ಸತೀಶ್ ಅಮೆರಿಕದ ನ್ಯೂಜೆರ್ಸಿಯಲ್ಲಿರುವ ಕನ್ನಡದ ಮನಸು. `ಅಂತರಂಗ' ಅವರ ಬ್ಲಾಗ್ನ ಹೆಸರು. `ಭೌತಿಕವಾಗಿ ಒಂದು ನೆಲೆಯಲ್ಲಿರುವ ನಾವು ಹಾಗೂ ಸ್ವಚ್ಛಂದವಾಗಿ ವಿವರಿಸುವ ನಮ್ಮ ಮನಸು- ಇವುಗಳ ನಡುವಿನ ತಾಕಲಾಟ ಪೀಕಲಾಟವೇ ಇಲ್ಲಿನ ಬರಹಗಳು' ಎಂದವರು ತಮ್ಮ ಬ್ಲಾಗನ್ನು www.antaranga.blogspot.in ಕರೆದುಕೊಂಡಿದ್ದಾರೆ. ತಾಕಲಾಟ-ಪೀಕಲಾಟದ ಆಚೆಗೂ ಬರಹಗಳ ಸಾಧ್ಯತೆ ಇರುವುದು `ಅಂತರಂಗ'ದ ವಿಶೇಷ.

ಕನ್ನಡದಲ್ಲಿ ಬರೆಯುವುದು ಸತೀಶ್ ಅವರ ಪಾಲಿಗೆ ತನ್ನಿಂದ ದೂರವಾಗುತ್ತಿರುವಂತೆ ಕಾಣಿಸುವ ಭಾಷೆಯನ್ನು ಹತ್ತಿರ ಆಗಿಸಿಕೊಳ್ಳುವ ಒಂದು ಪ್ರಕ್ರಿಯೆ. 2005ರಿಂದಲೂ ಬ್ಲಾಗ್ ಬರವಣಿಗೆಯಲ್ಲಿ ಸಕ್ರಿಯವಾಗಿರುವ, ಇದೀಗ ಸ್ವಲ್ಪ ದಣಿದಂತೆ ಕಾಣಿಸುವ ಅವರಿಗೆ ಬ್ಲಾಗ್ ಬರವಣಿಗೆ ಕನ್ನಡದ ಮನಸ್ಸುಗಳೊಂದಿಗೆ ಒಡನಾಡಲು ದೊರೆತ ಅದ್ಭುತ ಅವಕಾಶ. ಕನ್ನಡವನ್ನು ಹತ್ತಿರವಾಗಿಸಿಕೊಳ್ಳುವ ಈ ಭಾಷಿಕ ಮತ್ತು ಭಾವುಕ ಪ್ರಕ್ರಿಯೆ ಅನಿವಾಸಿ ಕನ್ನಡಿಗರಿಗೆ, ಮುಖ್ಯವಾಗಿ ವಿದೇಶಗಳಲ್ಲಿನ ಕನ್ನಡಿಗರಿಗೆ ಅನಿವಾರ್ಯ ಅಗತ್ಯವಿರಬಹುದು. ಬಹುಶಃ ಈ ಕಾರಣದಿಂದಲೇ ದೊಡ್ಡ ಸಂಖ್ಯೆಯ ಕನ್ನಡ ಲೇಖಕರನ್ನು ಕನ್ನಡದ್ದಲ್ಲದ ನೆಲದಲ್ಲಿ ಕಾಣಬಹುದು. ಅವರಲ್ಲಿ ಎಷ್ಟು ಗಟ್ಟಿ ಎನ್ನುವುದು ಬೇರೆಯದೇ ಪ್ರಶ್ನೆ.

