ಗುರುವಾರ , ಜೂನ್ 17, 2021
27 °C

ಅಂತರಿಕ್ಷ ತ್ಯಾಜ್ಯ ನಿರ್ವಹಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮೆರಿಕದ ಬಾಹ್ಯಾಕಾಶ ಅಧ್ಯಯನ ಸಂಸ್ಥೆ `ನಾಸಾ~ ಅಂತರಿಕ್ಷಕ್ಕೆ ಹಾರಿ ಬಿಟ್ಟ ಉಪಗ್ರಹವೊಂದು ಕಳೆದ ವರ್ಷಾಂತ್ಯದಲ್ಲಿ ಭೂಮಿಗೆ ಅಪ್ಪಳಿಸಿದ್ದು ನೆನಪಿರಬಹುದು. ಮಂಗಳ ಗ್ರಹ ಮತ್ತು ಅದರ ಎರಡು ಸ್ವಾಭಾವಿಕ ಉಪಗ್ರಹಗಳಲ್ಲಿ ಒಂದಾದ `ಫೊಬೋಸ್~ ಅಧ್ಯಯನಕ್ಕಾಗಿ ಕಳುಹಿಸಿದ್ದ `ಫೊಬೋಸ್ ಗ್ರಂಟ್~  ನೌಕೆ, ದಾರಿ ಮಧ್ಯೆ ಸ್ಫೋಟ ಗೊಂಡು ಭೂಮಿಯತ್ತ ಧಾವಿಸಿದ ಸುದ್ದಿಯನ್ನೂ ಓದಿರಬಹುದು.

ಅಂತರಿಕ್ಷದಲ್ಲಿರುವ ಕೃತಕ ಆಕಾಶಕಾಯಗಳ ಅವಶೇಷಗಳು ಭೂಮಿಗೆ  ಇತ್ತೀಚೆಗೆ ಅಪ್ಪಳಿಸಿರುವ ಎರಡು ನಿದರ್ಶನಗಳಿವು. 

ಉಪಗ್ರಹ, ರಾಕೆಟ್, ಗಗನನೌಕೆಗಳ ಅದೆಷ್ಟೋ ಅವಶೇಷಗಳು ಅಂತರಿಕ್ಷದಲ್ಲಿ ಅನಾಥವಾಗಿ ಸುತ್ತುತ್ತಿವೆ. ಗಾತ್ರದಲ್ಲಿ ಈ ಕಸದ ಚೂರುಗಳು ತುಂಬಾ ಚಿಕ್ಕವು. ಇವುಗಳಿಂದಾಗಿ ಭೂಮಿಗೆ ಯಾವುದೇ ರೀತಿಯ ಹಾನಿ ಆಗದಿದ್ದರೂ, ಕಕ್ಷೆಯಲ್ಲಿ ಅನಾಥವಾಗಿ ಸುತ್ತುತ್ತಿರುವ ಇವುಗಳು, ಕಾರ್ಯನಿರ್ವಹಿಸುವ ಕೃತಕ ಉಪಗ್ರಹಗಳು, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಕಾರ್ಯನಿರ್ವಹಣೆಗೆ ಅಡ್ಡಿಯನ್ನುಂಟು ಮಾಡಬಹುದು ಎಂಬ ಆತಂಕ ವಿಜ್ಞಾನಗಳಲ್ಲಿದೆ.ಇದಕ್ಕೆ ಪೂರಕವೆಂಬಂತೆ, ಶೀಘ್ರದ್ಲ್ಲಲಿಯೇ ಈ ಅವಶೇಷಗಳನ್ನು ತೆರವುಗೊಳಿಸಲು ಯಾವುದೇ ಕ್ರಮ ಕೈಗೊಳ್ಳದೇ ಹೋದರೆ ಭೂಮಿಯ ಕೆಳ ಕಕ್ಷೆಯು ನಮ್ಮ ಬಳಕೆಗೆ ದೊರಕದಂತೆ ಆಗಬಹುದು ಎಂದು ರಾಷ್ಟ್ರೀಯ ಸಂಶೋಧನಾ ಮಂಡಳಿಯೂ (ನ್ಯಾಷನಲ್ ರೀಸರ್ಚ್ ಕೌನ್ಸಿಲ್)  ಎಚ್ಚರಿಸಿದೆ.

