ಮಂಗಳವಾರ, ಮೇ 11, 2021
20 °C

ಅಂಕಪಟ್ಟಿಗಳು ಜ್ಞಾನಸೂಚಕ ದಾಖಲೆ ಅಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿಪ್ಪಾಣಿ: `ತಾಂತ್ರಿಕ ಜ್ಞಾನಕ್ಕಿಂತ ಭಾವನಾತ್ಮಕ ಬುದ್ಧಿಶಕ್ತಿ ಉಳ್ಳವ ಯಶಸ್ವೀ ವ್ಯಕ್ತಿಯಾಗಿ ಬೆಳೆಯಬಲ್ಲ. ಬರಿ ಅಂಕಪಟ್ಟಿಗಳು ಜ್ಞಾನಸೂಚಕ ದಾಖಲೆಗಳಲ್ಲ. ಹಾಗಾಗಿ ವಿದ್ಯಾರ್ಥಿ ದೆಸೆಯಿಂದಲೇ ಆದರ್ಶಗಳನ್ನು ಬೆಳೆಸಿಕೊಳ್ಳಬೇಕು. ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಿ~ ಎಂದು ಬೆಳಗಾವಿಯ ವಿಟಿಯು ವ್ಯವಸ್ಥಾಪನಾ ವಿಭಾಗದ  ಪ್ರೊ.ವಿನೋದ ದೇಶಪಾಂಡೆ ಹೇಳಿದರು.ಕೆ.ಎಲ್.ಇ ಸಂಸ್ಥೆಯ ಸ್ಥಳೀಯ ಜಿ.ಐ.ಬಾಗೇವಾಡಿ ಕಾಲೇಜಿನಲ್ಲಿ ಸೋಮವಾರ ಜರುಗಿದ ಬಹುಮಾನ ವಿತರಣಾ ಮತ್ತು ವಾರ್ಷಿಕ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ವಿದ್ಯಾರ್ಥಿಯ ಆಸಕ್ತಿಯ ಕ್ಷೇತ್ರದ ಜೊತೆಗೆ ವ್ಯಕ್ತಿತ್ವ ಬೇರೆಯವರ ಎದುರಲ್ಲಿ ಅನಾವರಣಗೊಳ್ಳುವುದು. ಧನಾತ್ಮಕ ದೃಷ್ಟಿ, ವೃತ್ತಿ ಕೌಶಲ್ಯ ಹಾಗೂ ಜ್ಞಾನ ಈ ಮೂರು ಸಂಗತಿಗಳನ್ನು ವ್ಯಕ್ತಿತ್ವ ವಿಕಾಸಕ್ಕೆ ಬಳಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸೂಚನೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ವಿ.ವಿ.ಬೆಂಗೇರಿ ಮಾತನಾಡಿ, ಆಧುನಿಕ ತಂತ್ರಜ್ಞಾನದ ಎಲ್ಲ ಸೌಕರ್ಯಗಳನ್ನು ಕಾಲೇಜು ಭವಿಷ್ಯದಲ್ಲಿ ಹೊಂದಲಿದ್ದು ತಾಂತ್ರಿಕ ಆವರಣವಾಗಿ ಹೊರ ಹೊಮ್ಮಲಿದೆ ಎಂದರು.

