂತೆ ಅವರಿಗೆ ನಟಿಸಲು ಸಾಧ್ಯವಾಗಿದ್ದು ಅವರು ಸ್ಲಂ ಜನರೊಂದಿಗೆ ಇಟ್ಟುಕೊಂಡಿರುವ ಒಡನಾಟದಿಂದ ಅಂತೆ.

`ನಾನು ಎನ್ಜಿಒದಲ್ಲಿ ಕೆಲಸ ಮಾಡುತ್ತಿರುವೆ. ಅದರ ಮೂಲಕ ಸಾಕಷ್ಟು ಕೊಳಗೇರಿಗಳಿಗೆ ಭೇಟಿ ನೀಡಿದ್ದೆ. ಆಗ ನನ್ನ ಪಾತ್ರದಂಥ ಅದೆಷ್ಟೋ ಜನರನ್ನು ನೋಡಿದ್ದೆ, ಮಾತನಾಡಿಸಿರುವೆ. ಅದರಿಂದಲೇ ನನಗೆ ಪಾತ್ರ ನಿರ್ವಹಣೆ ಸುಲಭವಾಯಿತು. ಸೆಟ್ಗೆ ಹೋಗುವ ಮುಂಚೆ ಖಾಲಿ ತಲೆಯಲ್ಲಿ ಹೋಗುತ್ತಿದ್ದೆ.

ಮನಸ್ಥಿತಿ ಮಾತ್ರ ಸ್ಟ್ರಾಂಗ್ ಆಗಿತ್ತು. ಯಾವುದೇ ಭಾವನೆಗಳಿಲ್ಲದ, ಹುಡುಗರಂತಿರುವ ಆ ಹುಡುಗಿ ಪಾತ್ರವನ್ನು ಮನದಲ್ಲಿ ಅನುಭವಿಸುತ್ತಾ ನಟಿಸಿದೆ~ ಎಂದು ನೆನಪನ್ನು ಮೆಲುಕು ಹಾಕಿದರು.

ಇಡೀ ಸಿನಿಮಾದಲ್ಲಿ ಹಂದಿ ಹಿಡಿಯೋ ದೃಶ್ಯದ ಚಿತ್ರೀಕರಣದಲ್ಲಿ ಪೂಜಾ ಸಾಕಷ್ಟು ಕಷ್ಟಪಟ್ಟರಂತೆ. ಅಂತಿಮವಾಗಿ ದೃಶ್ಯ ಓಕೆಯಾದಾಗ ಅವರಿಗೆ ಖುಷಿಯಾಗಿತ್ತಂತೆ. ಅದನ್ನೇ ತೆರೆಯ ಮೇಲೆ ನೋಡಿದಾಗ ಸಂತೋಷ ಇಮ್ಮಡಿಯಾಯಿತಂತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.