 

ಈ ವಿಚಾರವನ್ನು `ನಾಸಾ~ ಗಂಭೀರವಾಗಿ ಪರಿಣಮಿಸಿದೆ. ಅಂತರಿಕ್ಷದಲ್ಲಿರುವ ಕಸದ ಚೂರುಗಳನ್ನು ನಾಶ ಮಾಡಲು/ತೆರವುಗೊಳಿಸಲು ಏನು ಮಾಡಬಹುದು ಎಂಬುದರ ಬಗ್ಗೆ ಅದು ಚಿಂತನೆ ನಡೆಸಿದೆ.`ಇದು ಅತ್ಯಂತ ಪ್ರಮುಖ ವಿಚಾರವಾಗಿದ್ದು, ನಾವು ಇದನ್ನು ಗಂಭೀರವಾಗಿ ಪರಿಗಣಿಸಿದ್ದೆೀವೆ. ಬಾಹ್ಯಾಕಾಶದಲ್ಲಿರುವ  ದೊಡ್ಡ ಗಾತ್ರದ ನಿಷ್ಪ್ರಯೋಜಕ ವಸ್ತುಗಳು ಪರಸ್ಪರ ಡಿಕ್ಕಿ ಹೊಡೆದು ಸಣ್ಣ ಸಣ್ಣ ಚೂರುಗಳಾಗುವ ಮೊದಲು ಅವುಗಳನ್ನು ತೆರವುಗೊಳಿಸುವ ದಾರಿಗಳ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ~ ಎಂದು `ನಾಸಾ~ದ ಮುಖ್ಯ ತಂತ್ರಜ್ಞ ಮಾಸನ್ ಎ ಪೆಕ್‌ಹೇಳಿದ್ದಾರೆ. ಈ ನಿಟ್ಟಿನಲ್ಲಿ ಸಂಶೋಧಕರು ಪರಿಹಾರಗಳನ್ನು ಕಂಡು ಕೊಳ್ಳಲು ಅಧ್ಯಯನ ನಡೆಸುತ್ತಿದ್ದಾರೆ. ಬಲೆ ಬಳಸಿ ಕಸದ ಚೂರುಗಳನ್ನು ಹಿಡಿದು ಅವುಗಳನ್ನು ಭೂವಾತಾವರಣಕ್ಕೆ ತಂದು ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ಉರಿಸುವುದು, ಇದೇ ಮಾದರಿಯಲ್ಲಿ ಬಲೂನುಗಳನ್ನು ಬಳಸಿ ಅವಶೇಷಗಳನ್ನು ಭೂವಾತಾವರಣಕ್ಕೆ ತಂದು ಅವುಗಳು ಹೊತ್ತಿ ಉರಿಯುವಂತೆ ಮಾಡುವುದು ಮತ್ತು ಭೂಮಿಯಿಂದ ಲೇಸರ್ ಕಿರಣಗಳನ್ನು ಬಿಟ್ಟು ಅವಶೇಷಗಳನ್ನು ಸುರಕ್ಷಿತ ಕಕ್ಷೆಗೆ ಅಥವಾ ಭೂವಾತಾವರಣಕ್ಕೆ ಎಳೆದು ತರುವುದು ಸೇರಿದಂತೆ ಹಲವು ಪರಿಹಾರ ಸೂತ್ರಗಳು ಸಂಶೋಧಕರ ಮನದಲ್ಲಿದೆ.ಸ್ವಿಟ್ಜರ್‌ರ್ಲೆಂಡ್‌ನ ತಜ್ಞರು ನಡೆಸಿರುವ ಪ್ರಯತ್ನವೊಂದನ್ನು ಇಲ್ಲಿ ಹೇಳಬೇಕು. ಬಾಹ್ಯಾಕಾಶ ಕಕ್ಷೆಯಲ್ಲಿ ಸ್ವಿಟ್ಜರ್‌ರ್ಲೆಂಡ್‌ಗೆ ಸೇರಿದ ಎರಡು ಉಪಗ್ರಹಗಳಿವೆ. ಈ ಉಪಗ್ರಹಗಳು ತಮ್ಮ ಕಾರ್ಯ ಸ್ಥಗಿತಗೊಳಿಸಿದ ಬಳಿಕ ಅವುಗಳ ನಿರ್ವಹಣೆಯ ಕುರಿತಾಗಿ ಅದು ಈಗಲೇ ಕಾರ್ಯಪ್ರವೃತ್ತವಾಗಿದೆ.