`ಅಂತರಂಗ'ದ ಬರಹಗಳಲ್ಲಿ ಬ್ಲಾಗಿಗರ ಬಹುಮುಖಿ ಆಸಕ್ತಿಗಳನ್ನು ಸ್ಪಷ್ಟವಾಗಿ ಗುರ್ತಿಸಬಹುದು. ರಾಜಕೀಯ, ಸಿನಿಮಾ, ಸಂಸ್ಕೃತಿ, ಸಾಹಿತ್ಯ- ಹೀಗೆ ವಿವಿಧ ವಿಷಯಗಳ ಬಗೆಗಿನ ಬರಹಗಳು ಬ್ಲಾಗಿನಲ್ಲಿವೆ. ಪಿ.ಬಿ. ಶ್ರೀನಿವಾಸ್ ಅವರ ಸಾವಿನ ಸುದ್ದಿಯ ಹಿನ್ನೆಲೆಯಲ್ಲಿ ಸ್ಟೀವ್ ಜಾಬ್ಸ್ ಅವರ ಹೇಳಿಕೆಯೊಂದನ್ನು ನೆನಪಿಸಿಕೊಂಡು, ಸೂತಕದ ಸಂದರ್ಭದಲ್ಲಿನ ನಮ್ಮ ಸ್ಪಂದನದ ಕುರಿತು ಸತೀಶ್ ದಾಖಲಿಸಿರುವ ಟಿಪ್ಪಣಿ ಗಮನಸೆಳೆಯುವಂತಿದೆ.

ಅಮೆರಿಕದಲ್ಲಿದ್ದೂ ಕರ್ನಾಟಕದಲ್ಲಿನ ವಿದ್ಯಮಾನಗಳ ಬಗ್ಗೆ ಅವರದು ಬಿಡುಗಣ್ಣು. ಇತ್ತೀಚಿನ ವಿಧಾನಸಭಾ ಚುನಾವಣೆಗಳಲ್ಲಿ ಲೋಕಸತ್ತಾ ಪಕ್ಷದ ಅಭ್ಯರ್ಥಿಗಳು ಕೆಲವು ಕ್ಷೇತ್ರಗಳಲ್ಲಿ ಗಣನೀಯ ಸಂಖ್ಯೆಯಲ್ಲಿ ಮತಗಳನ್ನು ಪಡೆದ ಸುದ್ದಿ ಮಾಧ್ಯಮಗಳಲ್ಲಿ ಅಷ್ಟೇನೂ ಸುದ್ದಿಯಾಗಲಿಲ್ಲ. ಈ ಬಗ್ಗೆ ಗಮನಸೆಳೆಯುವ ಅವರು, ವರ್ತಮಾನದ ರಾಜಕಾರಣ ಸ್ಥಿತಿಗತಿಯ ಬಗ್ಗೆ ತಮ್ಮದೇ ಆದ ವಿಚಾರಗಳನ್ನು ನಿವೇದಿಸುವ ಕ್ರಮ ಕುತೂಹಲಕರವಾಗಿದೆ.

ಸತೀಶ್ ಅವರ ಬರವಣಿಗೆ ಮಾದರಿಯ ಒಂದು ತುಣುಕು:

