ರಾಮನಗರ:  ಪೋಲಿಯೊ ಪರಿಣಾಮ ಬಲಗೈ ಕಳೆದುಕೊಂಡಿರುವ ಪ್ರತಿಭಾವಂತ ಅಂಗವಿಕಲ ವಿದ್ಯಾರ್ಥಿ ಎಸ್. ರಾಘವೇಂದ್ರ ಅವರು ಎಸ್ಸೆಸ್ಸೆಲ್ಸಿ ಪರೀಕ್ಷೆ ಶೇ 93.76ರಷ್ಟು ಅಂಕಗಳನ್ನು ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.

ನಗರದ ಹೋಲಿ ಕ್ರೆಸೆಂಟ್ ಆಂಗ್ಲ ಶಾಲೆಯ ವಿದ್ಯಾರ್ಥಿಯಾಗಿರುವ ರಾಘವೇಂದ್ರ, ಬಲಗೈ ಊನ ಆಗಿರುವ ಕಾರಣ ಚಿಕ್ಕಂದಿನಿಂದಲೂ ಎಡಗೈನಲ್ಲಿಯೇ ಬರೆಯುವುದನ್ನು ಕರಗತ ಮಾಡಿಕೊಂಡಿದ್ದಾರೆ.

ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 586 ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.ಕನ್ನಡದಲ್ಲಿ 120, ಇಂಗ್ಲಿಷ್ನಲ್ಲಿ 87, ಹಿಂದಿಯಲ್ಲಿ 98, ಗಣಿತದಲ್ಲಿ 93, ವಿಜ್ಞಾನ 90, ಸಮಾಜ ವಿಜ್ಞಾನದಲ್ಲಿ 98 ಅಂಕಗಳನ್ನು ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.