 

ಲೋಸನ್‌ನಲ್ಲಿರುವ ಫೆಡರಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ತಜ್ಞರು ವ್ಯಾಕ್ಯುಮ್ ಕ್ಲೀನರ್ ಹೋಲುವ `ಕ್ಲೀನ್‌ಸ್ಪೇಸ್ ವನ್~ ಎಂಬ ಉಪಕರಣವೊಂದನ್ನು ರೂಪಿಸುತ್ತಿದ್ದಾರೆ. ಒಟ್ಟು 1.1 ಕೋಟಿ ಡಾಲರ್ (ಅಂದಾಜು 50 ಕೋಟಿ ರೂಪಾಯಿ) ವೆಚ್ಚದಲ್ಲಿ ತಯಾರಿಸಲಾಗುತ್ತಿರುವ ಈ ಸಾಧನ, ನಾವು ಮನೆಯಲ್ಲಿ ಬಳಸುವ ವ್ಯಾಕ್ಯುಮ್ ಕ್ಲೀನರ್‌ನಂತೆ ಕಾರ್ಯನಿರ್ವಹಿಸುತ್ತದೆ ಎಂದು ಹೇಳುತ್ತಾರೆ ತಜ್ಞರು.ಅಂತರಿಕ್ಷದಲ್ಲಿರುವ ಕಸದ ಚೂರಿನ ಬಳಿಗೆ ತೆರಳುವ ಈ ಸಾಧನ, ಚೂರುಗಳನ್ನು ತನ್ನೊಳಗೆ ಸೆಳೆದುಕೊಳ್ಳುತ್ತದೆ. ಬಳಿಕ ಎರಡೂ ಕೂಡ ಹೊತ್ತಿ ಉರಿಯುವಂತೆ ಮಾಡುವ ಯೋಜನೆ ಸ್ವಿಸ್ ತಜ್ಞರದು.ಹಾಗೆ ನೋಡಿದರೆ, ಬಾಹ್ಯಾಕಾಶದಲ್ಲಿರುವ ಅವಶೇಷಗಳ ಸಮಸ್ಯೆ ಇಂದು ನಿನ್ನೆಯದಲ್ಲ. ಈ ಸಮಸ್ಯೆಯನ್ನು ವಿಶ್ವದಾದ್ಯಂತ ಗುರುತಿಸುವುದು ಕೆಸ್ಲರ್ ಸಿಂಡ್ರೋಮ್ ಎಂದು. ಡೊನಾಲ್ಡ್ ಜೆ. ಕೆಸ್ಲರ್ ಎಂಬ `ನಾಸಾ~ ತಂತ್ರಜ್ಞ 1978ರಲ್ಲಿ ಈ ಸಮಸ್ಯೆಯ ಬಗ್ಗೆ ವಿಶ್ವದ ಗಮನಸೆಳೆದಿದ್ದರು.

 

ಅಂತರಿಕ್ಷದಲ್ಲಿರುವ ಅವಶೇಷಗಳು ಭವಿಷ್ಯದಲ್ಲಿ ಉಂಟು ಮಾಡಬಹುದಾದ ವ್ಯತಿರಿಕ್ತ ಪರಿಣಾಮಗಳ ಕುರಿತಾಗಿಯೂ ಅವರು ಎಚ್ಚರಿಕೆ ನೀಡಿದ್ದರು. ಪ್ರಸ್ತುತ, ಈ ಕಸದ ಚೂರುಗಳು ಪ್ರತಿ ಗಂಟೆಗೆ 17,000 ಮೈಲು ವೇಗದಲ್ಲಿ ಬಾಹ್ಯಾಕಾಶದಲ್ಲಿ ಚಲಿಸುತ್ತಿದ್ದು, ಅವುಗಳ ನಡುವೆ ಪರಸ್ಪರ ಅಪಘಾತ ಸಂಭವಿಸಿದಾಗ ಚೂರುಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುತ್ತವೆ.ಇವುಗಳು ಚಂಡಮಾರುತಗಳ ಮೇಲೆ ನಿಗಾ ಇಡುವ ಉಪಗ್ರಹಗಳು, ಜಿಪಿಎಸ್ ವ್ಯವಸ್ಥೆ, ಸೇನಾ ಮೇಲ್ವಿಚಾರಣೆ ವ್ಯವಸ್ಥೆಗಳನ್ನು ನಿರ್ವಹಿಸುವ ಉಪಗ್ರಹಗಳ ಕಾರ್ಯನಿರ್ವಹಣೆಗೆ ಬೆದರಿಕೆ ಒಡ್ಡುತ್ತಿವೆ.ನಿಷ್ಕ್ರಿಯಗೊಂಡಿರುವ ಉಪಗ್ರಹಗಳೂ ಸೇರಿದಂತೆ ಬಾಹ್ಯಾಕಾಶದಲ್ಲಿ 20,000 ಅಧಿಕ ಕಸದ ಚೂರುಗಳು ಇರುವುದನ್ನು ಅಮೆರಿಕದ ವಾಯುಪಡೆ ಪತ್ತೆಹಚ್ಚಿದೆ. ಅಪಾಯದ ಕಕ್ಷೆ...

