ರಾಜಕೀಯ ಧುರೀಣರೆಲ್ಲ ಸಭೆ ಸೇರಿದರು. ನವೆಂಬರ್ 14ರ ಮಕ್ಕಳ ದಿನವನ್ನು ಹೇಗೆ ಆಚರಿಸಬೇಕೆಂಬುದು ಸಭೆಯ ಅಜೆಂಡಾ.

‘ನಾನಂತೂ ನನ್ನ ಮಗನನ್ನು ನಮ್ಮ ಪಕ್ಷದ ರಾಜ್ಯಾಧ್ಯಕ್ಷ ನನ್ನಾಗಿ ಮಾಡಿದ್ದೇನೆ’ ಚೂಪಾದ ಬಿಳಿ ಮೀಸೆಯಡಿ ನಸುನಕ್ಕರು ಹಿರಿಯ ರಾಜಕಾರಣಿ.

‘ನಾನು ರಾಷ್ಟ್ರಾಧ್ಯಕ್ಷ ಆಗಿರೋದಷ್ಟೇ ಅಲ್ಲ, ನನ್ನ ಮಗನಿಗೂ ಮಂತ್ರಿ ಸ್ಥಾನದ ಗಿಫ್ಟ್ ಕೊಟ್ಟಿದ್ದೇನೆ’ ಗೋಡಂಬಿ ಮೆಲ್ಲುತ್ತಾ ಹೇಳಿದರು ಮತ್ತೊಬ್ಬ ರಾಜಕಾರಣಿ.

ಪಂಚೆ ಎತ್ತಿಕಟ್ಟಿ ನಿಂತ ಮಾಸ್ ಲೀಡರ್ ಒಬ್ಬರು, ‘ನಾನು ಸಿ.ಎಂ. ಆಗಿರೋದಲ್ಲದೆ ನನ್ನ ಮಗನನ್ನ ಎಂಎಲ್ಸಿ ಮಾಡಿದ್ದೇನೆ. ಉಳಿದ ನಾಯಕರ ಮಾತಿರಲಿ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಿಗೂ ನನ್ನ ಮಗ ಕೇರ್ ಮಾಡಲ್ಲ’ ಎಂದರು ಹೆಮ್ಮೆಯಿಂದ.

‘ನಿಮ್ಮದೆಲ್ಲ ಏನ್ ಬಿಡಿ, ಸೆಂಟ್ರಲ್ನಲ್ಲಿ ನಾನು ಮಿನಿಸ್ಟರ್ ಆಗಿದೀನಿ. ಜೊತೆಗೆ, ನನ್ನ ಮಗನನ್ನ ನಮ್ಮ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ಮಾಡಿದೀವಿ. ನೀವೆಲ್ಲ ಗೆದ್ದವರಿಗೆ ಅವಕಾಶ ಕೊಟ್ಟಿದೀರಿ. ಆದರೆ, ಈವರೆಗೆ ಒಂದೇ ಒಂದು ಎಲೆಕ್ಷನ್ ಗೆಲ್ಲದ ನನ್ನ ಮಗನಿಗೆ ಹುದ್ದೆ ಕೊಡಿಸಿರೋ ನಾನೇ ಗ್ರೇಟ್’ ಬೆವರು ಒರೆಸಿಕೊಳ್ಳುತ್ತಾ ಹೇಳಿದರು ಮತ್ತೊಬ್ಬ ಲೀಡರ್.

ಹಿರಿಯ ನಾಯಕರೊಬ್ಬರು, ‘ಮಕ್ಕಳ ದಿನಾಚರಣೆ’ ಬಗ್ಗೆ ಅಂದರೆ ನಿಮ್ಮ ನಿಮ್ಮ ಮಕ್ಕಳ ಏಳಿಗೆ ಬಗ್ಗೆ ಅಲ್ಲ, ದಯವಿಟ್ಟು ರಾಜ್ಯದ ಮಕ್ಕಳ ಬಗ್ಗೆ ಮಾತನಾಡಬೇಕು ತಾವೆಲ್ಲರೂ’ ಎಂದು ವಿಷಾದದ ಧ್ವನಿಯಲ್ಲಿ ವಿನಂತಿಸಿದರು.

‘ನೋಡ್ರಿ, ಇಲ್ಲಿ ಗಾಡ್ ‘ಫಾದರ್’ ಇದ್ರೆ ಮಾತ್ರ ಅವಕಾಶ. ಗಾಡೇ ಫಾದರ್ ಅಂದ್ಕೊಂಡವರು ಮುಳ್ಳಂದಿ, ಕಾಡುಪಾಪ ಎಂದು ಬೈದಾಡಿಕೊಂಡು ಇರಬೇಕಷ್ಟೇ’ ಎಂದು ಬೇಸರಿಸಿದರು ಹಿರಿಯರೊಬ್ಬರು.

‘ನೋಡ್ರಿ ಸೀನಿಯರ್, ಒಂದು ಪಕ್ಷದ ಕಾರ್ಯಕರ್ತರು ಪಕ್ಷ, ಸಿದ್ಧಾಂತ ಅಂತ ಫೇಸ್ಬುಕ್ನಲ್ಲಿ ಹೊಡೆದಾಡೋದು, ಮತ್ತೊಂದು ಪಕ್ಷದ ಕಾರ್ಯಕರ್ತರು ದೊಣ್ಣೆ ಹಿಡ್ಕೊಂಡು ರಸ್ತೇಲಿ ಓಡಾಡೋದು ಮಾಡಿದರೆ ಹೇಗೆ ಉದ್ಧಾರ ಆಗ್ತಾರೆ. ಎಲ್ಲರೂ ನಮ್ಮಂಗೆ ಅವರವರ ಮಕ್ಕಳ ಬಗ್ಗೆ ಮಾತ್ರ ಯೋಚನೆ ಮಾಡೋದು ಕಲಿತರೆ ಅದೇ ನಿಜವಾದ ಮಕ್ಕಳ ದಿನಾಚರಣೆ’ ಎನ್ನುತ್ತಾ ಮೂರೂ ಪಕ್ಷದ ಧುರೀಣರು ಪರಸ್ಪರರ ಹೆಗಲ ಮೇಲೆ ಕೈ ಹಾಕಿಕೊಂಡು ಹೊರಹೋದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.