ಚುಕ್ಕು ಚುಕ್ಕು ಚುಕ್ಕು... ಸದ್ದು ಮಾಡುತ್ತಾ ಡೋವರ್ನಿಂದ ಹೊಬೋಕನ್ನ್ ಕಡೆಗೆ ಗಾಳಿಯನ್ನು ಎರಡು ಬಣವಾಗಿ ಇಬ್ಭಾಗಿಸಿಕೊಂಡು ಹಳಿಗಳ ಮೇಲೆ ಹುಳುವಾಗಿ ಹರಿದುಕೊಂಡು ಹೋಗುತ್ತಿದ್ದ ನಮ್ಮೂರಿನ ಲೋಕಲ್ ಟ್ರೇನು, ಬಹಳ ದಿನಗಳ ನಂತರ ಗೆಳೆಯನ ಮನೆಗೆ ಹೋಗುವ ಸಂಭ್ರಮವನ್ನು ನನ್ನ ಪಾಲಿಗೆ ತಂದುಕೊಟ್ಟಿತ್ತು. ಬೆಳ್ಳಂಬೆಳಿಗ್ಗೆಯೇ ಇಲ್ಲಿನ ರೇಡಿಯೋ ಸ್ಟೇಷನ್ನುಗಳು ಅರಚಿಕೊಂಡ ಪ್ರಕಾರ ಜಪಾನ್ನಲ್ಲಿ ದೊಡ್ಡದೊಂದು ಭೂಕಂಪ ಸಂಭವಿಸಿ ಅನೇಕ ಹಾನಿಗಳ ಬಗ್ಗೆ, ಸಾವುನೋವುಗಳ ಬಗ್ಗೆ ಮನದಲ್ಲಿ ಒಂದು ಥ್ರೆಡ್ ಕೊರೆಯ ತೊಡಗಿದರೆ, ಕೈಯಲ್ಲಿ ಅಪರೂಪಕ್ಕೆ ಹಿಡಿದುಕೊಂಡ ಡಿ.ಆರ್. ನಾಗರಾಜ್ ಅವರ `ಸಂಸ್ಕೃತಿ ಕಥನ' ಭಾರವಾಗತೊಡಗಿತ್ತು. ತೊಡೆಯ ಮೇಲೆ ಮಲಗಿ ಸುಮ್ಮನಿದ್ದ ಲ್ಯಾಪ್ಟಾಪ್ ತನ್ನ ಮಡಿಲಲ್ಲಿನ ಬಿಸಿ ಬ್ಯಾಟರಿಯಿಂದ ಸುಟ್ಟು ತನ್ನ ಇರುವನ್ನು ಬ್ಯಾಗಿನೊಳಗಿಂದಲೇ ಸ್ಪಷ್ಟಪಡಿಸಿತ್ತು.

ಬಹಳ ದಿನಗಳ ಗೆಳೆಯನೆಂದರೆ, ನಮ್ಮೂರಿನಿಂದ ಕೇವಲ ಐವತ್ತು ಮೈಲು ದೂರದಲ್ಲಿರುವ ನ್ಯೂಯಾರ್ಕ್ ನಗರ! ನಮ್ಮ ಟ್ರೇನು ನೆವರ್ಕ್, ಜರ್ಸಿ ಸಿಟಿ, ಹೊಬೋಕನ್ನ್ ಮೊದಲಾದ ಹೆಚ್ಚು ಜನಸಾಂದ್ರತೆಯುಳ್ಳ ಪ್ರದೇಶಗಳನ್ನು ತಲುಪಿದಂತೆಲ್ಲ ಹಳಿಗಳು, ಗಾಲಿಗಳು ಆಗಾಗ್ಗೆ ತಿಕ್ಕಿಕೊಳ್ಳುತ್ತಿದ್ದ ಶಬ್ದ ಹಾಗೂ ಕಿಟಕಿಯಿಂದ ಹೊರಗೆ ಕಾಣುವ ಚಿತ್ರಣಗಳು ಇಪ್ಪತ್ತು ವರ್ಷದ ಹಿಂದಿನ ಯಶವಂತಪುರ ಮತ್ತು ಮೆಜೆಸ್ಟಿಕ್ ನಡುವಿನ ರೈಲು ಪ್ರಯಾಣದ ಅನುಭವವನ್ನು ಮನದಲ್ಲಿ ತಾಳೆ ಹಾಕಿಕೊಳ್ಳುತ್ತಿದ್ದವು.

ನಾಗರಾಜ್ 1996ರ `ನೀನಾಸಂ'ನಲ್ಲಿ ಮಾಡಿದ ಭಾಷಣದ ಆವೃತ್ತಿಯ ನವ್ಯ ಸಾಹಿತ್ಯ ಸಂಸ್ಕೃತಿಯ ನಾಲ್ಕು ದೌರ್ಬಲ್ಯಗಳ ವಾಕ್ಯಗಳು ನನ್ನನ್ನು ಪದೇ ಪದೇ ಓದುವಂತೆ ಮಾಡಿ ಚಿಂತನೆಗೆ ತೊಡಗಿಸಿದವು. ನಾನು ಬಹಳವಾಗಿ ಹಚ್ಚಿಕೊಂಡ ಅಡಿಗ, ಅನಂತಮೂರ್ತಿ, ಲಂಕೇಶ, ಕಂಬಾರ, ತೇಜಸ್ವಿ, ಮೊದಲಾದವರು ಶಂಬಾ ಜೋಷಿ, ಬೇಂದ್ರೆ, ಪುತಿನ, ತೀನಂಶ್ರಿ ಮೊದಲಾದವರಿಗಿಂತ ಹೇಗೆ ಭಿನ್ನರು- ಇವರ ವಿದ್ವತ್ತಿನಿಂದ ಕನ್ನಡ ಸಂಸ್ಕೃತಿಯನ್ನು ಅಖಂಡವಾಗಿ ಪುನರ್ ನಿರ್ಮಾಣ ಮಾಡಬಲ್ಲ ಒಬ್ಬ ಚಿಂತಕನೂ ನಮ್ಮಲ್ಲಿ ಮೂಡಿಬರಲಿಲ್ಲ- ಎಂಬ ವಾಕ್ಯಗಳು ಕಾಫಿ ಹೀರದ ಶುಕ್ರವಾರದ ಮುಂಜಾನೆಯ ಬಹಳ ದಿನಗಳ ನಂತರ ಕನ್ನಡವನ್ನು ಓದುತ್ತಿದ್ದ ಮನಸ್ಸಿಗೆ ಭಾರವಾಗಿ ಕಂಡುಬಂದವು. ಡಿ.ಆರ್.ಎನ್. ಎನ್ನುವ ಕನ್ನಡದ ಪ್ರವಾದಿ ಯಾರು? ನಮ್ಮಿಂದ ಅವರು ಚಿಕ್ಕ ವಯಸ್ಸಿನಲ್ಲೇ ದೂರವಾದದ್ದು ಹೇಗೆ? ಯಾವಾಗಲಾದರೂ ಸಮಯ ಸಿಕ್ಕಾಗ ಅವರ ಸ್ನೇಹಿತ ಮತ್ತು ಪುಸ್ತಕದ ಸಂಪಾದಕರಾದ ಅಗ್ರಹಾರ ಕೃಷ್ಣಮೂರ್ತಿಯವರಿಗೆ ಫೋನ್ ಮಾಡಬೇಕು, 1997ರಲ್ಲಿ ನಾಗರಾಜ್ ಅವರು ಚಿಕಾಗೋದಲ್ಲಿ ಉಪನ್ಯಾಸ ಮಾಡಿದ್ದ ಆಡಿಯೋ-ವೀಡಿಯೋಗಳಿದ್ದರೆ ಹುಡುಕಬೇಕು... ಹೀಗೆ ಅನೇಕ ಅನೇಕ ಗೊಂದಲಗಳು ತಲೆಯಲ್ಲಿ ಸುತ್ತಿಕೊಳ್ಳತೊಡಗಿದವು.

ಮೇಲಿನ ಬರಹದ ತುಣುಕು ಸತೀಶ್ ಅವರ ಬರವಣಿಗೆಯ ಸಾಧ್ಯತೆ ಮತ್ತು ಮಿತಿ ಎರಡನ್ನೂ ಸೂಚಿಸುವಂತಿದೆ. ಅಮೆರಿಕ ಮತ್ತು ಕರ್ನಾಟಕದ ನಡುವೆ ಜೀಕುತ್ತಿರುವ ಅನೇಕ ಕ್ರಿಯಾಶೀಲ ವ್ಯಕ್ತಿಗಳ ಸಾಲಿನಲ್ಲಿ ಸತೀಶ್ ಅವರನ್ನೂ ಗುರ್ತಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.