ಭಾನುವಾರ, ಮೇ 16, 2021
22 °C

ಅಂತರರಾಷ್ಟ್ರೀಯ ದಂತ ಕಸಿ ಸಮಾವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಇಂಪ್ಲಾಂಟ್ ಸ್ಟಡಿ ಗ್ರೂಪ್ ಸಂಸ್ಥೆಯು ಅಂತರರಾಷ್ಟ್ರೀಯ ದಂತ ಕಸಿ ತಂತ್ರಜ್ಞಾನ ಸಂಸ್ಥೆಯ ಸಹಯೋಗದೊಂದಿಗೆ ಪ್ರಥಮ ದಕ್ಷಿಣ ಏಷ್ಯಾ ದಂತ ಕಸಿ ಸಮಾವೇಶವನ್ನು ಇದೇ 14 ಮತ್ತು 15 ರಂದು ಗ್ರ್ಯಾಂಡ್ ಮಗರತ್ ಹೋಟೆಲ್‌ನಲ್ಲಿ ಏರ್ಪಡಿಸಿದೆ~ ಎಂದು ಗ್ರೂಪ್‌ನ ಅಧ್ಯಕ್ಷ ಡಾ.ಗಿರೀಶ್‌ರಾವ್ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ದಂತಕಸಿ ಚಿಕಿತ್ಸಾ ವಿಧಾನವು ಪಾಶ್ಚಿಮಾತ್ಯ ದೇಶಗಳಲ್ಲಿ ಸುಮಾರು 50 ವರ್ಷಗಳಿಂದ ಪ್ರಚಲಿತದಲ್ಲಿದೆ. ಆದರೆ, ಭಾರತದಲ್ಲಿ 10 ವರ್ಷಗಳಿಂದ ಈಚೆಗೆ ಕಾಲಿಡುತ್ತಿದೆ.ವಿವಿಧ ದಂತ ಚಿಕಿತ್ಸಾ ವಿಧಾನಗಳಿಂದ ಹಲವಾರು ರೀತಿಯ ದಂತ ಹಾನಿಗಳಿಗೆ ಸ್ವಾಭಾವಿಕ ಹಲ್ಲುಗಳಂತೆಯೇ ಉಪಯೋಗಿಸಬಹುದಾದ ರೀತಿಯಲ್ಲಿಯೇ ದಂತ ಚಿಕಿತ್ಸಾ ವಿಧಾನದಿಂದ ಸರಿಪಡಿಸಬಹುದಾಗಿದೆ~ ಎಂದು ವಿವರಿಸಿದರು.`ಈ ಸಮಾವೇಶದಲ್ಲಿ ಬೇರೆ ಬೇರೆ ದೇಶಗಳಿಂದ ದಂತ ವೈದ್ಯರು ಭಾಗವಹಿಸಲಿದ್ದಾರೆ. ವಿವಿಧ ದಂತ ಕಸಿ ವಿಧಾನಗಳಲ್ಲಿ ಪರಿಣತಿ ಕಲ್ಪಿಸುವ ಸಲುವಾಗಿ ಕಾರ್ಯಾಗಾರ ಏರ್ಪಡಿಸಲಾಗಿದೆ~ ಎಂದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.