ಅಂಗನವಾಡಿ ಕೇಂದ್ರಕ್ಕೆ ಸಿಡಿಪಿಓ ಭೇಟಿ

ಭಾನುವಾರ, ಮೇ 19, 2019
34 °C

ಅಂಗನವಾಡಿ ಕೇಂದ್ರಕ್ಕೆ ಸಿಡಿಪಿಓ ಭೇಟಿ

Published:
Updated:

ಸರಗೂರು: ಪಟ್ಟಣದ 10ನೇ ವಾರ್ಡಿನ ಅಂಗನವಾಡಿ ಕೇಂದ್ರ-1ರಲ್ಲಿ ಶಿಥಿಲ ವಾಗಿರುವ ಅಂಗನವಾಡಿ ಕೇಂದ್ರಕ್ಕೆ ಗುರುವಾರ ತಾಲ್ಲೂಕು ಶಿಶು ಅಭಿವೃದ್ಥಿ ಯೋಜನಾಧಿಕಾರಿ ರಾಮಕೃಷ್ಣಪ್ಪ ಭೇಟಿ ನೀಡಿ ಪರಿಶೀಲಿಸಿದರು.ನಂತರ ಮಾತನಾಡಿ ಆರ್‌ಐಡಿಎಫ್ ಯೋಜನೆಯಲ್ಲಿ ನೂತನವಾಗಿ ಅಂಗನ ವಾಡಿ ಕಟ್ಟಡ ನಿರ್ಮಾಣ ಮಾಡಲು ರೂ.4ಲಕ್ಷ ಬರುತ್ತಿದ್ದು, ಅಂಗನವಾಡಿ ನಿವೇಶನದ ದಾಖಲಾತಿಯನ್ನು ಇಲಾಖೆಗೆ ನೀಡಿದರೆ ಹಣವು ಬಿಡುಗಡೆ ಆಗುತ್ತದೆ ಎಂದು ಹೇಳಿದರು.ಸೆ.4ರಂದು `ಪ್ರಜಾವಾಣಿ~ ಯಲ್ಲಿ  `ಅಂಗನವಾಡಿ ಕಟ್ಟಡ ಶಿಥಿಲ~ ವರದಿ ಪ್ರಕಟವಾಗಿತ್ತು. ಮುಳ್ಳೂರು ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯೆ ಎಚ್.ಆರ್. ಭಾಗ್ಯಲಕ್ಷ್ಮಿ, ತಾ.ಪಂ. ಅಧ್ಯಕ್ಷ ಗೋಪಾಲ ಸ್ವಾಮಿ, ಪ.ಪಂ. ಉಪಾಧ್ಯಕ್ಷ ನಾಗ ರಾಜರಾಮ, ಅಂಗನವಾಡಿ ಕಾರ್ಯಕರ್ತೆ ವಿಜಯ ಲಕ್ಷ್ಮಿ, ತೊಗಟವೀರ ಸಮಾಜದ ಅಧ್ಯಕ್ಷ ಸಿ.ನಾಗರಾಜು, ಕಾರ್ಯದರ್ಶಿ ಸಿ. ರಂಗಧಾಮ, ಎಸ್.ಕೆ.ಮುಕುಂದ ರಾಜು, ಜಿ.ರಘುರಾಮ, ಎಸ್.ವಿ.ಗೋಪಾಲ ಕೃಷ್ಣ, ನಾಗರಾಜು, ಎಸ್.ಎನ್, ರಾಜಣ್ಣ, ಸಿ.ರಾಧಾಕೃಷ್ಣ ಇದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry