ಗುರುವಾರ , ಜೂನ್ 17, 2021
21 °C

ಅಂತರಕಾಲೇಜು ಕ್ರೀಡಾಕೂಟ ನಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮಂಡ್ಯದ ಸರ್ಕಾರಿ ಮಹಾವಿದ್ಯಾಲಯದ (ಸ್ವಾಯತ್ತ) ಆಶ್ರಯದಲ್ಲಿ ಮಾರ್ಚ್ 7ರಿಂದ 9ರವರೆಗೆ ಮೈಸೂರು ವಿಶ್ವವಿದ್ಯಾಲಯದ ಅಂತರಕಾಲೇಜು ಪುರುಷರ ಕ್ರೀಡಾಕೂಟ ನಡೆಯಲಿದೆ.ಮೈಸೂರು ವಿವಿಯ ಐದು ವಲಯಗಳಾದ ಚಾಮುಂಡಿ (ಮೈಸೂರು ನಗರ), ಕೃಷ್ಣರಾಜ (ಮೈಸೂರು ಗ್ರಾಮಾಂತರ), ಚಾಮರಾಜ (ಚಾಮರಾಜನಗರ ಜಿಲ್ಲೆ), ಮಾಂಡವ್ಯ (ಮಂಡ್ಯ ಜಿಲ್ಲೆ) ಮತ್ತು ಮಲೆನಾಡು (ಹಾಸನ ಜಿಲ್ಲೆ) ಕಾಲೇಜುಗಳ ಆಟಗಾರರು ಭಾಗವಹಿಸುವರು.50 ಕಾಲೇಜುಗಳಿಂದ 1500 ಕ್ರೀಡಾಪಟುಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸುವರು. ಒಟ್ಟು 14 ಕ್ರೀಡೆಗಳು ನಡೆಯಲಿವೆ. ಬ್ಯಾಡ್ಮಿಂಟನ್, ಬಾಲ್‌ಬ್ಯಾಡ್ಮಿಂಟನ್, ಬ್ಯಾಸ್ಕೆಟ್‌ಬಾಲ್, ಚೆಸ್. ಕ್ರಿಕೆಟ್, ಫುಟ್‌ಬಾಲ್, ಹ್ಯಾಂಡ್‌ಬಾಲ್, ಹಾಕಿ, ಕಬಡ್ಡಿ, ಕೊಕ್ಕೊ, ಸಾಫ್ಟ್‌ಬಾಲ್, ಟೇಬಲ್ ಟೆನಿಸ್, ವಾಲಿಬಾಲ್, ಟೆನಿಸ್ ಕ್ರೀಡೆಗಳು ನಡೆಯಲಿವೆ.  ವಲಯಮಟ್ಟದಲ್ಲಿ ವಿಜೇತರಾದ ಕಾಲೇಜುಗಳ ವಿವಿಧ ತಂಡಗಳು ಮಾರ್ಚ್ 6ರಂದು ಸಂಜೆ 4.30ಕ್ಕೆ ಮಹಾವಿದ್ಯಾಲಯದಲ್ಲಿ ವರದಿ ಮಾಡಿಕೊಳ್ಳಬೇಕು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.