ಅಂಗವಿಕಲರ ಕ್ರಿಕೆಟ್ ಸಂಸ್ಥೆಗೆ ನೇಮಕ

ಮಂಗಳವಾರ, ಜೂಲೈ 23, 2019
24 °C

ಅಂಗವಿಕಲರ ಕ್ರಿಕೆಟ್ ಸಂಸ್ಥೆಗೆ ನೇಮಕ

Published:
Updated:

ಹುಬ್ಬಳ್ಳಿ: ಅಖಿಲ ಭಾರತ ಅಂಗವಿಕಲರ ಕ್ರಿಕೆಟ್ ಸಂಸ್ಥೆಯ ದಕ್ಷಿಣ ವಲಯದ ಪ್ರತಿನಿಧಿಯಾಗಿ ನಗರದ ಹಿರಿಯ ಕ್ರಿಕೆಟ್ ಆಟಗಾರ, ಬಿಡಿಕೆ ಕ್ರೀಡಾ ಪ್ರತಿಷ್ಠಾನದ ಕೋಚ್ ಶಿವಾನಂದ ಗುಂಜಾಳ ಅವರನ್ನು ನೇಮಕ ಮಾಡಲಾಗಿದೆ.ಆಂಧ್ರಪ್ರದೇಶ, ಹೈದರಾಬಾದ್, ಕರ್ನಾಟಕ, ತಮಿಳುನಾಡು ಹಾಗೂ ಪಾಂಡಿಚೇರಿ ಕ್ರಿಕೆಟ್ ಸಂಸ್ಥೆಗಳನ್ನು ಅವರು ಪ್ರತಿನಿಧಿಸಲಿದ್ದಾರೆ. 1995ರಿಂದ 2005ರವರೆಗೆ ಹತ್ತು ವರ್ಷಗಳ ಕಾಲ ಅವರು ರಾಜ್ಯ ಅಂಗವಿಕಲರ ತಂಡದ ನಾಯಕರಾಗಿದ್ದರು. ಕರ್ನಾಟಕ ವಿಶ್ವವಿದ್ಯಾಲಯದ ಮಾಜಿ ಆಟಗಾರರೂ ಆಗಿರುವ ಅವರು, ಹುಬ್ಬಳ್ಳಿ ಮತ್ತು ಗದುಗಿನಲ್ಲಿ ಅಂಗವಿಕಲರ ರಾಷ್ಟ್ರಮಟ್ಟದ ಕ್ರಿಕೆಟ್ ಟೂರ್ನಿಯನ್ನೂ ಸಂಘಟಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry