ಭಾನುವಾರ, ಮೇ 9, 2021
27 °C

ಅಂತರ್ಜಾಲದಲ್ಲಿ ಸಿಂಘ್ವಿ ಸಿ.ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): ಕಾಂಗ್ರೆಸ್ ನಾಯಕ ಮತ್ತು ಸುಪ್ರೀಂಕೋರ್ಟ್ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರನ್ನು ಒಳಗೊಂಡಿದೆ ಎನ್ನಲಾದ ವಿವಾದಾತ್ಮಕ ಲೈಂಗಿಕ ಸಿ.ಡಿ ಬಹು ಬೇಗ ಪ್ರಚಾರ ಮತ್ತು ಬೇಡಿಕೆ ಪಡೆದುಕೊಂಡಿದ್ದು, ಸಾಮಾಜಿಕ ಸಂಪರ್ಕ ಜಾಲ ತಾಣ ಮತ್ತು ಅಂತರ್ಜಾಲಗಳಲ್ಲಿ ಹರಿದಾಡುತ್ತಿದೆ.ಅಂತರ್ಜಾಲದಲ್ಲಿ ಈ ದೃಶ್ಯಾವಳಿ ಹಾಕಿದ ಎರಡೇ ದಿನಗಳಲ್ಲಿ ಸಾವಿರಾರು ಜನರು ಇದನ್ನು ವೀಕ್ಷಿಸ್ದ್ದಿದಾರೆ.

 ಸಿ.ಡಿಯಲ್ಲಿರುವ ದೃಶ್ಯಗಳನ್ನು ತಿರುಚಲಾಗಿದೆ ಎಂದು ಸಿ.ಡಿ ನಿರ್ಮಿಸಿದ ವ್ಯಕ್ತಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಒಪ್ಪಿಕೊಂಡಿದ್ದಾರೆ. ಆದರೆ, ಮಾಧ್ಯಮಗಳೇ ನ್ಯಾಯಾಲಯಗಳಂತೆ ವರ್ತಿಸುತ್ತಿವೆ ಎಂದು ಸಿಂಘ್ವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಸಿಂಘ್ವಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ಸುಮಾರು 13 ನಿಮಿಷಗಳ ಈ ಸಿ.ಡಿ.ಯನ್ನು ಶುಕ್ರವಾರ ಯೂ-ಟ್ಯೂಬ್‌ನಲ್ಲಿ ಹಾಕಲಾಗಿದ್ದು ಎರಡೇ ದಿನಗಳಲ್ಲಿ 9 ಸಾವಿರಕ್ಕೂ ಹೆಚ್ಚು ಜನರು ಇದನ್ನು ವೀಕ್ಷಿಸಿದ್ದಾರೆ. ಸಿಂಘ್ವಿ ಅವರ ಮಾಜಿ ಕಾರು ಚಾಲಕ ಈ ಸಿ.ಡಿ.ಯನ್ನು ತಯಾರಿಸಿದ್ದಾನೆ ಎಂದು ಮಾಧ್ಯಮಗಳು ಹೇಳಿವೆ.   ಟ್ವಿಟ್‌ವಿಡ್ ತಾಣದಲ್ಲಿ 34 ಸಾವಿರ ಜನರು ಈ ವಿಡಿಯೊ ದೃಶ್ಯಾವಳಿ ವೀಕ್ಷಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.