ಬೆಂಗಳೂರು:  `ರಾಜ್ಯದಲ್ಲಿರುವ ಎಲ್ಲ ಅಂಗವಿಕಲ ಸಂಘ-ಸಂಸ್ಥೆಗಳು ಒಟ್ಟಾಗಿ ಬಂದು ಬೇಡಿಕೆಗಳನ್ನು ಮಂಡಿಸಿದರೆ ಆಗ ಸರ್ಕಾರಕ್ಕೆ ಕುಂಟು ನೆಪ ಹೇಳಲು ಬರುವುದಿಲ್ಲ. ಆಗ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕಾಗುತ್ತದೆ~ ಎಂದು ಕರ್ನಾಟಕ ರಾಜ್ಯ ವಿಕಲಚೇತನರ ರಕ್ಷಣಾ ಸಮಿತಿಯ ಗೌರವ ಅಧ್ಯಕ್ಷ ಪ್ರೊ. ಲಕ್ಷ್ಮಿನಾರಾಯಣ ಗುಪ್ತ ಹೇಳಿದರು.

ಈಚೆಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಅನೇಕ ಅಂಗವಿಕಲರ ಸಂಘ ಸಂಸ್ಥೆಗಳು ವಿಭಿನ್ನ ನಿಲುವನ್ನು ಹೊಂದಿ, ಬಗೆ ಬಗೆಯ ಬೇಡಿಕೆಗಳನ್ನು ಇಡುತ್ತಾ ಬಂದಿವೆ. ಇದರಿಂದ ರಾಜ್ಯ ಸರ್ಕಾರ ಅಂಗವಿಕಲರ ಬೇಡಿಕೆಗಳನ್ನು ಈಡೇರಿಸಲು ಹಿಂದೇಟು ಹಾಕುತ್ತಿದೆ. ಬದಲಿಗೆ ಎಲ್ಲರೂ ಒಗ್ಗಟ್ಟಾಗಿ ನಮ್ಮ ಬೇಡಿಕೆಗಳನ್ನು ಮುಂದಿಟ್ಟರೆ ಸರ್ಕಾರಕ್ಕೆ ಈಡೇರಿಸದೆ ಬೇರೆ ದಾರಿಯೇ ಇರುವುದಿಲ್ಲ~ ಎಂದರು.

`ರಾಜ್ಯ ಮಟ್ಟದ ಅಂಗವಿಕಲರ ಹಕ್ಕುಗಳ ಬೃಹತ್ ಜಾಗೃತಿ ಸಮಾವೇಶ, ಸಾಧನ ಸಲಕರಣೆಗಳ ವಿತರಣೆ ಹಾಗೂ ಉದ್ಘಾಟನಾ ಸಮಾರಂಭವನ್ನು ಇದೇ 22 ರಂದು ಬೆಳಿಗ್ಗೆ 10ಕ್ಕೆ ವಿವಿ ಪುರದ ಕರ್ನಾಟಕ ಜೈನ ಭವನದಲ್ಲಿ ಆಯೋಜಿಸಲಾಗಿದೆ~ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.