ಮಂಗಳವಾರ, ಜನವರಿ 21, 2020
28 °C

ಅಂಗವಿಕಲರ ಗಣತಿಗೆ ವಿಕಲಚೇತನರ ರಕ್ಷಣಾ ಸಮಿತಿ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಾತಿ ಗಣತಿ ಜತೆ­ಯಲ್ಲೇ ಅಂಗವಿಕಲರ ಗಣತಿ ಕೈಗೊಳ್ಳ­ಬೇಕು ಎಂದು ಕರ್ನಾಟಕ ರಾಜ್ಯ ವಿಕಲಚೇತನರ ರಕ್ಷಣಾ ಸಮಿ ತಿಯು ಮುಖ್ಯಮಂತ್ರಿಯನ್ನು  ಒತ್ತಾಯಿಸಿದೆ.ಜಾತಿ ಗಣತಿ ಸಮೀಕ್ಷೆ ಕೈಗೊಂಡಿ­ರುವುದು ಮಹತ್ವದ ಹೆಜ್ಜೆಯಾಗಿದೆ. ಜಾತಿ ಗಣತಿಯಲ್ಲೇ ಪ್ರತ್ಯೇಕ ಕಾಲಂ ನೀಡಿ ಎಲ್ಲ ರೀತಿಯ ಅಂಗವಿಕಲರ ಸಮೀಕ್ಷೆ ನಡೆಸಿ ನ್ಯಾಯ ಒದಗಿಸಿ­ಕೊಡ­ಬೇಕು ಎಂದು ಸಮಿತಿ ಕಾರ್ಯಾಧ್ಯಕ್ಷ ಚಂದ್ರಶೇಖರ ಪುಟ್ಟಪ್ಪ ಕೋರಿದ್ದಾರೆ.ಶಾಸಕರು, ಸಂಸದರ ಅನುದಾನ ಸೇರಿದಂತೆ ಎಲ್ಲ ಇಲಾಖೆಗಳಲ್ಲಿನ ಅಂಗ ವಿಕಲರ ಅನುದಾನ ವಾರ್ಷಿಕ ಸುಮಾರು ₨ 250 ಕೋಟಿ ಲಭ್ಯವಾಗುತ್ತದೆ. ಆದರೆ, ಈ ಅನುದಾನ­ದಲ್ಲಿ ಶೇಕಡ 25ರಷ್ಟು ಸಹ ಖರ್ಚಾಗುತ್ತಿಲ್ಲ. ಈ ಅನುದಾನಸದ್ಭಳಕೆ­ಯಾಗಲು  ಅಂಗವಿಕಲರ ಬಗ್ಗೆ ನಿಖರ­ವಾದ ಅಂಕಿ–ಅಂಶ ಮತ್ತು ಸ್ಥಿತಿಗತಿ ಅಧ್ಯಯನ ಮಾಡಿದರೆ ಮಾತ್ರ ಸಾಧ್ಯ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)