ಟೆಕ್ಸಾಸ್ ಎ ಆಂಡ್ ಎಂ ವಿಶ್ವವಿದ್ಯಾಲಯದ ಏರೊಸ್ಪೇಸ್ ಎಂಜಿನಿಯರಿಂಗ್ ಫ್ರೊಫೆಸರ್ ಜಾನ್ ಎಲ್. ಜಂಕಿನ್ಸ್ ಪ್ರಕಾರ, ಅಂತರಿಕ್ಷಕ್ಕೆ ತೆರಳುವ ಗಗನಯಾತ್ರಿಗಳಿಗೆ ಇಂತಹ ಬೃಹತ್ತಾದ ಅವಶೇಷಗಳು ಭಾರಿ ಅಪಾಯವನ್ನು ಒಡ್ಡಬಹುದು. ಇವುಗಳ ಇರುವಿಕೆಯಿಂದಾಗಿ ಭವಿಷ್ಯದಲ್ಲಿ ನಡೆಯುವ ಯಾವುದೇ ಬಾಹ್ಯಾಕಾಶ ಉಡಾವಣೆ ಯಶಸ್ವಿಯಾಗಲಿದೆ ಎಂದು ದೃಢವಾಗಿ ಹೇಳಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ ಅವರು.ಅಂತರಿಕ್ಷದಲ್ಲಿ ಅಮೆರಿಕಕ್ಕೆ ಸೇರಿದ ಬೃಹತ್ ಗಾತ್ರದ 500 ಕಸದ ಚೂರುಗಳಿವೆ. ಇದರ ಎರಡು ಪಟ್ಟು ಹೆಚ್ಚು ಅವಶೇಷದ ಮಾಲೀಕತ್ವವನ್ನು ರಷ್ಯಾ ಹೊಂದಿದೆ ಎಂದು ಜಂಕಿನ್ಸ್ ಹೇಳುತ್ತಾರೆ. ಪ್ರತಿ ವರ್ಷ ಕನಿಷ್ಠ 5 ರಿಂದ 6 ಗಾತ್ರದಲ್ಲಿ ದೊಡ್ಡದಾದ ಅವಶೇಷಗಳನ್ನು ತೆರವುಗೊಳಿಸಿದರೂ ಸಾಕು. ಇವುಗಳಿಂದಾಗಿ ಉಂಟಾಗುವ ಪರಿಣಾಮಗಳನ್ನು ತಡೆಯಬಹುದು ಎಂದು ಅವರು ಅಭಿಪ್ರಾಯ ಪಡುತ್ತಾರೆ.ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ `ನಾಸಾ~, ಈ ಸಂಬಂಧ ನಡೆಸುವ ಸಂಶೋಧನೆಗೆ ಆರ್ಥಿಕ ನೆರವು ನೀಡಲು ಆರಂಭಿಸಿದೆ. ದಕ್ಷಿಣ ಕರೊಲಿನಾದಲ್ಲಿರುವ ಸ್ಟಾರ್ ಟೆಕ್ನಾಲಜಿ ಆಂಡ್ ರಿಸರ್ಚ್ ಎಂಬ ಕಂಪೆನಿಗೆ ಎಲೆಕ್ಟ್ರೊಡೈನಾಮಿಕ್ ಡೆಬ್ರಿಸ್ ಎಲಿಮಿನೇಟರ್  (ಇಡಿಡಿಇ) ಎಂಬ ನೌಕೆಯನ್ನು ಅಭಿವೃದ್ಧಿ ಪಡಿಸಲು ನಾಸಾ 19 ಲಕ್ಷ ಡಾಲರ್ ನೆರವು ನೀಡಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.