ಕಾಮನ್ ಪ್ರೊಫಿಸಿಯನ್ಸಿ ಟೆಸ್ಟ್ (ಸಿಪಿಟಿ) ಮತ್ತು ಇಂಟೆಗ್ರೆಟೆಡ್ ಪ್ರೊಫೆಶನಲ್ ಕಾಂಪಿಟೆನ್ಸ್ ಕೋರ್ಸ್ (ಐಪಿಸಿಸಿ) ನಲ್ಲಿ ಉತ್ತೀರ್ಣರಾದ ಅಜೀತ ಅಕೋಳೆ ಅವರನ್ನು  ಸತ್ಕರಿಸಲಾಯಿತು.ಆದರ್ಶ ವಿದ್ಯಾರ್ಥಿಗಳಾಗಿ ಕಲಾ ವಿಭಾಗದ ವರ್ಷಾರಾಣಿ ಜಬಡೆ, ಮಹೇಶ ಜಾವನ್ನವರ, ವಿಜ್ಞಾನ ವಿಭಾಗದ ಮಯೂರಿ ನಾಡಕರ್ಣಿ, ಸುಹಾಸ ಮೆಂಚ ಹಾಗೂ ವಾಣಿಜ್ಯ ವಿಭಾಗದ ಪ್ರಿಯಾಂಕಾ ಕಮತೆ, ಚೈತನ್ಯ ಕುಲಕರ್ಣಿ ಫಲಕ ಮತ್ತು ಪ್ರಶಸ್ತಿ ಪತ್ರ ಪಡೆದರು.ವಿಶ್ವವಿದ್ಯಾಲಯ ಮಟ್ಟದ ವೈಯಕ್ತಿಕ ಹಾಗೂ ತಂಡವಾಗಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನೊಳಗೊಂಡು ವಾರ್ಷಿಕ ಕ್ರೀಡಾ ಮತ್ತು ಇತರ ಚಟುವಟಿಕೆಗಳಲ್ಲಿ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಅತಿಥಿಗಳು ಬಹು ಮಾನ ವಿತರಿಸಿದರು. ಸಮಗ್ರ ವೀರಾಗ್ರಣಿ ಪ್ರಶಸ್ತಿ ಪುರುಷರ ವಿಭಾಗದಲ್ಲಿ ಮಲ್ಲಿಕಾರ್ಜುನ ಕುಂಬಾರ ಮತ್ತು ಮಹಿಳೆಯರ ವಿಭಾಗದಲ್ಲಿ ದೀಪಾಲಿ ಮಗದುಮ್ ಇವರುಗಳು ಪಡೆದರು.ಕ್ರೀಡಾ ವಿಭಾಗದ ಉಪಾಧ್ಯಕ್ಷ ಪ್ರೊ. ಎಸ್.ಎಂ.ಬಿರದೆ, ಉಪಪ್ರಾಚಾರ್ಯ ಡಾ.ಎಂ.ಬಿ.ಕೋಥಳಿ ಹಾಗೂ ಪ.ಪೂ.ಪ್ರಾಚಾರ್ಯ ಪ್ರೊ.ಸಿ.ವಿ. ಕೊಪ್ಪದ ಉಪಸ್ಥಿತರಿದ್ದರು.ಡಾ.ವಿ.ವಿ.ಬೆಂಗೇರಿ ವರದಿ ವಾರ್ಷಿಕ ವಾಚನ ಮಾಡಿದರು. ಪ್ರೊ.ಎಸ್.ಎಂ. ಬಿರದೆ ಕ್ರೀಡಾ ವರದಿ ವಾಚಿಸಿದರು. ವೀಣಾ ಹೆಗಡೆ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಬಹುಮಾನ ವಿತರಣೆ ಕಾರ್ಯಕ್ರಮವನ್ನು ಪ್ರೊ.ಕೆ.ಎನ್. ಶಂಕರಮೂರ್ತಿ ನಡೆಸಿಕೊಟ್ಟರು.ಡಾ.ಎಂ.ಬಿ.ಕೋಥಳಿ ಸ್ವಾಗತಿಸಿದರು. ಪ್ರೊ.ವಿಕ್ರಮ ವೇರಣೇಕರ ಪರಿಚ ಯಿ ಸಿದರು. ಪ್ರಾಚಾರ್ಯ  ಪ್ರೊ.ಶ್ರದ್ಧಾ ಪಾಟೀಲ ನಿರೂಪಿಸಿದರು. ಪ್ರೊ.ಗಂಗಾಬಿಕಾ ಚೌಗಲಾ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.