ಶುಕ್ರವಾರ, ಸೆಪ್ಟೆಂಬರ್ 20, 2019
28 °C

ಅಂಗನವಾಡಿ ಕಟ್ಟಡ ನಿರ್ಮಾಣ: ಗುದ್ದಲಿ ಪೂಜೆ

Published:
Updated:

ಮಹದೇವಪುರ: ವೈಟ್‌ಫೀಲ್ಡ್ ಸಮೀಪದ ಹಗದೂರು ಗ್ರಾಮದಲ್ಲಿ ಒಟ್ಟು ಹತ್ತು ಲಕ್ಷ    ರೂಪಾಯಿಗಳ ವೆಚ್ಚದಲ್ಲಿ  ನಿರ್ಮಿಸಲು ಉದ್ದೇಶಿಸಿರುವ ನೂತನ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಯಿತು.ಕಾರ್ಯಕ್ರಮದಲ್ಲಿ  ಬಿಬಿಎಂಪಿ ಸದಸ್ಯ ಎಚ್.ಎ.ಶ್ರೀನಿವಾಸ,   ಹಗದೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಆರ್. ಶ್ರೀನಿವಾಸ್, ಜೈರಾಮ್, ರಾಮಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

Post Comments (+)